ಬೆಂಗಳೂರು : ಮಹದಾಯಿ ಹೋರಾಟಗಾರರು ಪ್ರತಿಭಟನೆ ಕೈಬಿಟ್ಟ ವೇಳೆ, ರೈಲ್ವೇ ನಿಲ್ದಾಣಕ್ಕೆ ಬಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರೈತರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್, ರಾಜ್ಯಪಾಲರ ಬಂಗಲೆ ಜನರ ತೆರಿಗೆ ದುಡ್ಡಿನಲ್ಲಿ ಇರುವುದು. ಅಲ್ಲಿನ ವ್ಯವಸ್ಥೆ ನಡೆಯುತ್ತಿರುವುದು ತೆರಿಗೆ ದುಡ್ಡಿನಿಂದ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡು ರೈತರು ಆಗಮಿಸಿದ್ದರು. ಅವರನ್ನ ಕನಿಷ್ಟ ಸೌಜನ್ಯಕ್ಕಾದ್ರೂ ಭೇಟಿಯಾಗಿಲಿಲ್ಲ. ಅವರೇನು ಟೆರರಿಸ್ಟ್ ಗಳೇ..? ಬಾಂಬ್ ಇಟ್ಕೊಂಡು ಬಂದಿದ್ರಾ..? ಹೆಚ್ಚು ಅಂದ್ರೆ ಹಸಿರು ಟವೆಲ್ ಒಂದು ಹಾಕಿಕೊಂಡು ಬಂದಿದಾರೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮನವಿಯನ್ನ ಪುರಸ್ಕಾರ ಮಾಡುವುದು, ಬಿಡುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದು. ಆದರೆ ಅವರನ್ನ ಭೇಟಿಯಾಗಿ ಮನವಿ ಪತ್ರವನ್ನೂ ತೆಗೆದುಕೊಳ್ಳಲ್ಲ ಅಂದ್ರೆ ಏನರ್ಥ. ರಾಜ್ಯಪಾಲರ ಮೇಲೆ ವಿಶ್ವಾಸ ಇಟ್ಕೊಂಡು ರೈತರು ಬಂದಿದ್ರು. ತಮ್ಮ ನೋವನ್ನ ಹೇಳಿಕೊಂಡು ಬಂದವರನ್ನ ಭೇಟಿ ಮಾಡದೇ ಇರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.