ETV Bharat / state

ಸಾರಿಗೆ ಸಚಿವರಾಗಲು ಒಪ್ಪಿದ ರಾಮಲಿಂಗರೆಡ್ಡಿ; ಡಿ.ಕೆ.ಸೋದರರ ಮನವೊಲಿಕೆ ಪ್ರಯತ್ನ ಸಫಲ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಚಿವ ರಾಮಲಿಂಗರೆಡ್ಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿ ಕೆ ಶಿವಕುಮಾರ್ ಹಾಗೂ ರಾಮಲಿಂಗರೆಡ್ಡಿ
ಡಿ ಕೆ ಶಿವಕುಮಾರ್ ಹಾಗೂ ರಾಮಲಿಂಗರೆಡ್ಡಿ
author img

By

Published : May 28, 2023, 7:35 PM IST

ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೋರಮಂಗಲದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ನಿವಾಸಕ್ಕೆ ಇಂದು (ಭಾನುವಾರ) ತೆರಳಿ ಸಮಾಲೋಚನೆ ನಡೆಸಿದರು. ಸಾರಿಗೆ ಖಾತೆ ವಹಿಸಿಕೊಳ್ಳಲು ನಿರಾಕರಿಸಿದ್ದ ರೆಡ್ಡಿ ಮುನಿಸಿಕೊಂಡಿದ್ದರು. ತಮಗೆ ಬೇರೆ ಖಾತೆ ನೀಡುವಂತೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನವೊಲಿಸಲು ಡಿಕೆಶಿ ಇಂದು ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಫಲ ನೀಡಿದೆ. ರಾಮಲಿಂಗರೆಡ್ಡಿ ಸಾರಿಗೆ ಇಲಾಖೆ ವಹಿಸಿಕೊಳ್ಳಲು ಒಪ್ಪಿದ್ದಾರೆ ಎಂಬ ಮಾಹಿತಿ ದೊರೆತಿದೆ.

ರಾಮಲಿಂಗ ರೆಡ್ಡಿ ಅವರಿಗೆ ಸಾರಿಗೆ ಖಾತೆಯೇ ಫಿಕ್ಸ್ ಆಗಿದೆ. ಡಿ.ಕೆ.ಶಿವಕುಮಾರ್ ಮನವೊಲಿಕೆಗೆ ಬಗ್ಗಿದ ರೆಡ್ಡಿಗೆ ಹೆಚ್ಚುವರಿ ಖಾತೆಯ ಭರವಸೆಯೂ ಸಿಕ್ಕಿದೆ. ಸಿಎಂ ಜೊತೆ ಚರ್ಚಿಸಿ ಹೆಚ್ಚುವರಿ ಖಾತೆ ನೀಡುವ ಬಗ್ಗೆ ಮುಂದೆ ತೀರ್ಮಾನ ಮಾಡುವುದಾಗಿ ಡಿಕೆಶಿ ಭರವಸೆ ನೀಡಿದ ಮೇಲೆ ರೆಡ್ಡಿ ಸಮಾಧಾನಗೊಂಡಿದ್ದಾರೆ.

ಸಚಿವ ರಾಮಲಿಂಗರೆಡ್ಡಿಯವರ ಮನವೊಲಿಸುವಲ್ಲಿ ಸಫಲರಾದ ಡಿಕೆಶಿ
ಸಚಿವ ರಾಮಲಿಂಗರೆಡ್ಡಿ ಮನವೊಲಿಕೆ ಕಸರತ್ತು

ರಾಮಲಿಂಗ ರೆಡ್ಡಿ ನಿವಾಸದಲ್ಲಿ ಸಂಸದ ಡಿ.ಕೆ.ಸುರೇಶ್ ಬೆಳಗ್ಗೆ 11 ಗಂಟೆಯಿಂದಲೂ ಮನವೊಲಿಕೆ ಪ್ರಯತ್ನ ನಡೆಸಿದ್ದರು. ಇದಕ್ಕೆ ಬಗ್ಗದ ರೆಡ್ಡಿ ಪಟ್ಟು ಸಡಿಲಿಸಿರಲಿಲ್ಲ. ಹೀಗಾಗಿ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಮನವೊಲಿಸಲು ಯತ್ನಿಸಿ ಸಫಲವಾಗಿದ್ದಾರೆ.

ಡಾ.ಜಿ.ಪರಮೇಶ್ವರ್ ಮನವೊಲಿಕೆ ಬಾಕಿ: ಸಾರಿಗೆ ಇಲಾಖೆ ಸಂಬಂಧಿಸಿ ರಾಮಲಿಂಗ ರೆಡ್ಡಿ ಅಸಮಾಧಾನ ಎಷ್ಟು ಹೆಚ್ಚಾಗಿತ್ತೆಂದರೆ ಸಾರಿಗೆ ಇಲಾಖೆ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೆ ಕೊನೆಗೂ ಡಿಕೆಶಿ ಮನವೊಲಿಸುವಲ್ಲಿ ಸಫಲವಾಗಿದ್ದಾರೆ. ಅಲ್ಲಿಗೆ ರಾಜ್ಯ ಸಚಿವರಲ್ಲಿ ಅಸಮಾಧಾನಗೊಂಡಿದ್ದ ಇಬ್ಬರಲ್ಲಿ ಒಬ್ಬ ಸಚಿವರ ಮನವೊಲಿಕೆ ಆಗಿದೆ. ಇನ್ನೊಂದು ಗೃಹ ಖಾತೆ ಬೇಡ ಅನ್ನುತ್ತಿರುವ ಡಾ.ಜಿ.ಪರಮೇಶ್ವರ್ ಮನವೊಲಿಕೆ ಮಾಡುವುದು ಬಾಕಿ ಇದೆ.

ಹೊಸ ಸಚಿವರಿಗೆ ಸಿದ್ದರಾಮಯ್ಯ ಟಾರ್ಗೆಟ್‌: ಇನ್ನೊಂದೆಡೆ, ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಇದೀಗ ಸಿಎಂ ಸಿದ್ದರಾಮಯ್ಯ ನೂತನ ಸಚಿವರಿಗೆ ಹೊಸ ಗುರಿಗಳನ್ನು ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಈ ಗುರಿಗಳನ್ನು ನೀಡಲಾಗಿದೆ ಎಂಬುದು ತಿಳಿದುಬಂದಿದೆ.

ರಾಜ್ಯದ ಜನತೆ ನಮ್ಮ ಪಕ್ಷವನ್ನು ಬಹುಮತದಿಂದ ಗೆಲ್ಲಿಸಿದ್ದಾರೆ. ಆ ಮೂಲಕ ನಮಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೆ ಅನುಗುಣವಾಗಿ ಜನಪರ ಆಡಳಿತ ನೀಡಬೇಕಾದ ಹೊಣೆಗಾರಿಕೆ ನಮ್ಮದಾಗಿದೆ. ಜನರ ಸಮಸ್ಯೆಗಳನ್ನು ಸರಿಯಾಗಿ ಕೇಳಿಸಿಕೊಳ್ಳಿ. ತಮ್ಮ ತಮ್ಮ ಕ್ಷೇತ್ರದಲ್ಲೇ ಜನರ ಕುಂದು ಕೊರತೆಗಳನ್ನು ಬಗೆಹರಿಸಿ. ಸಣ್ಣ ಪುಟ್ಟ ಕೆಲಸಗಳಿಗೂ ಕ್ಷೇತ್ರದ ಜನ ಸರ್ಕಾರಿ ಕಚೇರಿಗಳಿಗೆ ಪದೇ ಪದೆ ಅಲೆಯುವುದನ್ನು ತಪ್ಪಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿಗಳ ಜಾರಿ, ಲೋಕಸಭೆ ಎಲೆಕ್ಷನ್‌ ಮೇಲೆ ಕಣ್ಣು: ಹೊಸ ಸಚಿವರಿಗೆ ಸಿದ್ದರಾಮಯ್ಯ ಟಾರ್ಗೆಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.