ಬೆಂಗಳೂರು: ವಿವಿಧ ವಲಯಗಳ ಉಸ್ತುವಾರಿಯನ್ನು ಮರು ಪರಿಷ್ಕರಿಸಿ ನಿಯೋಜನೆಯಾಗಿರುವ ಹೆಚ್ಚುವರಿ ಆಯುಕ್ತರಿಗೆ ಹಂಚಿಕೆ ಮಾಡಬೇಕೆಂದು ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಬರೆದಿದ್ದ ಪತ್ರಕ್ಕೆ ಸ್ಪಂದಿಸಿ ಮರು ಹಂಚಿಕೆ ಮಾಡಲಾಗಿದೆ.
ಬಿಬಿಎಂಪಿ ಆಯುಕ್ತರ ಕಾರ್ಯದ ಹೊರೆ ಕಡಿಮೆ ಮಾಡಲು ಈ ಹಿಂದೆ ವಲಯಗಳ ಉಸ್ತುವಾರಿಯನ್ನು ಆಯುಕ್ತರ ಕಾರ್ಯ ಪರಿಧಿಯಿಂದ ಬಿಡುಗಡೆ ಮಾಡಿ ವಿಶೇಷ ಆಯುಕ್ತರಿಗೆ ಹಂಚಲಾಗಿತ್ತು. ಆದರೆ ಈಗ ಪಾಲಿಕೆಗೆ ಹೆಚ್ಚುವರಿ ವಿಶೇಷ/ಅಪರ ಆಯುಕ್ತರ ನಿಯೋಜನೆಯಾಗಿರುವುದರಿಂದ ವಲಯಗಳ ಉಸ್ತುವಾರಿಯನ್ನು ಮರು ಪರಿಷ್ಕರಿಸಿ ಹಂಚಿಕೆ ಮಾಡಬೇಕೆಂದು ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.
ಮರು ಹಂಚಿಕೆ ಮಾಡಿರುವ ವಿವರ:
ಪೂರ್ವ ವಲಯ - ವಿಶೇಷ ಆಯುಕ್ತರು(ಯೋಜನೆ)
ದಕ್ಷಿಣ ವಲಯ - ಹಣಕಾಸು ವಿಶೇಷ ಆಯುಕ್ತರು
ಆರ್.ಆರ್ ನಗರ- ಆಸ್ತಿಗಳ ವಿಭಾಗದ ವಿಶೇಷ ಆಯುಕ್ತರು
ಬೊಮ್ಮನಹಳ್ಳಿ- ಆರೋಗ್ಯ ವಿಭಾಗದ ವಿಶೇಷ ಆಯುಕ್ತರು
ಮಹದೇವಪುರ ವಲಯ- ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತರು
ಪಶ್ಚಿಮ ವಲಯ- ಕಂದಾಯ ವಿಭಾಗದ ವಿಶೇಷ ಆಯುಕ್ತರು
ಯಲಹಂಕ ಮತ್ತು ದಾಸರಹಳ್ಳಿ ವಲಯ- ಆಡಳಿತ ವಿಶೇಷ ಆಯುಕ್ತರು