ಬೆಂಗಳೂರು/ಯಲಹಂಕ: ಮಧ್ಯಪ್ರದೇಶದ ರೆಬೆಲ್ ಶಾಸಕರು ರಮಡಾ ಹೋಟೆಲ್ನಲ್ಲಿಂದು ಸುದ್ದಿಗೋಷ್ಟಿ ನಡೆಸಿದ್ದಾರೆ.
ಮಧ್ಯಪ್ರದೇಶ ಸರ್ಕಾರದ ಅಸ್ಥಿರತೆಗೆ ಕಾರಣರಾಗಿರುವ ಕಾಂಗ್ರೆಸ್ ರೆಬೆಲ್ ಶಾಸಕರು ಯಲಹಂಕದ ರಮಡಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು, ನಾವು ಸರ್ಕಾರದ ಧೋರಣೆ ಇಷ್ಟವಾಗದ ಕಾರಣ ರಾಜೀನಾಮೆ ನೀಡಿರುವುದಾಗಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ರು.
ನಾವು ಯಾರ ಬಂಧನದಲ್ಲೂ ಇಲ್ಲ, ನಾವು ಸ್ವಇಚ್ಛೆಯಿಂದ ಒಟ್ಟಿಗಿದ್ದೇವೆ. ನಮ್ಮನ್ನ ಕಡೆಗಣನೆ ಮಾಡಲಾಯಿತು. ಸಿಎಂ ಚಿಮದ್ವಾಡಗೆ ಮಾತ್ರ ಸೀಮಿತವಾದ್ರು. ಇಡೀ ರಾಜ್ಯವನ್ನು ಕಡೆಗಣನೆ ಮಾಡಿದ್ರು. ಜನ ನಮ್ಮನ್ನ ಆಯ್ಕೆ ಮಾಡಿರೋದು ಅಭಿವೃದ್ಧಿ ಮಾಡಲಿಕ್ಕೆ, ಹಣದಿಂದ ಚುನಾವಣೆ ಮಾಡಲಿಕ್ಕೆ ಆಗಲ್ಲ ಅಂದ್ರು. ಕೆಲಸ ಮಾಡಿ ಜನರ ಮುಂದೆ ಹೋಗಬಹುದು ಎಂದು ಮನವಿ ಮಾಡಿದ್ವಿ ಎಂದರು.
ರಾಹುಲ್ ಗಾಂಧಿ ಬಳಿ ಅಳಲು ತೊಡಿಕೊಂಡ್ವಿ, ಲಿಸ್ಟ್ ನೊಡಿದ್ರೆ ನಮ್ಮದು ಮೂರನೇ ಲಿಸ್ಟ್ ನಲ್ಲಿ ಇಡಲಾಗಿತ್ತು. ನಾವು ತುಂಬ ಹಿರಿಯರು, ರಾಜಕೀಯದಲ್ಲಿ ತುಂಬ ಏಳುಬೀಳುಗಳನ್ನ ನೋಡಿದ್ದೀವಿ. ಆದ್ರೂ ನಮ್ಮನ್ನು ನಿರ್ಲಕ್ಷ್ಯಿಸಿ ಕೆಲಸಗಳಿಗೆ ಅನುಮತಿ ನೀಡದೆ ಮೂಲೆಗುಂಪು ಮಾಡಿದ್ರು ಎಂದು ಅಸಮಾಧಾನ ಹೊರಹಾಕಿದ್ರು.
ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ, ಸರ್ಕಾರ ಕಿತ್ತೊಗೆಯುವ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ಕೈಗೊಂಡಿದ್ದೇವೆ. ನಾವು ಜನಾದೇಶಕ್ಕೆ ಹೋಗುತ್ತೇವೆ, ಉಪಚುನಾವಣೆಗೆ ನಾವು ಸಿದ್ಧರಿದ್ದೇವೆ. ಬಿಜೆಪಿ ಸೇರುವ ಬಗ್ಗೆ ಇನ್ನೂ ನಾವು ನಿರ್ಧರಿಸಿಲ್ಲ. ಎಲ್ಲರೂ ಒಟ್ಟಾಗಿ ಕೂತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಹೇಳಿದರು.
ಮಧ್ಯಪ್ರದೇಶ ಸರ್ಕಾರದ ಅಸ್ಥಿರತೆಗೆ ಕಾರಣರಾಗಿರುವ 22 ಕಾಂಗ್ರೆಸ್ ರೆಬೆಲ್ ಶಾಸಕರು ಯಲಹಂಕದ ರಮಡಾ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇತ್ತ ಮುಖ್ಯಮಂತ್ರಿ ಕಮಲನಾಥ್ ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.