ETV Bharat / state

ಸಾಧನೆಗೈದ ಪೊಲೀಸರಿಗೆ ಸಿಎಂ, ರಾಜ್ಯಪಾಲರಿಂದ ರಾಷ್ಟ್ರಪತಿ ಪದಕ ಪ್ರದಾನ - kannadanews

ಬೆಂಗಳೂರಿನಲ್ಲಿ 2019ರ ರಾಷ್ಟ್ರಪತಿಯವರ ಪೊಲೀಸ್ ಪದಕ ಪ್ರದಾನ ಸಮಾರಂಭದಲ್ಲಿ ಉತ್ತಮ ಸಾಧನೆಗೈದ 65 ಪೊಲೀಸರಿಗೆ ಪದಕ ಪ್ರದಾನ ಮಾಡಲಾಯ್ತು.

ಸಾಧನೆಗೈದ ಪೊಲೀಸರಿಗೆ ರಾಷ್ಟಪತಿ ಪದಕ ಪ್ರದಾನ
author img

By

Published : Aug 1, 2019, 3:29 AM IST

ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ನಡೆದ 2019ರ ರಾಷ್ಟ್ರಪತಿಯವರ ಪೊಲೀಸ್ ಪದಕ ಪ್ರದಾನ ಸಮಾರಂಭದಲ್ಲಿ ಉತ್ತಮ ಸಾಧನೆಗೈದ ಪೊಲೀಸರಿಗೆ ಪದಕ ಪ್ರದಾನ ಮಾಡಲಾಯ್ತು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ .ಎಸ್ ಯಡಿಯೂರಪ್ಪ, ಬಿಜೆಪಿ ಮುಖಂಡರಾದ ಆರ್ ಅಶೋಕ್ , ಅಶ್ವತ್ ನಾರಾಯಣ್, ಡಿಜಿಪಿ ನೀಲಮಣಿ ಎನ್​ ರಾಜು, ನಗರ ಪೊಲೀಸ್​ ಆಯುಕ್ತ ಅಲೋಕ್ ಕುಮಾರ್, ಕಮಲ್ ಪಂಥ್, ಪ್ರವೀಣ್ ಸೂದ್ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ರು.

ಕಾರ್ಯಕ್ರಮದಲ್ಲಿ ಒಟ್ಟು 65 ಮಂದಿ ಪೊಲೀಸರಿಗೆ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪದಕ ಪ್ರದಾನ ಮಾಡಿದ್ರು. ಎಡಿಜಿಪಿ ಸಲೀಂ, ಮಾಲಿನಿ ಕೃಷ್ಣಮೂರ್ತಿ, ಎಎಸ್ಪಿ ಬಲರಾಮೇಗೌಡ, ಡಿವೈಎಸ್ಪಿ ಮರಿಯಪ್ಪ, ವಾಲೈಂಟಿನ್ ಡಿಸೋಜಾ, ಇನ್ಸ್ಪೆಕ್ಟರ್ ಸಿದ್ದಲಿಂಗಯ್ಯ ಸೇರಿ ಇನ್ನಿತರರಿಗೆ ಪದಕ ಪ್ರದಾನ ಮಾಡಲಾಯ್ತು.

ಸಾಧನೆಗೈದ ಪೊಲೀಸರಿಗೆ ರಾಷ್ಟ್ರಪತಿ ಪದಕ ಪ್ರದಾನ

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ರಾಷ್ಟ್ರಪತಿ ಪದಕ್ಕೆ ಭಾಜನಾರಾಗಿರುವ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಅಭಿನಂದನೆಗಳು. ರಾಜ್ಯದ ಕಾನೂನು ಸುವ್ಯವಸ್ಥೆ ಮೂಲಕ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಜಾಗೃತೆಯಿಂದ ಕೆಲಸ ಮಾಡ್ತಾರೆ. ಹೀಗಾಗಿ ಪ್ರತಿವರ್ಷ ಸಾಧನೆ ಮಾಡಿದವರಿಗೆ ರಾಷ್ಟ್ರಪತಿ ಸೇವಾ ಪದಕ ಪ್ರದಾನ ಮಾಡಲಾಗುತ್ತೆ ಎಂದ್ರು. ಸಮಾಜದ ದುಷ್ಟ ಶಕ್ತಿಗಳನ್ನ ಮಟ್ಟ ಹಾಕಲು ಸದಾ ಮುಂದಾಗಿರಬೇಕು, ನಿಷ್ಠೆಯಿಂದ ಪ್ರಾಮಾಣಿಕ ಕೆಲಸ ಮಾಡುವರಿಗೆ ನಮ್ಮ ಸರ್ಕಾರ ಸಹಾಯ ಮಾಡುತ್ತೆ ಎಂದು ಇದೇ ವೇಳೆ ಸಿಎಂ ಅಭಯ ನೀಡಿದ್ರು.

Intro:Body:ಐಎಂಎ ವಂಚನೆ ಪ್ರಕರಣದಲ್ಲಿ ಶಾಸಕ ರೋಷನ್ ಬೇಗ್ ಎಸ್ಐಟಿ ವಶಕ್ಕೆ..!

ಬೆಂಗಳೂರು:
ಐಎಂಎ ವಂಚನೆ ಪ್ರಕರಣ ಸಂಬಂಧ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ನೊಂದಿಗೆ ಹಣದ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರೂ ಕಾಲಾವಕಾಶಕ್ಕೆ ಕೋರಿ ಮನವಿ ಮಾಡಿ ದುಬೈಗೆ ಎಸ್ಕೇಪ್ ಆಗ್ತಾ ಇದ್ದಾರೆ ಮಾಹಿತಿ ಮೇರೆಗೆ ಶಿವಾಜಿನಗರ ಶಾಸಕ ಆರ್.ರೋಷನ್ ಬೇಗ್ ನನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಐಎಂಎ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮನ್ಸೂರ್ ಖಾನ್ ಹರಿಬಿಟ್ಟಿದ್ದ ಆಡಿಯೊದಲ್ಲಿ ರೋಷನ್ ಬೇಗ್ ಗೆ 400 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದ‌. ಈ‌ ಮಾಹಿತಿ ಆಧರಿಸಿ ತನಿಖೆ ಕೈಗೊಂಡಿದ್ದ ಎಸ್ಐಟಿ ಪೊಲೀಸರು ಕಳೆದ ಜು.5 ರಂದು ವಿಚಾರಣೆಗೆ ಹಾಜರಾಗುವಂತೆ‌ ನೊಟೀಸ್ ಜಾರಿ ಮಾಡಿದ್ದರು. ವೈಯಕ್ತಿಕ ಕಾರಣ‌ವೊಡ್ಡಿ ವಿಚಾರಣೆಗೆ ಗೈರು ಹಾಜರಾಗಿದ್ದರು.‌ ನಂತರ ಎರಡನೇ ಬಾರಿಗೆ ನೊಟೀಸ್ ನೀಡಿ ಇಂದು ಹಾಜರಾಗುವಂತೆ ಹೇಳಿತ್ತು. ಇದಕ್ಕೆ ಉತ್ತರಿಸಿದ ಬೇಗ್ 25 ರಂದು ವಿಚಾರಣೆ ಹಾಜರಾಗುವುದಾಗಿ ಹೇಳಿ ಕಾಲಾವಕಾಶ ಕೋರಿದ್ದರು. ಇದನ್ನು ನಿರಾಕರಿಸಿದ ಎಸ್ಐಟಿ 19 ರಂದು ತಮ್ಮ ಮುಂದೆ ಹಾಜರಾಗುವಂತೆ ಹೇಳಿತ್ತು.
ಈ ಎಲ್ಲಾ ಬೆಳವಣಿಗೆ ನಡುವೆಯು ರೋಷನ್ ಬೇಗ್ ಮುಂಬೈನಿಂದ ದುಬೈಗೆ ಹಾರಲು ಕೆಂಪೇಗೌಡ ಏರ್ ಪೋರ್ಟ್ ಗೆ ಬಳಿ ಹೋಗಿದ್ದರು. ಬೇಗ್ ಅವರ ಚಲನವಲನ ಮೇಲೆ ಕಣ್ಣಿಟ್ಟಿದ್ದ ಎಸ್ಐಟಿ ತನಿಖಾಧಿಕಾರಿ ಗಿರೀಶ್ ನೇತೃತ್ವದ ತಂಡ ಏರ್ ಪೋರ್ಟ್ ಗೆ ತೆರಳಿ ರೋಷನ್ ಬೇಗ್ ವಶಕ್ಕೆ ಪಡೆದುಕೊಂಡಿದ್ದಾರೆ.

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.