ETV Bharat / state

ನೇತ್ರಾವತಿ ನದಿ ನುಂಗುತ್ತಿದೆಯಾ ಎತ್ತಿನಹೊಳೆ ಯೋಜನೆ?: ಛಾಯಾಚಿತ್ರ ಪ್ರದರ್ಶನ - undefined

ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಮರಗಳು ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟದಲ್ಲಿವೆ. ಗಾಳಿ, ಜೀವಜಲವನ್ನು ಪಶ್ಚಿಮ ಘಟ್ಟ ಇಂದು ಕೊಡುತ್ತಿದೆ. ಆದ್ರೆ ಅವೈಜ್ಞಾನಿಕ ಕಾಮಗಾರಿಯಿಂದ ಬೆಟ್ಟ ಕುಸಿದು ಮಣ್ಣು ಸಮುದ್ರಪಾಲಾದರೆ, ಮರಗಳ ನಾಶವಾದರೆ ರಾಜ್ಯವಷ್ಟೇ ಅಲ್ಲ ದೇಶದ ಹವಾಮಾನದ ಮೇಲೆಯೇ ಗಂಭೀರ ಪರಿಣಾಮ ಬೀರಲಿದೆ.

ನೈಜ ಛಾಯಾಚಿತ್ರ ಪ್ರದರ್ಶನ
author img

By

Published : Jun 5, 2019, 9:30 AM IST

ಬೆಂಗಳೂರು: ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮಘಟ್ಟದಂತಹ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿ ಮಾಡಲಾಗ್ತಿದೆ. ಪಶ್ಚಿಮಘಟ್ಟದ ಒಂದು ಬೆಟ್ಟವನ್ನು ಮುಟ್ಟಿದರೂ ಮರ್ಮಾಂಗಗಳಿಗೆ ಕೈ ಹಾಕಿದ ಹಾಗೆ. ಮರ ಕಡಿದು, ಬೆಟ್ಟಗಳ ನಾಶ ಮಾಡಿದರೆ ನೀರು ಹುಟ್ಟಿಸಲು ಸಾಧ್ಯವಿಲ್ಲ ಎಂದು ಹಿರಿಯ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಎತ್ತಿನಹೊಳೆ ಯೋಜನೆ ವಿರುದ್ಧ ಮಾತನಾಡಿದರು.

ನಗರದ ಚಿತ್ರಕಲಾ ಪರಿಷತ್​ನಲ್ಲಿ ಫೋಟೋ ಜರ್ನಲಿಸ್ಟ್ ಸುಧೀರ್ ಶೆಟ್ಟಿಯವರ ಎರಡು ದಿನಗಳ 'ನೇತ್ರಾವತಿ ನದಿಯನ್ನು ನುಂಗುತ್ತಿದೆಯಾ-ಎತ್ತಿನಹೊಳೆ ಯೋಜನೆ' ಎಂಬ ವಿಷಯಾಧಾರಿತ ಹದಿನೈದನೇ ನೈಜ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಮರಗಳು ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟದಲ್ಲಿವೆ. ಗಾಳಿ, ಜೀವಜಲವನ್ನು ಪಶ್ಚಿಮ ಘಟ್ಟ ಇಂದು ಕೊಡುತ್ತಿದೆ.

ನೈಜ ಛಾಯಾಚಿತ್ರ ಪ್ರದರ್ಶನ

ಆದ್ರೆ ಅವೈಜ್ಞಾನಿಕ ಕಾಮಗಾರಿಯಿಂದ ಬೆಟ್ಟ ಕುಸಿದು ಮಣ್ಣು ಸಮುದ್ರಪಾಲಾದರೆ, ಮರಗಳ ನಾಶವಾದರೆ ರಾಜ್ಯವಷ್ಟೇ ಅಲ್ಲ ದೇಶದ ಹವಾಮಾನದ ಮೇಲೆಯೇ ಗಂಭೀರ ಪರಿಣಾಮ ಬೀರಲಿದೆ. ಈ ಬಗ್ಗೆ ಪರಿಸರ ತಜ್ಞರು ಎಷ್ಟೇ ವರದಿಗಳನ್ನು ನೀಡಿದ್ರೂ ಸರ್ಕಾರ ಕೇಳುತ್ತಿಲ್ಲ. ಕಾರ್ಪೋರೇಟ್​​ ಕಂಪನಿಗಳ ನಿಯಮದಂತೆ ಸರ್ಕಾರ ನಡೆದುಕೊಳ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಪರಿಸರವಾದಿ ಎಸ್.ಆರ್.ಹಿರೇಮಠ್, ಡಾ. ಯಲ್ಲಪ್ಪ ರೆಡ್ಡಿ ಹಾಗೂ ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟಗಾರರು ಭಾಗಿಯಾಗಿದ್ದರು.

Intro:ಪಶ್ಚಿಮಘಟ್ಟದ ಒಂದು ಬೆಟ್ಟ ಮುಟ್ಟಿದರೂ ಮರ್ಮಾಂಗಕ್ಕೆ ಘಾಸಿಮಾಡಿದ ಹಾಗೆ- ಎತ್ತಿನಹೊಳೆ ಯೋಜನೆಯನ್ನು ಕಟುವಾಗಿ ಟೀಕಿಸಿದ ಡಾ. ಯಲ್ಲಪ್ಪ ರೆಡ್ಡಿ

ಬೆಂಗಳೂರು- ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮಘಟ್ಟದಂತಹ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿ ಮಾಡಲಾಗ್ತಿದೆ. ಪಶ್ಚಿಮಘಟ್ಟದ ಒಂದು ಬೆಟ್ಟವನ್ನು ಮುಟ್ಟಿದರೂ ಮರ್ಮಾಂಗಗಳಿಗೆ ಕೈ ಹಾಕಿದ ಹಾಗೆ... ಮರ ಕಡಿದು, ಬೆಟ್ಟಗಳ ನಾಶ ಮಾಡಿದರೆ ನೀರು ಹುಟ್ಟಿಸಲು ಸಾಧ್ಯವಿಲ್ಲ ಎಂದು ಹಿರಿಯ ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ವಿರುದ್ಧ ಮಾತನಾಡಿದರು.
ನಗರದ ಚಿತ್ರಕಲಾ ಪರಿಷತ್ ನಲ್ಲಿ ಫೋಟೋ ಜರ್ನಲಿಸ್ಟ್ ಸುಧೀರ್ ಶೆಟ್ಟಿಯವರ ಎರಡು ದಿನಗಳ 'ನೇತ್ರಾವತಿ ನದಿಯನ್ನು ನುಂಗುತ್ತಿದೆಯಾ-ಎತ್ತಿನಹೊಳೆ ಯೋಜನೆ' ಎಂಬ ವಿಷಯಾಧಾರಿತ ಹದಿನೈದನೇ ನೈಜ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಮರಗಳು ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟದಲ್ಲಿವೆ.. ಗಾಳಿ, ಜೀವಜಲವನ್ನು ಪಶ್ಚಿಮ ಘಟ್ಟ ಇಂದು ಕೊಡುತ್ತಿದೆ. ಆದ್ರೆ ಅವೈಜ್ಞಾನಿಕ ಕಾಮಗಾರಿಯಿಂದ ಬೆಟ್ಟ ಕುಸೊದು ಮಣ್ಣು ಸಮುದ್ರಪಾಲಾದರೆ, ಮರಗಳ ನಾಶವಾದರೆ ರಾಜ್ಯವಷ್ಟೇ ಅಲ್ಲ ದೇಶದ ಹವಾಮಾನದ ಮೇಲೆಯೇ ಗಂಭೀರ ಪರಿಣಾಮ ಬೀಳಲಿದೆ. ಈ ಬಗ್ಗೆ ಪರಿಸರ ತಜ್ಞರು ಎಷ್ಟೇ ವರದಿಗಳನ್ನು ನೀಡಿದ್ರೂ ಸರ್ಕಾರ ಕೇಳುತ್ತಿಲ್ಲ. ಕಾರ್ಪೋರೇಟರ್ ಕಂಪನಿಗಳ ನಿಯಮದಂತೆ ಸರ್ಕಾರ ನಡೆದುಕೊಳ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೇತ್ರವತಿಯಲ್ಲೇ ನೀರಿಲ್ಲ, ಆದರೂ ಚಿಕ್ಕಬಳ್ಳಾಪುರ, ಕೋಲಾರಕ್ಕೆ ಈ ಯೋಜನೆ ಮೂಲಕ ನೀರು ಕೊಡುತ್ತೇವೆ ಎನ್ನುವುದು ಸುಳ್ಳು ವಿಚಾರ ಎಂದರು. ಪರಿಸರಕ್ಕೆ ಹಾನಿಯಾದರೆ ಮಳೆಯೇ ಬರುವುದಿಲ್ಲ. ಮಳೆ ಬರದೆ ನೀರು ಎಲ್ಲಿಂದ ತರಲು ಸಾಧ್ಯ ಎಂದರು. ರೈತರಿಗೆ ಸುಳ್ಳು ಹೇಳಿ ಆಸೆ ಹುಟ್ಟಿಸಲಾಗ್ತಿದೆ.
ಎತ್ತಿನಹೊಳೆ ಹಣದಹೊಳೆಯಾಗಿದೆ. 13 ಸಾವಿರ ಕೋಟಿಯನ್ನು ಕೊಳ್ಳೆಹೊಡೆಯಲು ಸರ್ಕಾರ ಈ ಯೋಜನೆ ಮಾಡಿದೆ. ಎತ್ತಿನಹೊಳೆಯಲ್ಲಿ ಮರಗಳನ್ನು ಕಡಿದು, ಎಲೆಕ್ಟ್ರಿಕ್ ಪವರ್ ಹಾಕಲು, ಪೈಪ್ ಹಾಕಲು, ಸಿಮೆಂಟ್ ಗಳನ್ನು ಸುರಿದು ನದಿಪಾತ್ರವನ್ನೇ ಹಾಳುಮಾಡಲಾಗ್ತಿದೆ ಎಂದು ಛಾಯಾಗ್ರಾಹಕ ಸುಧೀರ್ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಪರಿಸರವಾದಿ ಎಸ್ ಆರ್ ಹಿರೇಮಠ್, ದೊರೆಸ್ವಾಮಿ, ಡಾ. ಯಲ್ಲಪ್ಪ ರೆಡ್ಡಿ, ಹಾಗೂ ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟಗಾರರು ಭಾಗಿಯಾಗಿದ್ದರು.

ಸೌಮ್ಯಶ್ರೀ
KN_BNG_01_04_yetthinahole_yallappareddy_script_sowmya_7202707Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.