ETV Bharat / state

ವಿನಯ್ ಕುಲಕರ್ಣಿ ಬಂಧನದ ಹಿಂದೆ ರಾಜಕೀಯ ಪಿತೂರಿ: ಸುರ್ಜೆವಾಲಾ, ನೀರಲಕೇರಿ ಆಕ್ರೋಶ - ಸುರ್ಜೆವಾಲಾ ಟ್ವೀಟ್​

ಯೋಗೇಶ್​ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್​​ ಮಾಜಿ ಸಚಿವ ವಿನಯ್​ ಕುಲಕರ್ಣಿ ಸಿಬಿಐ ಕಸ್ಟಡಿಗೆ ಒಳಪಟ್ಟಿದ್ದು, ಕುಲಕರ್ಣಿ ಬಂಧನದ ಹಿಂದೆ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದ ಷಡ್ಯಂತ್ರ ಅಡಗಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Surjewala
ಸುರ್ಜೆವಾಲಾ, ನೀರಲಕೇರಿ
author img

By

Published : Nov 7, 2020, 2:35 PM IST

Updated : Nov 7, 2020, 4:09 PM IST

ಬೆಂಗಳೂರು: ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಹಿಂದೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದ ರಾಜಕೀಯ ಪಿತೂರಿ ಇದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

  • Congress Leader, Vinay Kulkarni’s arrest by the ‘puppet CBI’ reflects the blatant conspiracy & malicious intent of CM, Yediyurappa & BJP leadership.

    Yediyurappa ji should know that Congress leaders will not be cowed down by such cowardly attacks of BJP & its pawn, the CBI.
    1/2

    — Randeep Singh Surjewala (@rssurjewala) November 7, 2020 " class="align-text-top noRightClick twitterSection" data=" ">

ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ಬಿಜೆಪಿ ಸರ್ಕಾರ ಸಿಬಿಐ ಸಂಸ್ಥೆಯನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡು ಕಾಂಗ್ರೆಸ್ ನಾಯಕರಾದ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿರುವುದು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿಯ ರಾಜಕೀಯ ಪಿತೂರಿಯನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ನಾಯಕರು ಇಂತಹ ಬೆದರಿಕೆ ತಂತ್ರಗಳಿಗೆ ಎಂದಿಗೂ ಜಗ್ಗುವುದಿಲ್ಲ ಎಂಬುದನ್ನು ಯಡಿಯೂರಪ್ಪ ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

  • 2/2
    A fledgling Yediyurappa Govt & BJP misuses its frontal organizations, the CBI-ED-Income Tax to hound Congress leaders- Sh. D.K.Shivkumar, Sh. G. Parameshwara, Sh. Vinay Kulkarni & many others.

    Pl Remember, our resolve to fight for people only becomes stronger by such malice.

ಅಸ್ಥಿರವಾಗಿರುವ ಯಡಿಯೂರಪ್ಪ ಸರ್ಕಾರವು ತನ್ನ ಮುಂಚೂಣಿ ಘಟಕಗಳಾದ ಸಿಬಿಐ ಹಾಗೂ ಇಡಿ ಬಳಸಿಕೊಂಡು ಡಿ‌ಕೆ ಶಿವಕುಮಾರ್, ಡಾ. ಜಿ ಪರಮೇಶ್ವರ್, ವಿನಯ್ ಕುಲಕರ್ಣಿ ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರನ್ನು ಹೆಣೆಯಲು ಯತ್ನಿಸುತ್ತಿದೆ. ಈ ತಂತ್ರಗಳು ಜನರಿಗಾಗಿ ಹೋರಾಡುವ ನಮ್ಮ ಸಂಕಲ್ಪ ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂಬುದನ್ನು ಬಿಜೆಪಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸುರ್ಜೆವಾಲಾ ಟ್ವೀಟ್​​ನಲ್ಲಿ ಎಚ್ಚರಿಸಿದ್ದಾರೆ.

ಸಂವಿಧಾನ ಬದ್ಧ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಬಾರದು ಎಂದ ನೀರಲಕೇರಿ:

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಧಾರವಾಡದಲ್ಲಿ ವಿನಯ್​ ಕುಲಕರ್ಣಿ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾನೂನಾತ್ಮಕವಾಗಿ ಏನು ಕ್ರಮ ತೆಗೆದುಕೊಳ್ಳಬೇಕೊ‌ ಅದನ್ನು ಸರ್ಕಾರ ತೆಗೆದುಕೊಳ್ಳಲಿ, ಕಾನೂನಿನ ಮುಂದೆ ಎಲ್ಲರೂ ಒಂದೆ ಆದರೆ ಸರ್ಕಾರ ಸಂವಿಧಾನ ಬದ್ಧ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಬಾರದು. ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸಲಿ. ಉದ್ದೇಶಪೂರ್ವಕವಾಗಿ ತಪ್ಪಿತಸ್ಥರನ್ನಾಗಿ ಮಾಡುವುದು ಸರಿಯಾದ ಕ್ರಮವಲ್ಲ. ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ವಿನಂತಿಸಿಕೊಳ್ಳುತ್ತೇನೆ ಎಂದರು.

ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ವಿನಯ್ ಕುಲಕರ್ಣಿ ಪರವಾಗಿ ಧ್ವನಿ ಎತ್ತಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಕೂಡ ಈಗ ಕೈ ನಾಯಕರ ದನಿಗೆ ಬೆಂಬಲಿಸಿ ನಿಂತಿದ್ದಾರೆ.

Last Updated : Nov 7, 2020, 4:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.