ETV Bharat / state

ರಿಯಲ್ ನೈಟ್ ಕರ್ಫ್ಯೂ ಜಾರಿ ಅಗತ್ಯವಿದೆ, ಸದ್ಯಕ್ಕೆ ಲಾಕ್​ಡೌನ್ ಮಾಡುವ ಪರಿಸ್ಥಿತಿ ‌ಇಲ್ಲ: ಸಚಿವ ಆರ್.ಅಶೋಕ್ - ರಾಜ್ಯದಲ್ಲಿ ಬ್ರಿಟನ್ ಸೋಂಕು ಹೆಚ್ಚಾಗದಂತೆ ಕ್ರಮ

ಸಚಿವ ಆರ್.ಅಶೋಕ್ ಹೇಳಿಕೆ
ಸಚಿವ ಆರ್.ಅಶೋಕ್
author img

By

Published : Dec 30, 2020, 12:59 PM IST

Updated : Dec 30, 2020, 1:29 PM IST

12:52 December 30

ಸೋಂಕು ಹೆಚ್ಚು ಇರುವ ನಿರ್ದಿಷ್ಟ ಜಿಲ್ಲೆಗಳಲ್ಲಿ ಲಾಕ್​ಡೌನ್ ಬೇಕಾ, ಬೇಡವಾ ಅಂತ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ರಿಯಲ್ ನೈಟ್ ಕರ್ಫ್ಯೂ ಜಾರಿ ಅಗತ್ಯವಿದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಸಚಿವ ಆರ್.ಅಶೋಕ್ ಹೇಳಿಕೆ

ಬೆಂಗಳೂರು: ಸದ್ಯಕ್ಕೆ ಲಾಕ್​ಡೌನ್ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ನಿರ್ದಿಷ್ಟ ಜಿಲ್ಲೆಗಳಲ್ಲಿ ಬ್ರಿಟನ್ ಸೋಂಕು ಹೆಚ್ಚಾದರೆ ಆಗ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೋಂಕು ಹೆಚ್ಚು ಇರುವ ನಿರ್ದಿಷ್ಟ ಜಿಲ್ಲೆಗಳಲ್ಲಿ ಲಾಕ್​ಡೌನ್ ಬೇಕಾ, ಬೇಡವಾ ಅಂತ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ರಿಯಲ್ ನೈಟ್ ಕರ್ಫ್ಯೂ ಜಾರಿ ಅಗತ್ಯವಿದೆ. ಜತೆಗೆ ನಿರ್ಬಂಧಗಳು ಬಿಗಿಯಾಗಿ ಜಾರಿಯಾಗಬೇಕು. ಈ ಸಂಬಂಧ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ರಾಜ್ಯದಲ್ಲೂ ಬಿಗಿ ಕ್ರಮ ತರುವ ಬಗ್ಗೆ ಚರ್ಚೆ ಮಾಡುತ್ತೇನೆ. ಬ್ರಿಟನ್ ಹೊಸ ತಳಿಯ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇಡೀ ರಾಜ್ಯದಲ್ಲಿ ಲಾಕ್​ಡೌನ್ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಾಲಾ ಕಾಲೇಜು ಪ್ರಾರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಗೊಂದಲ ಇರೋದು ನಿಜ. ಸಿಎಂ ಜೊತೆ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಸುರೇಶ್ ಕುಮಾರ್, ಸಿಎಂ ಚರ್ಚಿಸುತ್ತಾರೆ. ಸ್ಪಷ್ಟ ತೀರ್ಮಾನವನ್ನು ಶೀಘ್ರದಲ್ಲೇ ಸಿಎಂ ಹೊರಡಿಸುತ್ತಾರೆ. ಎರಡು ಅಭಿಪ್ರಾಯಗಳು ಕೇಳಿ ಬಂದಿವೆ. ಶಾಲೆ ಪ್ರಾರಂಭಕ್ಕೆ ಕೆಲವರು ಒತ್ತಾಯಿಸಿದ್ದಾರೆ. ಹಲವರು ಶಾಲೆ ಪ್ರಾರಂಭ ಸದ್ಯಕ್ಕೆ ಬೇಡ ಅಂತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಶಾಲೆ ಶುರುವಾಗ್ತಿದೆ. ಗೊಂದಲ ನಿವಾರಣೆಗೆ ನಾವು ಕ್ರಮತೆಗೆದುಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಜನವರಿಯಿಂದ ಶಾಲೆಗಳು ಪುನಾರಂಭ : ಶಿಕ್ಷಣ ಸಚಿವರಿಂದ ಶಾಲಾ-ಕಾಲೇಜುಗಳಿಗೆ ರೌಂಡ್ಸ್​ 

ಗ್ರಾಮ ಪಂಚಾಯಿತಿ‌ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಕಡೆ ಬಿಜೆಪಿ ಶಕ್ತಿ ಎದ್ದು ಕಾಣುತ್ತಿದೆ. ಗ್ರಾ.ಪಂ ಮಟ್ಟದಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಿದೆ. ಕಾಂಗ್ರೆಸ್​ಗೆ ಹಿನ್ನಡೆ ಕಂಡು ಬರುತ್ತಿದೆ. ಮುಂದೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ. ಜನರ ಧ್ವನಿಯಾಗಿ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Last Updated : Dec 30, 2020, 1:29 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.