ETV Bharat / state

ಕೊನೆಯ ಎಸೆತದಲ್ಲಿ ಅಂಪೈರ್​ ಎಡವಟ್ಟು... ಆರ್​​ಸಿಬಿ ಅಭಿಮಾನಿಗಳ ಬೇಸರ

ನಿನ್ನೆ ಮುಂಬೈ ಹಾಗೂ ಆರ್​​ಸಿಬಿ ನಡುವೆ ಬೆಂಗಳೂರಿನಲ್ಲಿ ನಡೆದ ಐಪಿಎಲ್​ ಪಂದ್ಯದ ಕೊನೆಯ ಎಸೆತ ವಿವಾದಕ್ಕೆ ಕಾರಣವಾಗಿದೆ. ಕೊನೆಯ ಎಸೆತದಲ್ಲಿ ನೋಬಾಲ್​ ನೀಡದಿರುವುದು ಆರ್​ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅಂಪೈರ್​ ವಿವಾದಾತ್ಕ ತೀರ್ಪಿನ ಬಗ್ಗೆ ಅಭಿಮಾನಿಗಳ ಬೇಸರ
author img

By

Published : Mar 29, 2019, 8:15 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆಯಿಂದ ಐಪಿಎಲ್ ಹಂಗಾಮ ಶುರುವಾಗಿದೆ. ತವರು ನೆಲದಲ್ಲಿ ಮೊದಲ ಪಂದ್ಯವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಸೋಲು ಅನುಭವಿಸಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಇನ್ನು ಕೊನೆಯ ಎಸೆತದಲ್ಲಿ ಆರ್​ಸಿಬಿ ಗೆಲುವಿಗೆ 7 ರನ್​ ಬೇಕಾಗಿದ್ದಾಗ ಮಲಿಂಗಾ ನೋ ಬಾಲ್​ ಎಸೆದಿದ್ದರು. ಆದರೆ ಅಂಪೈರ್​ ಅದನ್ನು ನೋ ಬಾಲ್​ ಕೊಡಲಿಲ್ಲ. ಆ ಎಸೆತ ಎದುರಿಸಿದ್ದ ಶಿವಂ ದುಬೆ ಕೇವಲ ಒಂದು ರನ್​ ಗಳಿಸಿದರು. ಹೀಗಾಗಿ ಆರ್​ಸಿಬಿ ಗೆಲುವಿನ ಆಸೆ ಕಮರಿತು.

ಅಂಪೈರ್​ ವಿವಾದಾತ್ಕ ತೀರ್ಪಿನ ಬಗ್ಗೆ ಅಭಿಮಾನಿಗಳ ಬೇಸರ

ಇನ್ನು ಅಂಪೈರ್​​ ನಿರ್ಣಯವು ಪಂದ್ಯ ನೋಡಲು ಬಂದಿದ್ದ ಆರ್​​ಸಿಬಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಡಿ ಸೋತ ತಂಡಕ್ಕೆ ಅಂಪೈರ್​​ ತೀರ್ಪು ಮುಳುವಾಯಿತು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನೋಬಾಲ್​ ನೀಡಿದ್ದರೆ ಮುಂದಿನ ಎಸೆತದಲ್ಲಿ ಪಂದ್ಯದ ರಿಸಲ್ಟ್​​ ಬದಲಾಗಬಹುದಿತ್ತು ಎಂಬೆಲ್ಲ ಮಾತುಗಳು ಅಭಿಮಾನಿಗಳಿಂದ ಕೇಳಿಬಂದವು. ಪಂದ್ಯ ಮುಗಿಸಿ ಹೊರ ಬಂದ ಅಭಿಮಾನಿಗಳು ಈಟಿವಿ ಭಾರತ​ ಜೊತೆ ಏನೆಲ್ಲಾ ಮಾತನಾಡಿದರು ಎಂಬುದನ್ನು ನೀವೇ ನೋಡಿ...

sample description

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.