ETV Bharat / state

ಸರ್ಕಾರ ಬದಲಿಸಲು ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿರಬೇಕು: ಸಚಿವರ ಗೈರಿಗೆ ಮರಿತಿಬ್ಬೇಗೌಡ ಟಾಂಗ್​ - Bangalore

ಮುಖ್ಯಮಂತ್ರಿಗಳಿಗೆ ಹೆಚ್ಚು ಜವಾಬ್ದಾರಿ ಇರಲಿದೆ, ಹಾಗಾಗಿ ಬರುತ್ತಿಲ್ಲ ಅದನ್ನು ಒಪ್ಪಿಕೊಳ್ಳಬಹುದು. ಆದರೆ, ರಮೇಶ್ ಜಾರಕಿಹೊಳಿ ಅವರಿಗೆ ಏನು ಜವಾಬ್ದಾರಿ ಇದೆ. ಬಹುಶಃ ಸರ್ಕಾರ ಬದಲಾಯಿಸಲು ದೆಹಲಿಗೆ ತೆರಳಿರಬೇಕು ಎಂದು ಸಚಿವರ ಗೈರಿಗೆ ಮರಿತಿಬ್ಬೇಗೌಡ ಲೇವಡಿ ಮಾಡಿದರು.

Bangalore
ವಿಧಾನ ಪರಿಷತ್ ಕಲಾಪ: ಸಚಿವರ ಗೈರಿಗೆ ಮರಿತಿಬ್ಬೇಗೌಡ ಟಾಂಗ್​
author img

By

Published : Feb 4, 2021, 2:07 PM IST

ಬೆಂಗಳೂರು: ವಿಧಾನ ಪರಿಷತ್ ಕಲಾಪಕ್ಕೆ ಬರಲು ಜಲಸಂಪನ್ಮೂಲ ಸಚಿವರಿಗೆ ಸಮಯವೇ ಇಲ್ಲವಾಗಿದೆ. ಬಹುಶಃ ಅವರು ಸರ್ಕಾರ ಬದಲಿಸಲು ದೆಹಲಿಗೆ ಹೋಗಿರಬೇಕು ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆಡಳಿತ ಪಕ್ಷದ ಕಾಲೆಳೆದರು.

ವಿಧಾನ ಪರಿಷತ್​​ನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಹನುಂಮತ ನಿರಾಣಿ ಪ್ರಶ್ನೆಗೆ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪರ ಬೊಮ್ಮಾಯಿ ಉತ್ತರ ನೀಡಲು ಮುಂದಾದರು. ಇದಕ್ಕೆ ಪ್ರತಿ ಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಾವು ಈವರೆಗೂ ಸದನದಲ್ಲಿ ಜಾರಕಿಹೊಳಿ ಅವರನ್ನ ನೋಡಿಯೇ ಇಲ್ಲ. ನೀವೇ ಎಲ್ಲರ ಪರ ಉತ್ತರ ಕೊಟ್ಟರೆ ಹೇಗೆ? ಎಂದು ಪ್ರಶ್ನಿಸಿದರು.

ಅನಾರೋಗ್ಯದ ಕಾರಣದಿಂದ ಸದನಕ್ಕೆ ಬಂದಿಲ್ಲ ಎಂದು ಗೃಹ ಸಚಿವ ಬೊಮ್ಮಾಯಿ ಮಾಹಿತಿ ನೀಡಿದರು. ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಅವರ ಪರ ಉತ್ತರ ಕೊಡುತ್ತಿದ್ದೇನೆ ಎಂದರು. ‌ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಪ್ರಾಣೇಶ್ ಕೂಡ ಸಚಿವರಿಂದ‌ ಪತ್ರ ಬಂದಿದೆ ಎನ್ನುವ ಮಾಹಿತಿ ನೀಡಿ ಉತ್ತರ ನೀಡಲು ಬೊಮ್ಮಾಯಿ ಅವರಿಗೆ ಅವಕಾಶ ನೀಡಿದರು.

ಆದರೆ, ಇದಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸಚಿವರೇ ಇದ್ದಲ್ಲಿ ಉತ್ತಮವಾಗಲಿದೆ. ‌ಬೇರೆ ಸಚಿವರು ಉತ್ತರ ನೀಡುವುದು ಒಳ್ಳೆಯ ಸಂಪ್ರದಾಯ ಅಲ್ಲ. ಸಿಎಂ ಇಲ್ಲ, ಜಾರಕಿಹೊಳಿಯೂ ಇಲ್ಲ ಎಲ್ಲದಕ್ಕೂ ನೀವೇ ಉತ್ತರ ಕೊಟ್ಟರೆ ಹೇಗೆ ಎಂದು ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಸಾತ್ ನೀಡಿದ ಸಧ್ಯ ಮರಿತಿಬ್ಬೇಗೌಡ, ಮುಖ್ಯಮಂತ್ರಿಗಳಿಗೆ ಹೆಚ್ಚು ಜವಾಬ್ದಾರಿ ಇರಲಿದೆ, ಹಾಗಾಗಿ ಬರುತ್ತಿಲ್ಲ ಅದನ್ನು ಒಪ್ಪಿಕೊಳ್ಳಬಹುದು. ಆದರೆ ರಮೇಶ್ ಜಾರಕಿಹೊಳಿ ಅವರಿಗೆ ಏನು ಜವಾಬ್ದಾರಿ ಇದೆ. ಬಹುಶಃ ಸರ್ಕಾರ ಬದಲಾಯಿಸಲು ದೆಹಲಿಗೆ ತೆರಳಿರಬೇಕು. ಅದಕ್ಕೆ ಏಳು ದಿನದಿಂದ ಅಧಿವೇಶನ ನಡೆಯುತ್ತಿದ್ದರೂ ಸದನದಲ್ಲಿ ಅವರು ಮುಖವನ್ನೇ ತೋರಿಸಿಲ್ಲ. ಇವರು ಭಾರಿ ಜಲ ಸಂಪನ್ಮೂಲ ಸಚಿವರು ಎಂದು ಲೇವಡಿ ಮಾಡಿದರು.

ನಂತರ ಉತ್ತರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ 1,354 ಇಂಜಿನಿಯರ್​​ಗಳ ಖಾಯಂ ಸಿಬ್ಬಂದಿ ಇದೆ. ಸಿವಿಲ್ ಸೇರಿದಂತೆ ಇತರ ಇಂಜಿನಿಯರ್​​ಗಳಿಗೆ ಮಾತೃ ಇಲಾಖೆ, ಲೋಕೋಪಯೋಗಿ ಇಲಾಖೆ ಇತ್ತು. ಈಗ ಅದನ್ನು ವಿಂಗಡಣೆ ಮಾಡುವ ಕೆಲಸ ನಡೆಯುತ್ತಿದೆ. ಎಷ್ಟೇ ಜನ ಇಂಜಿನಿಯರ್ ನೇಮಕ ಮಾಡಿದರೂ ನೀರಾವರಿ ಇಲಾಖೆಗೆ ಬರುತ್ತಿಲ್ಲ, ಯೋಜನಾ ಪ್ರದೇಶಕ್ಕೆ ಹೋಗಬೇಕು ಎನ್ನುವ ಕಾರಣಕ್ಕೆ ಬರುತ್ತಿಲ್ಲ. ಹಾಗಾಗಿ ಇಲಾಖೆ ವಿಂಗಡಣೆ ಮಾಡಿದ‌ ನಂತರ ಎಲ್ಲ ಸರಿಯಾಗಲಿದೆ. ಇದಕ್ಕೆ ಜಲಸಂಪನ್ಮೂಲ ಇಲಾಖೆ ಪ್ರಥಮ ಆಧ್ಯತೆ ನೀಡಲಿದೆ ಎಂದರು.

ಯುಕೆಪಿ-3 ರಾಷ್ಟ್ರೀಯ ಯೋಜನೆ ಮಾಡಬೇಕು ಎನ್ನುವುದು ಸರ್ಕಾರದ ಇಚ್ಚೆ. ಆದರೆ, ಅಂತಿಮ‌ ಅಧಿಸೂಚನೆ ಇನ್ನು ಹೊರಬಿದ್ದಿಲ್ಲ. ‌ಒಮ್ಮೆ ‌ಅಧಿಸೂಚನೆ ಹೊರಬಿದ್ದ ನಂತರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಬೇಕಾದ ಅಗತ್ಯ ಅನುಮತಿ ಪಡೆಯಲಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.