ಬೆಂಗಳೂರು : ನಗರದಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಕಡಿಮೆಯಾದ್ರೂ ಕೆಲವು ವಾರ್ಡ್‌ಗಳಲ್ಲಿ ಕೊರೊನಾ ಸೋಂಕು ತನ್ನ ಅಟ್ಟಹಾಸ ಮುಂದುವರಿಸಿದೆ. ಬೆಂಗಳೂರು ಹೊರವಲಯದಲ್ಲಿ ಕೊರೊನಾ ಆರ್ಭಟ ಇನ್ನೂ ತಗ್ಗಿಲ್ಲ.. ಬೆಂಗಳೂರು ಗಡಿ ಭಾಗಗಳಲ್ಲಿನ ವಾರ್ಡ್‌ಗಳಲ್ಲೇ ಅತೀ ಹೆಚ್ಚು ಸೋಂಕಿನ ಕೇಸ್ ಪತ್ತೆಯಾಗುತ್ತಿವೆ.
ಬೆಂಗಳೂರು ನಗರಕ್ಕೆ ಹೋಲಿಸಿದರೆ ಬೆಂಗಳೂರು ಗಡಿ ವಾರ್ಡ್‌ಗಳಲ್ಲೇ ಕೊರೊನಾ ಸೋಂಕು ಹೆಚ್ಚಾಗಿದೆ. ಮಹಾದೇವಪುರ ವಲಯದಲ್ಲಿ ಕೊರೊನಾ ಆರ್ಭಟಕ್ಕೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.. ಮಹಾದೇವಪುರ ಒಂದೇ ಝೋನ್ನಲ್ಲಿ 12 ಮೈಕ್ರೋ ಕಂಟೋನ್ಮೆಂಟ್ ಝೋನ್‌ಗಳಿವೆ.
ಮಹಾದೇವಪುರ ವಲಯದ ಹಗದೂರು, ವರ್ತೂರು, ಅರಕೆರೆ ಬೆಳ್ಳೂಂದೂರು ನಗರದ ಗಡಿ ವಾರ್ಡ್‌ಗಳು ಸೇರಿ ಇನ್ನೂ ಕೊರೊನಾ ಸಂಖ್ಯೆ ಇಳಿ ಮುಖವಾಗದ 10 ವಾರ್ಡ್‌ಗಳನ್ನ ಬಿಬಿಎಂಪಿ ಪಟ್ಟಿ ಮಾಡಿದೆ. ಜೊತೆಗೆ ಕಳೆದ ಹತ್ತು ದಿನಗಳಲ್ಲಿ ಗಣನೀಯವಾಗಿ ಸೋಂಕು ಇಳಿಕೆಯಾಗಿರುವ ನಗರದ ಏರಿಯಾಗಳನ್ನ ಕೂಡ ಬಿಬಿಎಂಪಿ ಪಟ್ಟಿ ಮಾಡಿದೆ..
ರೆಡ್ ಝೋನ್ ಏರಿಯಾಗಳು:
ಹಗ್ದೂರು
ಬೆಳ್ಳೂಂದೂರು
ವರ್ತೂರು
ಹೊರಮಾವು
ಅರಕೆರೆ
ರಾಜರಾಜೇಶ್ವರಿ ನಗರ
ಹೆಚ್ ಎಸ್ ಆರ್ ಲೇಔಟ್
ರಾಮಮೂರ್ತಿ ನಗರ
ಬಾಣಸವಾಡಿ
ಶಾಂತಲನಗರ
ಗ್ರೀನ್ ಝೋನ್ ಏರಿಯಾಗಳು :
ಚಿಕ್ಕಪೇಟೆ
ಮುನೇಶ್ವರನಗರ
ಸುಧಾಮನಗರ
ಪಾದರಾಯನಪುರ
ಜಗಜೀವನರಾಮ್‌ನಗರ
ಚಲವಾದಿಪಾಳ್ಯ
ಬನಶಂಕರಿ ದೇವಸ್ಥಾನ ವಾರ್ಡ್
ಬಾಪೂಜಿನಗರ
ರಾಯಪುರ
ಆಜಾದ್‌ನಗರ