ETV Bharat / state

ಕಾಲ್​ಸೆಂಟರ್​ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್ : ಸಚಿವ ಲಿಂಬಾವಳಿ - 1912 ಸಹಾಯವಾಣಿಯ ಹೆಚ್ಚುವರಿ ಕೇಂದ್ರ

ಈ ಹಿಂದೆ 1912 ಸಹಾಯವಾಣಿಯಲ್ಲಿ 60 ಮಾರ್ಗಗಳಿದ್ದವು. ಈಗ ಅದಕ್ಕೆ ಹೆಚ್ಚುವರಿಯಾಗಿ 70 ಮಾರ್ಗಗಳನ್ನು ಸೇರಿಸಲಾಗಿದೆ. ಈವರೆಗೂ ಈ ಸಹಾಯವಾಣಿಗೆ ಕರೆ ಮಾಡಿದಾಗ 12 ರಿಂದ 20 ನಿಮಿಷಗಳು ಕಾಯಬೇಕಿತ್ತು..

ಕಾಲ್​ಸೆಂಟರ್​ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್:ಲಿಂಬಾವಳಿ

author img

By

Published : May 14, 2021, 9:31 PM IST

ಬೆಂಗಳೂರು : ಬೆಂಗಳೂರಿನ ಯಶವಂತಪುರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿಗೆ ನೆರವು ನೀಡಲು ಸ್ಥಾಪಿಸಿರುವ 1912 ಸಹಾಯವಾಣಿಯ ಹೆಚ್ಚುವರಿ ಕೇಂದ್ರವನ್ನು ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.

ಕಾಲ್​ಸೆಂಟರ್​ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್ : ಸಚಿವ ಲಿಂಬಾವಳಿ

ಬಳಿಕ ಮಾತನಾಡಿದ ಅವರು, ಆಸ್ಪತ್ರೆಗಳ ವಾಸ್ತವ ಸ್ಥಿತಿಗತಿ ತಿಳಿಯಲು ಕಾಲ್ ಸೆಂಟರ್ ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್ ಕೂಡ ಮಾಡಲಾಗುತ್ತದೆ.

ಇದರಿಂದ ಆಸ್ಪತ್ರೆಗಳಲ್ಲಿ ಬಿಡುಗಡೆಯಾಗುತ್ತಿರುವ ರೋಗಿಗಳು ಮತ್ತು ದಾಖಲಾಗುತ್ತಿರುವ ರೋಗಿಗಳ ನಿಖರ ಮಾಹಿತಿ, ಬೆಡ್‌ಗಳ ಲಭ್ಯತೆ ಬಗ್ಗೆ ವಾಸ್ತವ ವರದಿ ದೊರಕಲು ಸಾಧ್ಯವಾಗುತ್ತದೆ ಎಂದರು.

ಈ ಹಿಂದೆ 1912 ಸಹಾಯವಾಣಿಯಲ್ಲಿ 60 ಮಾರ್ಗಗಳಿದ್ದವು. ಈಗ ಅದಕ್ಕೆ ಹೆಚ್ಚುವರಿಯಾಗಿ 70 ಮಾರ್ಗಗಳನ್ನು ಸೇರಿಸಲಾಗಿದೆ. ಈವರೆಗೂ ಈ ಸಹಾಯವಾಣಿಗೆ ಕರೆ ಮಾಡಿದಾಗ 12 ರಿಂದ 20 ನಿಮಿಷಗಳು ಕಾಯಬೇಕಿತ್ತು.

ಆದರೆ, ಈ ಹೆಚ್ಚುವರಿ ಕರೆ ಮಾರ್ಗಗಳನ್ನು ಸ್ಥಾಪಿಸಿರುವುದರಿಂದ ಕರೆ ಮಾಡಿದ ಕೂಡಲೇ ಸೇವೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು. ಈ ಕಾಲ್ ಸೆಂಟರ್ ನಲ್ಲಿ ವೈದ್ಯರು ಸಹ ಉಪಸ್ಥಿತರಿದ್ದು, ವಲಯಗಳಿಗೆ ಕರೆ ವರ್ಗಾವಣೆ ವಿಳಂಬವಾದಲ್ಲಿ ಅವರೇ ಸ್ವತಃ ಮಾತನಾಡಿ ಅಗತ್ಯ ವೈದ್ಯಕೀಯ ಸಲಹೆ ಸೂಚನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.

ಈ ಕೇಂದ್ರವನ್ನು ಸ್ಥಾಪಿಸುವ ಮೂಲಕ ಎಲ್ಲಾ ವಲಯಗಳನ್ನು ಒಳಗೊಂಡಂತೆ 9 ವಾರ್ ರೂಮ್ ಮತ್ತು ಒಂದು ಕೇಂದ್ರ ವಾರ್ ರೂಮ್ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ. ಜೊತೆಗೆ ಇದರಿಂದ ವಾರ್ ರೂಮ್ ಮತ್ತು ಕಾಲ್ ಸೆಂಟರ್‌ಗಳ ಕಾರ್ಯ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಶಾಸಕ ಮುನಿರತ್ನ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತ ರಂದೀಪ್, ಸಹಾಯವಾಣಿ ನೋಡಲ್ ಅಧಿಕಾರಿ ವಿಪಿನ್ ಸಿಂಗ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.