ETV Bharat / state

ಸಚಿವ ಶ್ರೀರಾಮುಲು ಪುತ್ರಿಯ ವಿವಾಹ ಸಮಾರಂಭ: ನವ ಜೋಡಿಗೆ ಶುಭ ಕೋರಿದ ಡಿಕೆಶಿ

ಇಂದು ನಗರದ ಖಾಸಗಿ ಹೋಟೆಲ್​ನಲ್ಲಿ ಜರುಗಿದ ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ ಅವರ ಮದುವೆ ನಿಶ್ಚಿತಾರ್ಥ ಸಮಾರಂಭಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಗಮಿಸಿ ನವಜೋಡಿಗೆ ಶುಭ ಕೋರಿದ್ರು.

ಜೋಡಿಗೆ ಶುಭ ಕೋರಿದ ಡಿಕೆಶಿ
DK Shivakumar wishes new couple
author img

By

Published : Dec 18, 2019, 5:00 PM IST

ಬೆಂಗಳೂರು: ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ ಮದುವೆ ನಿಶ್ಚಿತಾರ್ಥ ಸಮಾರಂಭ ಇಂದು ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪಾಲ್ಗೊಂಡು ನವ ದಂಪತಿಗೆ ಶುಭ ಕೋರಿದರು.

ಶ್ರೀರಾಮುಲು ಪುತ್ರಿಯ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ

ನಗರದ ತಾಜ್ ವೆಸ್ಟೆಂಡ್​ ಹೋಟೆಲ್​ನಲ್ಲಿಆರೋಗ್ಯ ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಮದುವೆ ನಿಶ್ಚಿತಾರ್ಥವು ಹೈದರಾಬಾದ್​ ಮೂಲದ ಉದ್ಯಮಿ ಲಲಿತ್​ ಜೊತೆ ನಿಶ್ಚಿತಾರ್ಥ ಸಮಾರಂಭವು ಅದ್ಧೂರಿಯಾಗಿ ಜರುಗಿದ್ದು, ಈ ಕಾರ್ಯಕ್ರಮಕ್ಕೆ ಸಂಬಂಧಿಕರು, ರಾಜಕಾರಣಿಗಳು, ಗಣ್ಯವ್ಯಕ್ತಿಗಳು ಆಗಮಿಸಿದ್ದರು. ಹಾಗೆಯೇ ಡಿ.ಕೆ. ಶಿವಕುಮಾರ್ ಕೂಡ ಆಗಮಿಸಿ ರಕ್ಷಿತಾ ಹಾಗೂ ಲಲಿತ್​ ಅವರಿಗೆ ಶುಭಕೋರಿದರು.

ಡಿಕೆಶಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಚಿವ ಸೋಮಣ್ಣ ಕೂಡ ಆಗಮಿಸಿದ್ದು, ಇಬ್ಬರೂ ನಾಯಕರು ಮುಖಾಮುಖಿಯಾಗಿ ಕೆಲಕಾಲ ಉಭಯ ಕುಶಲೋಪರಿ ನಡೆಸಿದರು. ವೇದಿಕೆಯೇರಿದ ಡಿ ಕೆ ಶಿವಕುಮಾರ್ ಅವರನ್ನು ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ ಬರಮಾಡಿಕೊಂಡು ರಕ್ಷಿತಾ ಹಾಗೂ ಲಲಿತ್​ಗೆ ಪರಿಚಯಿಸಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಉಪಸ್ಥಿತರಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗುವಂತೆ ನೋಡಿಕೊಂಡರು. ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು, ಚಿತ್ರರಂಗದ ಪ್ರಮುಖರು ಹಾಗೂ ರಾಜಕೀಯ ನಾಯಕರು ಸಮಾರಂಭದಲ್ಲಿ ಭಾಗವಹಿದ್ದರು.

Intro:newsBody:ಶ್ರೀ ರಾಮುಲು ಪುತ್ರಿ ರಕ್ಷಿತಾ ಹಾಗೂ ಉದ್ಯಮಿ ಲಲಿತ್ ಜೋಡಿಗೆ ಶುಭ ಕೋರಿದ ಡಿಕೆಶಿ

ಬೆಂಗಳೂರು: ನಗರದ ತಾಜ್ ವೆಸ್ಟೆಂಡ್ ನಲ್ಲಿ ಬುಧವಾರ ನಡೆದ ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ ಮತ್ತು ಲಲಿತ್ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪಾಲ್ಗೊಂಡರು.
ಇಂದು ದಿನವಿಡೀ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಗಣ್ಯರು ರಾಮುಲು ಅವರ ಸಂಬಂಧಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡು ರಕ್ಷಿತಾ ಹಾಗೂ ಲಲಿತ್ ಜೋಡಿಗೆ ಶುಭಹಾರೈಸಿ ತೆರಳಿದ್ದಾರೆ. ಡಿಕೆ ಶಿವಕುಮಾರ್ ಆಗಮಿಸಿ ರಕ್ಷಿತಾ ಹಾಗೂ ಲಲಿತ ಅವರಿಗೆ ಶುಭಕೋರಿ ತೆರಳಿದರು.
ಡಿಕೆಶಿ ಭೇಟಿ ನೀಡಿದ ಸಂದರ್ಭವೇ ಸಚಿವ ಸೋಮಣ್ಣ ಕೂಡ ಆಗಮಿಸಿದ್ದರು. ಇಬ್ಬರೂ ನಾಯಕರು ಮುಖಾಮುಖಿಯಾಗಿ ಕೆಲಕಾಲ ಉಭಯಕುಶಲೋಪರಿ ನಡೆಸಿದರು. ವೇದಿಕೆಯೇರಿದ ಡಿಕೆ ಶಿವಕುಮಾರ್ ಅವರನ್ನು ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ ಬರಮಾಡಿಕೊಂಡು ರಕ್ಷಿತಾ ಹಾಗೂ ಲಲಿತ್ ಗೆ ಪರಿಚಯಿಸಿದರು.
ವೆಸ್ಟ್ ಎಂಡ್ ಹೋಟೆಲ್ ವಿಶೇಷ ವೇದಿಕೆ ಮೇಲೆ ನಡೆದ ನಿಶ್ಚಿತಾರ್ಥ ಸಮಾರಂಭದ ಉದ್ದಕ್ಕೂ ಮಾಜಿ ಸಚಿವ ಜನಾರ್ದನ ರೆಡ್ಡಿ ಉಪಸ್ಥಿತರಿದ್ದು ಕಾರ್ಯಕ್ರಮದ ಅಚ್ಚುಕಟ್ಟಾಗಿ ಜರುಗುವಂತೆ ನೋಡಿಕೊಂಡರು. ಶ್ರೀರಾಮುಲು ದಂಪತಿ ಹಾಗೂ ಲಲಿತ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಆಗಮಿಸಿದ ಗಣ್ಯರು ಹಾಗೂ ಅತಿಥಿಗಳನ್ನು ಬರಮಾಡಿಕೊಂಡು ರಕ್ಷಿತಾ ಹಾಗೂ ಲಲಿತ್ ಪರಿಚಯಿಸುವ ಕಾರ್ಯ ಮಾಡಿದರು. ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ನಿಶ್ಚಿತಾರ್ಥ ಸಮಾರಂಭಕ್ಕೆ ಆಗಮಿಸಿದ್ದರು. ಚಿತ್ರರಂಗದ ಪ್ರಮುಖರು ಹಾಗೂ ರಾಜಕೀಯ ನಾಯಕರು ಆಗಮಿಸಿದ ಸಂದರ್ಭ ವೇದಿಕೆಯ ಮೇಲೆ ಸಾಕಷ್ಟು ಸಂಖ್ಯೆಯ ಜನ ಸೇರಿ ಒಂದಿಷ್ಟು ಗೊಂದಲ ಸೃಷ್ಟಿಸಿದರು. ಗಣ್ಯರು ತೆರಳುವ ವೇಳೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದು ಕಂಡುಬಂತು.
ಬಂದವರಿಗೆಲ್ಲ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರಿಗೆ ಯಾವುದೇ ವ್ಯಕ್ತಿಯ ಆಗದಂತೆ ವ್ಯವಸ್ಥಿತವಾಗಿ ಊಟೋಪಚಾರ ಮಾಡಲಾಗಿತ್ತು. ವಿವಿಧ ಬಗೆಯ ಭಕ್ಷ್ಯ ಭೋಜನ ಗಮನಸೆಳೆಯಿತು.

Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.