ಬೆಂಗಳೂರು: ರಾಜಧಾನಿಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಮೊಬೈಲ್ ರಾಬರಿ, ಲಾಂಗು ಮಚ್ಚು ತೋರಿಸಿ ಹಣ ಸುಲಿಗೆ ಮಾಡೋ ಕೇಸ್ಗಳಂತೂ ವಿಪರೀತವಾಗಿದ್ದವು. ಆದರೆ ಕಳೆದೊಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರದಲ್ಲಿ ರಾಬರ್ಸ್ ಕೂಡ ಫುಲ್ ಸೈಲೆಂಟ್ ಆಗಿದ್ದಾರೆ.
ಕಳೆದ ಒಂದು ವಾರದಲ್ಲಿ ನಗರದಲ್ಲಿ ರಾಬರಿ ಕೇಸ್ಗಳೇ ರಿಪೋರ್ಟ್ ಆಗಿಲ್ಲ. ಪ್ರತಿನಿತ್ಯ ಡಿವಿಷನ್ಗೆ ಎರಡು ಮೂರು ರಾಬರಿ ಕೇಸ್ಗಳು ದಾಖಲಾಗುತ್ತಿತ್ತು. ಆದರೆ ವಾರದಿಂದ ಕಂಟ್ರೋಲ್ ರೂಂಗೂ ಕಳ್ಳತನ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ನಗರದ 8 ಡಿವಿಷನ್ಗಳಲ್ಲಿ ಪ್ರತಿನಿತ್ಯ 15-20 ರಾಬರಿ ಕೇಸ್ ವರದಿ ಆಗುತ್ತಿದ್ದವು. ರಾತ್ರಿ ಒಂಟಿಯಾಗಿ ಬರೋರನ್ನು ಗುರಿಯಾಗಿಸಿ ಮಾಡುತ್ತಿದ್ದ ಕಳ್ಳತನ ಮತ್ತು ಐಟಿ ಬಿಟಿ ಕಂಪನಿ ಹೆಚ್ಚಾಗಿರೋ ಏರಿಯಾದ ಕಳ್ಳತನ ಕೇಸ್ ದಾಖಲಾಗಿಲ್ಲ.
ಮಹದೇವಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ಬೆಳ್ಳಂದೂರು ವರ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ರಾಬರಿ ಕೇಸ್ ಹೆಚ್ಚಾಗಿದ್ದವು. ಇತ್ತೀಚೆಗೆ ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳು ಕೂಡ ಬರುತ್ತಿದ್ದವು. ಇದರಿಂದ ರಾತ್ರಿ ವೇಳೆ ಪೊಲೀಸ್ ಹೊಯ್ಸಳ ಗಸ್ತನ್ನು ಹೆಚ್ಚಳ ಮಾಡಲಾಗಿತ್ತು.
ಮಳೆ ಹಿನ್ನೆಲೆ ಬಹುತೇಕ ಪ್ರದೇಶಗಳಲ್ಲಿ ರಾತ್ರಿವೇಳೆಯೂ ಪೊಲೀಸರು ಬೀಡು ಬಿಟ್ಟಿದ್ದು, ಪೊಲೀಸರ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಿಬಿಎಂಪಿ ಸಿಬ್ಬಂದಿ ಸಹ ರಸ್ತೆಯಲ್ಲೇ ಇದ್ದರು. ಮಳೆ ಹಿನ್ನೆಲೆ ಹೊರಗಡೆ ಓಡಾಡುವ ಸಾರ್ವಜನಿಕರ ಸಂಖ್ಯೆಯೂ ಕಡಿಮೆಯಾಗಿದೆ. ಒಟ್ಟಿನಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾದರೂ ಈ ಕಳ್ಳಕಾಕರ ಕಾಟ ತಪ್ಪಿದೆ ಅನ್ನೋದೆ ಖುಷಿಯ ವಿಚಾರ.
ಇದನ್ನೂ ಓದಿ : ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದ ಕಾರು.. ಒಂದೇ ಕುಟುಂಬದ ನಾಲ್ವರು ಸಾವು