ಬೆಂಗಳೂರು: ಬಿಎಂಆರ್‌ಸಿಎಲ್ ಸಂಸ್ಥೆ ನಮ್ಮ ಮೆಟ್ರೋ ಹಂತ 2ರ ಪಿಂಕ್ ಲೈನ್ನಲ್ಲಿ ನಾಗವಾರದಲ್ಲಿ ರಿಸೀವಿಂಗ್ ಸಬ್ ಸ್ಟೇಷನ್ ನಿರ್ಮಿಸುತ್ತಿದ್ದು, ಇದಕ್ಕಾಗಿ 45 ಸಾವಿರ ಚದರ್ ಅಡಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.
ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣ : ಪಿಂಕ್ ಲೈನ್ ಕಾಮಗಾರಿ ವ್ಯಾಪ್ತಿಯ ಕಸಬಾ ಹೋಬಳಿಯ ನಾಗವಾರ ಗ್ರಾಮದಲ್ಲಿ ಕೆಐಎಡಿಬಿ 45,021.45 ಚದರ್ ಅಡಿ ಅಳತೆಯ ಮೂರು ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಬಹುಪಾಲು ಜಾಗ ರಿಯಲ್ ಎಸ್ಟೇಟ್ ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗೆ ಸಂಬಂಧಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ನಮ್ಮ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಿಸೀವ್ ಸ್ಟೇಷನ್ ನಿರ್ಮಾಣಕ್ಕೆ ಬಹುದೊಡ್ಡ ಜಾಗದ ಅಗತ್ಯವಿತ್ತು. ನಾಗವಾರದಿಂದ ಕಾಕಳೇನ ಅಗ್ರಹಾರ ಮೆಟ್ರೋ ಲೈನ್‌ಗೆ ಇದು ಅನುಕೂಲವಾಗಿದೆ. ಹುಳಿಮಾವು, ಬನ್ನೇರುಘಟ್ಟ ರಸ್ತೆಯಲ್ಲಿ ಮತ್ತೊಂದು ಉಪಕೇಂದ್ರ ಸ್ಥಾಪನೆಯಾಗಲಿದೆ ಎಂದಿದ್ದಾರೆ.
2024ಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತ: ವಿವಿಧ ವಿಭಾಗಗಳ ಸಿವಿಲ್ ಕಾಮಗಾರಿಗಳು ನಡೆಯುತ್ತಿದೆ. ಕೊತ್ತನೂರು ಬಳಿಯೂ ಕೆಲಸ ಕಾರ್ಯಗಳು ಭರದಿಂದ ಸಾಗಿವೆ. 2024ರಲ್ಲಿ ಪಿಂಕ್ ಲೈನ್ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 900ಮೀ ಉದ್ದದ ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಹೊರಬಂದ ಟಿಬಿಎಂ ವಿಂಧ್ಯಾ
ನಮ್ಮ ಮೆಟ್ರೋ ಇತಿಹಾಸ: ರಾಜಧಾನಿಗೆ ಮೆಟ್ರೋ ಸೇವೆ ಬರಲು ಸ್ವಲ್ವ ವಿಳಂಬವಾದರೂ ಅಚ್ಚುಕಟ್ಟಾಗಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ಸೇವೆಯಿಂದ ಜನತೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಪಡೆದಿದ್ದಾರೆ. ಜನರ ಸಮಯವನ್ನು ಉಳಿತಾಯ ಮಾಡುವಲ್ಲಿ ಸಹಾಯಕವಾಗಿದೆ. ಬೈಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆಗಳ( ಎಂಜಿ ರೋಡ್) ನಡುವಿನ ಮೊದಲ ಹಂತದ ಸಂಚಾರವು 2011ರ ಅಕ್ಟೋಬರ್ 20 ರಂದು ಆರಂಭವಾಯಿತು.
ರೀಚ್ 1 ರ (ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ) ವಾಣಿಜ್ಯ ಕಾರ್ಯಾಚರಣೆಯು 20ನೇ ಅಕ್ಟೋಬರ್ 2011 ರಂದು ಪ್ರಾರಂಭವಾಗಿದೆ.
ರೀಚ್ 3 ರ (ಪೀಣ್ಯ ಕೈಗಾರಿಕಾ ಪ್ರದೇಶದ ದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯವರೆಗೆ) ವಾಣಿಜ್ಯ ಕಾರ್ಯಾಚರಣೆ 1ನೇ ಮಾರ್ಚ್ 2014 ರಿಂದ ಆರಂಭವಾಗಿದೆ.
ಇದನ್ನೂ ಓದಿ: 855 ಮೀಟರ್ ಸುರಂಗ ಕೊರೆದು ಶಿವಾಜಿನಗರದಲ್ಲಿ ಹೊರ ಬಂದ ವಿಂದ್ಯಾಯಂತ್ರ
ರೀಚ್ 3ಬಿ (ನಾಗಸಂಧ್ರ ದಿಂದ ಪೀಣ್ಯ ಕೈಗಾರಿಕಾ ಪ್ರದೇಶದ ವರೆಗೆ) ವಾಣಿಜ್ಯ ಕಾರ್ಯಾಚರಣೆ 1ನೇ ಮೇ 2015 ರಿಂದ ಆರಂಭವಾಗಿದೆ.
ರೀಚ್ 2 ರ (ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯವರೆಗೆ) ವಾಣಿಜ್ಯ ಕಾರ್ಯಾಚರಣೆ 15ನೇ ನವಂಬರ 2015 ರಿಂದ ಪ್ರಾರಂಭವಾಗಿದೆ.
ಲಕ್ಷಕ್ಕೂ ಅಧಿಕ ಮಂದಿಯಿಂದ ಮೆಟ್ರೋ ಬಳಕೆ : ಆರಂಭದಲ್ಲಿ ಸಾವಿರ ಲೆಕ್ಕದಲ್ಲಿ ಆರಂಭವಾದ ಪ್ರಯಾಣಿಕರ ಸಂಖ್ಯೆ ನಂತರ ನಿತ್ಯ ಲಕ್ಷಗಟ್ಟಲೇ ಜನರು ಮೆಟ್ರೋ ಸೇವೆ ಬಳಸುತ್ತಿದ್ದಾರೆ.
ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ : ಉದ್ದ ಹಾಗೂ ನಿಲ್ದಾಣಗಳ ವ್ಯವಸ್ಥೆಯನ್ನು ಪರಿಗಣಿಸಿದರೆ ನವದೆಹಲಿಯನ್ನು ಹೊರತು ಪಡಿಸಿ ನಮ್ಮ ಮೆಟ್ರೋ ನಂತರದ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಅಂಡರ್ ಮೆಟ್ರೋ ವ್ಯವಸ್ಥೆಯನ್ನು ಹೊಂದಿದೆ. ಇನ್ನೂ ವಿಶೇಷವೆಂದರೆ ಬಸ್ಗಳಲ್ಲಿ ಮಹಿಳಾ ಸೀಟು ಮೀಸಲಾತಿ ಇರುತ್ತೋ ಹಾಗೆ ನಮ್ಮ ಮೆಟ್ರೋದಲ್ಲಿ ಒಂದು ಬೋಗಿ ಸಂಪೂರ್ಣವಾಗಿ ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: 900ಮೀ ಉದ್ದದ ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಹೊರಬಂದ ಟಿಬಿಎಂ ವಿಂಧ್ಯಾ