ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮೇ 3 ರವರೆಗೆ ಭಾರತ ಲಾಕ್ಡೌನ್ನಲ್ಲಿರಲಿದೆ. ಹೀಗಾಗಿ ಕರ್ನಾಟಕದಲ್ಲಿ ಬಿಎಸ್- 4 ವಾಹನಗಳ ನೋಂದಣಿಗೆ ವಿನಾಯಿತಿ ನೀಡಲಾಗುತ್ತಿದ್ದು, ರಾಜ್ಯ ಸಾರಿಗೆ ಇಲಾಖೆಯು ಈ ಬಗ್ಗೆ ಆದೇಶ ಹೊರಡಿಸಿದೆ.
ನೋಂದಣಿಗೆ ಏಪ್ರಿಲ್ 30 ವರೆಗೆ ಅವಕಾಶ ಕಲ್ಪಸಿರುವ ಆರ್ಟಿಓ, ನೋಂದಾಯಿತ ಪ್ರಾಧಿಕಾರದಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಿಎಸ್-4 ವಾಹನಗಳ ನೋಂದಣಿಗೆ ಮಾರ್ಚ್ 31ಕ್ಕೆ ಡೆಡ್ಲೈನ್ ನೀಡಲಾಗಿತ್ತು. ಏಪ್ರಿಲ್ 1 ರಿಂದ BS - 4 ವಾಹನಗಳ ನೋದಣಿ ಹಾಗೂ ಮಾರಾಟ ಎರಡರನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಏಪ್ರಿಲ್ 30 ರವೆಗೆ ಅವಕಾಶ ಕಲ್ಪಿಸಲಾಗಿದೆ.
ಟ್ರ್ಯಾಕ್ಟರ್, ಕನ್ಸ್ಟ್ರಕ್ಷನ್ ಎಕ್ವಿಪ್ಮೆಂಟ್ ವಾಹನಗಳನ್ನು ಹೊರತುಪಡಿಸಿ, ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳ ನೋಂದಣಿ ಸ್ಥಗಿತಗೊಳ್ಳಲಿದೆ. ಈಗಾಗಲೇ BS-4 ವಾಹನಗಳನ್ನು ಖರೀದಿಸಿ ತಾತ್ಕಾಲಿಕ ನೋಂದಣಿ ಮಾಡಿಕೊಂಡಿರುವ ವಾಹನಗಳ ಮಾಲೀಕರು, ಏಪ್ರಿಲ್ 30 ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ತಿಳಿಸಿದೆ.