ETV Bharat / state

ಬೆಡ್​ ಬಿಟ್ಟುಕೊಡದ ಖಾಸಗಿ ಆಸ್ಪತ್ರೆಗಳಿಗೆ ಅಂಕುಶ: ಗೃಹ ಸಚಿವ ಬೊಮ್ಮಾಯಿ - Basavaraja Bommai talk about corona rules

ನೈಟ್ ಕರ್ಫ್ಯೂ ಯಶಸ್ವಿಯಾಗಿ ಜಾರಿಯಾಗಿದೆ. ಜನರು ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಂಡು ಸಹಕಾರ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

basavaraja-bommai
ಗೃಹ ಸಚಿವ ಬೊಮ್ಮಾಯಿ
author img

By

Published : Apr 22, 2021, 7:42 PM IST

ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಹಾಸಿಗೆ ಬಿಟ್ಟುಕೊಡದ ಖಾಸಗಿ ಆಸ್ಪತ್ರೆಗಳ ಮೇಲೆ ಅಂಕುಶ ಹಾಕಲು ಪೊಲೀಸ್ ಇಲಾಖೆ ಇದೀಗ ಎಂಟ್ರಿ ಕೊಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಲಭ್ಯತೆ ಬಗ್ಗೆ ತಪಾಸಣೆ ಮಾಡಲು ಸ್ವತಃ ವಲಯವಾರು ಡಿಸಿಪಿಗಳು ಫೀಲ್ಡಿಗಿಳಿಯಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ವಲಯವಾರು ಡಿಸಿಪಿಗಳಿಗೆ ಆಸ್ಪತ್ರೆಯಲ್ಲಿನ ಬೆಡ್ ಲಭ್ಯತೆ ಬಗ್ಗೆ ತಪಾಸಣೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಬೆಂಗಳೂರು ಖಾಸಗಿ ಆಸ್ಪತ್ರೆಗಳು 11 ಸಾವಿರ ಬೆಡ್ ಕೊಡಲು ಒಪ್ಪಿದ್ದಾರೆ. ಈಗಾಗಲೇ ಏಳು ಸಾವಿರ ಬೆಡ್ ಬಿಟ್ಟು ಕೊಟ್ಟಿದ್ದಾರೆ. ಈ ಸಂಬಂಧ ಈಗ ಎಲ್ಲ ಡಿಸಿಪಿಗಳು ಸಭೆಯನ್ನು ಮಾಡುತ್ತಾರೆ. 3 ಗಂಟೆಗೆ ಎಲ್ಲ ಆಸ್ಪತ್ರೆಗೆ ವಿಸಿಟ್ ಮಾಡ್ತಾರೆ. ಸಂಜೆಯಾಗಲಿ, ರಾತ್ರಿಯಾಗಲಿ ಎಷ್ಟೇ ಹೊತ್ತಾಗಲಿ, ಉಳಿದ 4,000 ಬೆಡ್ ಗಳನ್ನು ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಇವತ್ತು ಬೆಳಗ್ಗೆ ಸಿಎಂ ಯಡಿಯೂರಪ್ಪ ಬೆಂಗಳೂರಿನ ಆಸ್ಪತ್ರೆಗಳ ಬಗ್ಗೆ ಲಭ್ಯವಿರುವ ಬೆಡ್​ಗಳ ಹಂಚಿಕೆ ಬಗ್ಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸಭೆ ನಡೆಸಲು ಸೂಚಿಸಿದ್ರು. ಹೀಗಾಗಿ ಜಂಟಿ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೇನೆ. ಬಿಬಿಎಂಪಿ ಆಯುಕ್ತರು, ಝೋನಲ್ ಹೆಡ್, ಡಿಸಿಪಿಗಳ ಜೊತೆ ಮಾತನಾಡಿದ್ದೇವೆ. ಜಂಟಿ ಇನ್ಸ್​​​ಪೆಕ್ಷನ್ ಮಾಡ್ತೇವೆ. ಬೆಡ್ ಲಭ್ಯತೆಯ ಸತ್ಯಾಸತ್ಯತೆ ತಿಳಿದುಕೊಂಡು ಬೆಡ್​ಗಳ ಹಂಚಿಕೆ ಬಗೆಹರಿಸುತ್ತೇವೆ. ಎಂಟು ಮಂದಿ ಜಾಯಿಂಟ್ ಕಮಿಷನರ್ ಹಾಗೂ ಎಂಟು ಡಿಸಿಪಿಗಳು ಅವರವರ ವಲಯಗಳ ಆಸ್ಪತ್ರೆಗಳ ಬೆಡ್ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ ಎಂದರು.

ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿ: ನಾಳೆಯಿಂದ ವೀಕೆಂಡ್ ಕರ್ಫ್ಯೂ ಪ್ರಾರಂಭವಾಗಲಿದೆ. ನಿಯಮ ಉಲ್ಲಂಘನೆ ಮಾಡುವವರ ಗಾಡಿ ಸೀಸ್ ಮಾಡುವುದಕ್ಕೆ ಸೂಚಿಸಲಾಗಿದೆ. ಕಲ್ಯಾಣ ಮಂಟಪ ಸಭಾಭವನದ ಮಾಲೀಕರ ಜೊತೆ ಮಾತುಕತೆ ಮಾಡಿದ್ದೇವೆ. ಅವರಿಂದ ಕೋವಿಡ್ ನಿಯಮ ಉಲ್ಲಂಘನೆ ಆಗಬಾರದು ಅಂತ ಸೂಚಿಸಿದ್ದೇವೆ. ಮದುವೆಗಳಲ್ಲಿ ನಿಯಮ ಉಲ್ಲಂಘನೆ ಆದರೆ ಕಲ್ಯಾಣ ಮಂಟಪ ಕ್ಲೋಸ್ ಮಾಡಿಸ್ತೇವೆ ಎಂದು ಎಚ್ಚರಿಸಿದರು.

ಆ್ಯಂಬುಲೆನ್ಸ್​​​​ ಓಡಾಟಕ್ಕೆ ಇದುವರೆಗೆ ಯಾವುದೇ ತೊಂದರೆ ಆಗಿಲ್ಲ. ಸುಗಮ ಸಂಚಾರ ಆಗಿ ಓಡಾಟಕ್ಕೂ ಕೂಡ ಅವಕಾಶ ಮಾಡಿಕೊಡುತ್ತೇವೆ. ಕಳೆದ ಬಾರಿಯ ಅನುಭವ ನಮಗಿದೆ. ಒಂದೇ ಬಾರಿ ನಿಯಮ ಉಲ್ಲಂಘಿಸಿದವರಿಗೆ ಲಾಟಿ ಎತ್ತಿಕೊಳ್ಳುವುದಿಲ್ಲ. ಲಾಟಿ ಎತ್ತಿಕೊಳ್ಳುವ ಅವಶ್ಯಕತೆ ಇಲ್ಲ ಅಂತ ಅಂದುಕೊಂಡಿದ್ದೇನೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಜನ ಗಂಭೀರತೆಯನ್ನು ಅರ್ಥಮಾಡಿಕೊಂಡಿದ್ದಾರೆ: ನೈಟ್ ಕರ್ಫ್ಯೂ ಯಶಸ್ವಿಯಾಗಿ ಜಾರಿಯಾಗಿದೆ. ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಹಕಾರ ಮಾಡುತ್ತಿದ್ದಾರೆ. ನಿನ್ನೆ ಮುಖ್ಯಮಂತ್ರಿಗಳು ಮಾಡಿದ ಮನವಿಗೆ ಎಲ್ಲರೂ ಸ್ಪಂದನೆ ನೀಡಿದ್ದಾರೆ. ನಿನ್ನೆ ಹಿರಿಯ ಅಧಿಕಾರಿಗಳ ಸಭೆ ಮಾಡಿದ್ದೇನೆ. ವಲಯವಾರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಐಜಿ ಮತ್ತು ಎಸ್ಪಿಗಳ ಜೊತೆಯಲ್ಲಿ ಸಹಕಾರ ಮಾಡುವಂತೆ, ಮಾರ್ಗದರ್ಶನ ನೀಡುವಂತೆ ತಿಳಿಸಿದ್ದೇನೆ. ಅಲ್ಲದೇ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಜೊತೆ ಸಮನ್ವಯ ಮಾಡುವಂತೆ ತಿಳಿಸಿದ್ದೇನೆ ಎಂದರು.

ನಿಯಮ ಉಲ್ಲಂಘನೆ ಮಾಡಿದಲ್ಲಿ ಕೇಸು ದಾಖಲಿಸಲು ಸೂಚನೆ: ನಿನ್ನೆ ಖಾಸಗಿ ಆಸ್ಪತ್ರೆಗಳ ಬೆಡ್ ಸಮಸ್ಯೆ ಕುರಿತು ಪೊಲೀಸ್ ಆಯುಕ್ತರ ಮಾತನಾಡಿದ್ದೇನೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ನಿವಾರಣೆ ಮಾಡಲು ಬಿಬಿಎಂಪಿ ಅಧಿಕಾರಿಗಳು ಮತ್ತು ವಲಯವಾರು ಡಿಸಿಪಿಗಳನ್ನು ಜಂಟಿಯಾಗಿ ನೇಮಕ ಮಾಡಬೇಕು, ಆಸ್ಪತ್ರೆಗಳ ಪರಿಶೀಲನೆ ನಡೆಸಬೇಕು ಎನ್ನುವ ತೀರ್ಮಾನ ಆಗಿದೆ. ಹಾಗಾಗಿ ಇಂದು ಪೊಲೀಸ್ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರ ಜೊತೆ ಮಾತುಕತೆ ನಡೆಸಿ ಖಾಸಗಿ ಆಸ್ಪತ್ರೆ ಬೆಡ್ ಸಮಸ್ಯೆಗಳ ಬಗ್ಗೆ ಜಂಟಿಯಾಗಿ ಪರಿಶೀಲನೆ ಮಾಡುವುದು ಮತ್ತು ಮಾರ್ಗದರ್ಶನ ನೀಡುವುದು, ನಿಯಮ ಉಲ್ಲಂಘನೆ ಮಾಡಿದಲ್ಲಿ ಕೇಸು ದಾಖಲಿಸಲು ಸೂಚನೆ ಕೊಟ್ಟಿದ್ದೇವೆ. ಇಬ್ಬರು ಆಯುಕ್ತರ ಜತೆ ಇಂದು ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸೂಕ್ತ ಪೊಲೀಸ್ ರಕ್ಷಣೆ ಮಾಡಲು ತೀರ್ಮಾನ: ನಿನ್ನೆ ಕಂದಾಯ ಸಚಿವರ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ಊರಿನಿಂದ ಒಂದು ಕಿಲೋಮೀಟರ್ ದೂರದಲ್ಲಿ ಸ್ಮಶಾನಕ್ಕಾಗಿ ಜಾಗ ಗುರುತಿಸಿದ್ದಾರೆ. ಇಂದು ಅಥವಾ ನಾಳೆ ಶವಸಂಸ್ಕಾರದ ಆ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಿ ಅವಕಾಶ ನೀಡುವ ಕೆಲಸ ನಡೆಯಲಿದೆ. ಅಲ್ಲಿಯೂ ಕೂಡ ಪೊಲೀಸರನ್ನು ನೇಮಕ ಮಾಡಬೇಕು ಎಂದು ಪೊಲೀಸ್ ಆಯುಕ್ತರಿಗೆ ಮತ್ತು ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಬೆಂಗಳೂರಿನ ಹೊರಗಡೆಯೂ ಎಲ್ಲಾ ಕಡೆ ಸೂಕ್ತ ಪೊಲೀಸ್ ರಕ್ಷಣೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ಕೊರೊನಾ ವಿರುದ್ಧ ನಿರಂತರವಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ನಮ್ಮ ಎಲ್ಲಾ ಸಚಿವರು ಆ ನಿಟ್ಟಿನಲ್ಲೇ ಕೆಲಸವನ್ನು ಮಾಡುತ್ತಿದ್ದಾರೆ. ಇದು ಅತಿವೇಗದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂದಿರುವ ಕಾರಣ ಸಮಸ್ಯೆಗಳನ್ನು ನಿವಾರಣೆ ಮಾಡಲು ಮುಖ್ಯಮಂತ್ರಿಗಳು ಆಸ್ಪತ್ರೆಯಿಂದಲೇ ಕೆಲಸ ಮಾಡಿದರು. ಹಾಗಾಗಿ, ಸಾರ್ವಜನಿಕರು ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು.

ಓದಿ: ಉಡುಗೊರೆ ಕೊಡದೆ, ಊಟ ಮಾಡದೆ ಕಲ್ಯಾಣ ಮಂಟಪದಿಂದ ಹೊರ ನಡೆದ ಜನ! ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.