ETV Bharat / state

ಕೊರೊನಾ ಎರಡನೇ ಅಲೆ ಎದುರಿಸಲು ಸಿದ್ಧ, ತಾಲೂಕು ಕೇಂದ್ರದಲ್ಲೂ‌ ಚಿಕಿತ್ಸೆ: ಸಚಿವ ಸುಧಾಕರ್

ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿವಿಧ ಇಲಾಖೆಗಳ ಕುರಿತು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ.

Ready to deal with possible second wave of covid 19
ಕೊರೊನಾ ಎರಡನೇ ಅಲೆ ಎದುರಿಸಲು ಸಿದ್ದ
author img

By

Published : Dec 7, 2020, 6:58 PM IST

ಬೆಂಗಳೂರು: ಕೊರೊನಾ ಎರಡನೇ ಅಲೆ ಎದುರಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯವಿದ್ದಲ್ಲಿ ತಾಲೂಕು ಆರೋಗ್ಯ ಕೇಂದ್ರಗಳಲ್ಲಿಯೂ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರಾಣೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನವರಿಗೆ ಕೊರೊನಾ ಎರಡನೇ ಅಲೆ ಬಂದಾಗ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಅದರಂತೆ ಕ್ರಮ ವಹಿಸಲಾಗುತ್ತದೆ. ಮಾಸ್ಕ್ ಧರಿಸುವುದನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಗಂಭೀರ ವಿಷಯವಾಗಿದ್ದು, ಕೊರೊನಾ ಮತ್ತೆ ಹರಡುವ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಜನರು ಸಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಲಸಿಕೆ ಬರುವವರೆಗೂ ಮುಂದುವರೆಸಿ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದರು.

ಕೋವಿಡ್ ವಾರಿಯರ್ಸ್​ ವೇತನ, ವಿಶೇಷ ಸೌಲಭ್ಯಕ್ಕೆ ವಿಶೇಷ ಅನುದಾನದ ವ್ಯವಸ್ಥೆ ಕಲ್ಪಿಸಿದ್ದು, ಅವರಿಗೆ ಸೋಂಕು ತಗುಲಿದ ವೇಳೆ ಚಿಕಿತ್ಸೆಯನ್ನೂ ನೀಡಲಾಗಿದೆ. ಮೃತರ ಕುಟುಂಬಕ್ಕೆ ಉದ್ಯೋಗ ನೀಡಿ, 50 ಲಕ್ಷ ರೂ. ಪರಿಹಾರಧನ ಕೊಡಲಾಗಿದೆ ಎಂದರು.

ಪ್ರತಿ ತಾಲೂಕು ಆರೋಗ್ಯ ಕೇಂದ್ರದಲ್ಲಿ ಕೊರೊನಾಗೆ ಚಿಕಿತ್ಸೆ ಕೊಡಲು ಆಕ್ಸಿಜನ್ ವ್ಯವಸ್ಥೆ, ಉಪಕರಣ ಸರಬರಾಜು ಮಾಡಿದ್ದು, ಕೊರೊನಾ ಎರಡನೇ ಅಲೆ ಬಂದರೆ ಸರಿಯಾದ ಕ್ರಮಕ್ಕೆ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಪ್ರಕರಣ ಹೆಚ್ಚಾದರೆ ತಾಲೂಕು ಕೇಂದ್ರದಲ್ಲಿಯೂ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಬಿಲ್ ದೂರು ಕುರಿತು ಸದಸ್ಯ ಬೋಜೇಗೌಡರು ಹೇಳಿದ್ದಾರೆ. ಈ ಸಂಬಂಧ 120ಕ್ಕೂ ಹೆಚ್ಚು ದೂರು ಬಂದಿವೆ. ಎಲ್ಲ ದೂರಿಗೂ ನಿಖರ ಕ್ರಮಕ್ಕೆ ಸೂಚನೆ ಕೊಡಲಾಗಿದೆ. ‌ಅದಕ್ಕಾಗಿಯೇ ಸಮಿತಿ ರಚನೆ ಮಾಡಲಾಗಿದೆ. ಸರ್ಕಾರದಿಂದಲೂ ಹಣ ಪಡೆದು, ಸೋಂಕಿತರ ಕುಟುಂಬದಿಂದಲೂ ಹಣ ಪಡೆದ ಉದಾಹರಣ ಇವೆ. ಅಂತಹ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶಿಕ್ಷಕಿ ಪದ್ಮಾವತಿ ಅವರಿಗೆ ಸರ್ಕಾರದಿಂದ ಕೊರೊನಾ ಚಿಕಿತ್ಸೆಗೆ ಹಣ ನೀಡಿಲ್ಲ. ಅವರು ವೈಯಕ್ತಿಕವಾಗಿ ಖಾಸಗಿ ಆಸ್ಪತ್ರೆಗೆ ದಖಲಾಗಿದ್ದರು. ಆದರೂ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶುಲ್ಕ ವಾಪಸ್ ಕುರಿತು ಕ್ರಮಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಹೊಸ ವರ್ಷಾಚರಣೆ ವೇಳೆ ಕೊರೊನಾ ಹೆಚ್ಚುವ ಆತಂಕ ಇದೆ. ಹಾಗಾಗಿ ಯಾವ ರೀತಿ ಹೊಸ ವರ್ಷಾಚರಣೆ ಮಾಡಬೇಕು ಎಂದು ಮಾರ್ಗಸೂಚಿಯನ್ನು ಒಂದೆರಡು ದಿನದಲ್ಲಿ ಘೋಷಣೆ ಮಾಡಲಾಗುತ್ತದೆ ಎಂದರು.

ಜನಸಂಖ್ಯೆಯಂತೆ ಹಾಸನದಲ್ಲಿ ‌12 ಸಮುದಾಯ ಆರೋಗ್ಯ ಕೇಂದ್ರ ಬೇಕು. ಆದರೆ ಅಲ್ಲಿ ಈಗಾಗಲೇ 15 ಕೇಂದ್ರ ಇವೆ. ಹಾಗಾಗಿ ಮತ್ತೆ ಹೊಸದಾಗಿ ಜಿಲ್ಲೆಯಲ್ಲಿ ಯಾವ ಆರೋಗ್ಯ ಕೇಂದ್ರವನ್ನೂ ಮೇಲ್ದರ್ಜೆಗೇರಿಸಯವ ಪ್ರಸ್ತಾಪ ಇಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ಗುತ್ತಿಗೆ ಸಿಬ್ಬಂದಿ ಸೇವೆ ಮುಂದುವರಿಕೆ: ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೊರೊನಾ ಕಾರಣಕ್ಕೆ ನೇಮಕ ಮಾಡಿರುವ ಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ವಿಸ್ತರಣೆ ಮಾಡಲಿದ್ದು, ಹೊಸದಾಗಿ 2,158 ವೈದ್ಯಕೀಯ ಸಿಬ್ಬಂದಿಯನ್ನು ಜನವರಿ ಅಂತ್ಯದೊಳಗೆ ನೇಮಕ ಮಾಡಿಕೊಳ್ಳುವುದಾಗಿ ಸುಧಾಕರ್ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಆರ್.ಪ್ರಸನ್ನ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರೋಗ್ಯ ಇಲಾಖೆಗೆ ನೇರ ನೇಮಕಾತಿ ಮಾಡುಕೊಳ್ಳಲು ಕೆಲ ನಿಯಮ ಇವೆ. ಹಾಗಾಗಿ ಕೊರೊನಾ ಕಾರಣದಿಂದ ತಕ್ಷಣಕ್ಕೆ ಆರು ‌ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ 6,500 ಉದ್ಯೋಗಿಗಳನ್ನು ನೇಮಕ ಮಾಡಿದ್ದೇವೆ. ಜತೆಗೆ 2,158 ಹುದ್ದೆಗಳ ಸೃಷ್ಟಿಗೂ ಕ್ರಮ ವಹಿಸಿದ್ದು, 1,246 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, 88 ದಂತ ವೈದ್ಯರು, 824 ಸಮಾನ್ಯ ವೈದ್ಯರು ಸೇರಿ 2,158 ಹುದ್ದೆಗಳಿಗೂ ಜನವರಿ ಒಳಗೆ ಕಾಯಂ ಆಗಿ ನೇರ ನೇಮಕಾತಿ ಮಾಡಲಾಗುತ್ತದೆ ಎಂದರು.

ಸದ್ಯ ಆರು ತಿಂಗಳಿಗೆ ಗುತ್ತಿಗೆ ಆಧಾರವಾಗಿ ನೇಮಕವಾಗಿರುವ ಸಿಬ್ಬಂದಿಯನ್ನು ಮತ್ತೆ ಮೂರು ತಿಂಗಳಿಗೆ ಮುಂದುವರಿಕೆ ಮಾಡುತ್ತೇವೆ. ಕೋವಿಡ್ ಇರುವರೆಗೂ ಇವರನ್ನು ಮುಂದುವರೆಸಲಿದ್ದು, ತಜ್ಞ ವೈದ್ಯರ ನೇಮಕಕ್ಕೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಎರಡು ತಿಂಗಳಲ್ಲಿ ಗಂಗಾ ಕಲ್ಯಾಣ ಅಕ್ರಮ ತನಿಖಾ ವರದಿ ಮಂಡನೆ: ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಎರಡು ತಿಂಗಳಿನಲ್ಲಿ ಈ ಸಂಬಂಧ ವರದಿಯನ್ನು ಸದನದ ಮುಂದಿಡುವುದಾಗಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ವಿಧನಾ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ನಾರಾಯಣಸ್ವಾಮಿ, ಕೊಳವೆ ಬಾವಿ ಕೊರೆಸುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆಗೆ ಸಮಿತಿ ರಚಿಸಿ ಎಂಟು ತಿಂಗಳಾದರೂ ಕ್ರಮ ಇಲ್ಲ. ನಂತರ ಮತ್ತೊಂದು ಸಮಿತಿ ಮಾಡಿದರು. ನಿವೃತ್ತ ಐಎಎಸ್ ಅಧಿಕಾರಿ ವೆಂಕಯ್ಯರನ್ನು ನೇಮಿಸಿದರು. ಅಕ್ರಮ ನಡೆದಾಗ ಇದ್ದ ಅಧಿಕಾರಿಯನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆ ಸಮಿತಿ ಕೂಡ ಒಂದು ವರ್ಷವಾದರೂ ವರದಿ ನೀಡಿಲ್ಲ. ಎಸಿಬಿಗೆ ಸರ್ಕಾರ ಪತ್ರ ಬರೆದು ತನಿಖೆ ವಾಪಸ್ ಪಡೆದಿದ್ದು ಯಾಕೆ? ಹಾಗೂ ಅಕ್ರಮ ನಡೆದಾಗ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಯಾಕೆ? ಸದನ ಸಮಿತಿ ಯಾಕೆ ರಚನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಶ್ರೀರಾಮುಲು, ಸದನ ಸಮಿತಿ ರಚನೆ ಮಾಡಲು ಅಭ್ಯಂತರ ಇಲ್ಲ. ಅವ್ಯವಹಾರ ನಡೆದ ಆರೋಪ ಬಂದಾಗ ವೆಂಕಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಕೋವಿಡ್ ಕಾರಣದಿಂದ ಸಮಿತಿ ಹೊರಗೆ ಹೋಗಿಲ್ಲ. ಎರಡು ತಿಂಗಳು ಸಮಯ ಕೊಡಿ, ಕ್ರಮ ಕೈಗೊಳ್ಳಲಾಗುತ್ತದೆ. ಸದನ ಸಮಿತಿಯೇ ಬೇಕು ಎಂದರೆ ಅದಕ್ಕೂ ಸಿದ್ಧ ಎಂದರು.

ಆರೋಪ ಬಂದ ಸಂದರ್ಭದಲ್ಲಿ ವೆಂಕಯ್ಯ ಅವರ ಅಧಿಕಾರದ ಅವಧಿ ಮುಗಿದಿತ್ತು. ಹಾಗಾಗಿ ಸರ್ಕಾರ ಸಮಿತಿಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ತೀರ್ಮಾನ ಕೈಗೊಂಡಿದೆ. ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ, ಆದಷ್ಟು ಬೇಗ ಸದನ ಸಮಿತಿ ರಚಿಸಲಾಗುತ್ತದೆ ಎಂದರು.

ಅವ್ಯವಹಾರದ ಕುರಿತು ಆರ್ಥಿಕ ಇಲಾಖೆ ವಿಶೇಷ ಆಡಿಟ್ ಮಾಡುತ್ತಿದೆ. ಮೌಲ್ಯಮಾಪನ ನಡೆಯುತ್ತಿದೆ, ಎಲ್ಲೆಲ್ಲಿ ಅವ್ಯವಹಾರ ಆಗಿದೆ ಎನ್ನುವುದನ್ನು ಪರಿಶೀಲಿಸುತ್ತಿದ್ದೇನೆ. ಯಾರನ್ನೋ ಉಳಿಸಬೇಕುಬೇಕು ಎನ್ನುವುದು ನಮ್ಮ ಮುಂದಿಲ್ಲ. ಎರಡು ತಿಂಗಳ‌ ಸಮಯ ಕೊಡಿ ವರದಿಯನ್ನು ಸದನದಲ್ಲಿ ಇಡುತ್ತೇನೆ ಎಂದು ಭರವಸೆ ನೀಡಿದರು.

ಮುತುವರ್ಜಿಯಿಂದ ಮೌಲ್ಯಮಾಪನ ಮಾಡಲು ನಿರ್ದೇಶನ: ಎಸ್​ಎಸ್ಎಲ್​ಸಿ ಪರೀಕ್ಷಾ ಮೌಲ್ಯಮಾಪನದಲ್ಲಿ ಕೆಲ ಲೋಪದೋಷ ಕಂಡುಬಂದಿದ್ದು, ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಹೆಚ್ಚಿನ ಮುತುವರ್ಜಿಯಿಂದ ಮೌಲ್ಯಮಾನ ಮಾಡುವಂತೆ ಶಿಕ್ಷಕರಿಗೂ ನಿರ್ದೇಶನ ನೀಡಲಾಗುತ್ತದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸವಾಲಿನ ನಡುವೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆದಿದೆ. ನಮ್ಮ ಎಸ್ಎಸ್ಎಲ್​ಸಿ ಬೋರ್ಡ್ ಇಡೀ ದೇಶದಲ್ಲಿ ಉತ್ತಮ ಮಂಡಳಿ ಎನ್ನುವ ಹೆದರು ಪಡೆದಿದೆ. ಪರೀಕ್ಷೆ ಮತ್ತು ಮೌಲ್ಯಮಾಪನ ಬಹಳ ಚೆನ್ನಾಗಿ ಬಂದಿದೆ. 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 16,971 ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಮಾಡಲು ಅರ್ಜಿ ಸಲ್ಲಿಸಿದ್ದರು. 6ಕ್ಕಿಂತ ಕಡಿಮೆ ಅಂಕ ವ್ಯತ್ಯಾಸ 12,055 ಉತ್ತರ ಪತ್ರಿಕೆಗಳಲ್ಲಿ ಕಂಡುಬಂದಿದ್ದು, 3,882 ಉತ್ತರ ಪತ್ರಿಕೆಗಳಲ್ಲಿ 6ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಬಂದಿದೆ. ಆರಕ್ಕಿಂತ ಕಡಿಮೆ ವ್ಯತ್ಯಾಸ ಬಂದಿರುವ ಕಡೆ ಅದನ್ನು ಸರಿಪಡಿಸಿದ್ದು, ಆರಕ್ಕಿಂತ ಹೆಚ್ಚು ಅಂಕ ವ್ಯತ್ಯಾಸ ಕಂಡುಬಂದ ಪ್ರಕರಣದಲ್ಲಿ ಮರು ಮೌಲ್ಯಮಾಪನ ಶುಲ್ಕವನ್ನು ವಾಪಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮಕ್ಕಳು ಬಹಳ ಕಷ್ಟಪಟ್ಟು ಓದಿರುತ್ತಾರೆ. ಭರವಸೆ, ಕನಸು ಇರಿಸಿಕೊಂಡಿರಲಿದ್ದಾರೆ. ಆ ಕನಸು ಭಗ್ನಗೊಳಿಸುವ, ಜೀವ ಕಳೆದುಕೊಳ್ಳುವ ಸ್ಥಿತಿ ಬರಬಾರದು. ಹಾಗಾಗಿ ಅಂಕಗಳ ವ್ಯತ್ಯಾದ ಆಗಬಾರದು. ಹೆಚ್ಚಿನ ಮುತುವರ್ಜಿಯಿಂದ ಮೌಲ್ಯಮಾಪನ ಮಾಡುವಂತೆ ಮೌಲ್ಯಮಾಪಕರಿಗೂ ನಿರ್ದೇಶನ ನೀಡುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.