ಬೆಂಗಳೂರು: ನಾಳೆ ದೇಶದಲ್ಲಿ ಗಣರಾಜ್ಯೋತ್ಸವ ನಡೆಯುತ್ತಿದೆ. ದೆಹಲಿಯಲ್ಲಿ 1 ಲಕ್ಷ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ. ಅದೇ ರೀತಿ ಬೆಂಗಳೂರಿನಲ್ಲೂ ಎಲ್ಲಾ ವಾಹನಗಳಿಗೆ ರಾಷ್ಟ್ರಧ್ವಜ ಹಾಗೂ ಹಸಿರು ಬಾವುಟ ಕಟ್ಟಿ ನೈಸ್ ಜಂಕ್ಷನ್ನಿಂದ ಪ್ರಾರಂಭವಾಗುವ ಪರೇಡ್, ಫ್ರೀಡಂ ಪಾರ್ಕ್ ತಲುಪಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ದೆಹಲಿ ರೈತರ ಹೋರಾಟ ಎರಡು ತಿಂಗಳಿಂದ ನಡೆಯುತ್ತಿದೆ. ಹೋರಾಟ ಹತ್ತಿಕ್ಕಲು, ರೈತರ ಮೇಲೆ ಲಾಠಿ ಚಾರ್ಜ್, ಜಲಫಿರಂಗಿ ಬಳಕೆ ಮಾಡಿ, ರೈತರನ್ನು ಚದುರಿಸಲು ಸರ್ಕಾರ ಪ್ರಯತ್ನಿಸಿದೆ. ರೈತರು ಅಹಿಂಸಾ ತತ್ವದ ಸತ್ಯಾಗ್ರಹ ಮುಂದುವರಿಸಿದ್ದಾರೆ. ಕಾಯ್ದೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೂಚಿಸಿದೆ. 142 ಜನ ರೈತರು ಈಗಾಗಲೇ ಅಸುನೀಗಿದ್ದಾರೆ. ನಾಳೆ ದೇಶದಲ್ಲಿ ಗಣರಾಜ್ಯೋತ್ಸವ ನಡೆಯುತ್ತಿದೆ. ದೆಹಲಿಯಲ್ಲಿ 1 ಲಕ್ಷ ಟ್ರ್ಯಾಕ್ಟರ್ಗಳೊಂದಿಗೆ ಪರೇಡ್ ನಡೆಯಲಿದೆ. ಅದೇ ರೀತಿ ಬೆಂಗಳೂರಿನಲ್ಲೂ ಎಲ್ಲಾ ವಾಹನಗಳಿಗೆ ರಾಷ್ಟ್ರಧ್ವಜ ಹಾಗೂ ಹಸಿರು ಬಾವುಟ ಕಟ್ಟಿ ನೈಸ್ ಜಂಕ್ಷನ್ನಿಂದ ಪ್ರಾರಂಭವಾಗುವ ಪರೇಡ್, ಫ್ರೀಡಂ ಪಾರ್ಕ್ ತಲುಪಲಿದೆ. ಧ್ವಜಾರೋಹಣ ಆದ ಬಳಿಕ 10 ಸಾವಿರಕ್ಕೂ ಹೆಚ್ಚು ರೈತರು ಪರೇಡ್ ನಡೆಸಲಿದ್ದಾರೆ. ಅನೇಕ ಜನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪರೇಡ್ ನಡೆಸಲಿದ್ದಾರೆ ಎಂದು ಕೋಡಿಹಳ್ಳಿ ಹೇಳಿದರು.
ಗಣರಾಜ್ಯೋತ್ಸವ ಆಚರಣೆಗೆ ನಮ್ಮ ಯಾವ ವಿರೋಧವಿಲ್ಲ. ಆದರೆ ಶಾಂತಿಯುತವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಿರೋಧಿಸಿ ಪರೇಡ್ ನಡೆಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತ್ ಕುಮಾರ್ ಸಹ ತಿಳಿಸಿದರು.
ಇದನ್ನೂ ಓದಿ: ಜನವರಿ 28 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನ ಜಾರಿಗೆ ತಂದು, ರೈತರನ್ನ ಸರ್ವನಾಶ ಮಾಡಲು ಮುಂದಾಗಿದೆ. ಇದರ ವಿರುದ್ಧ ನಾಳೆ ಮೆರವಣಿಗೆ ಮಾಡಲು ಮುಂದಾಗಿದ್ದೇವೆ. ಸರ್ಕಾರಗಳು ಜನರಿಗೆ ಗೌರವವನ್ನ ಕೊಡಬೇಕು. ಜನಪರ ಕಾಯ್ದೆಗಳನ್ನು ತರುವ ಕೆಲಸ ಮಾಡಬೇಕು. ಜನರನ್ನ ಕೊರೊನಾ ಹಿನ್ನೆಲೆ ಮನೆಯಲ್ಲಿ ಲಾಕ್ ಮಾಡಿ ಕಾಯ್ದೆಯನ್ನ ಜಾರಿಗೆ ತಂದು, ನಂತರ ರೈತ ಹೋರಾಟವನ್ನ ತುಂಬ ಲಘುವಾಗಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ರಾಜ್ಯದೆಲ್ಲೆಡೆ ನಮ್ಮ ಸಂಘಟನೆಗಳ ನಡುವಿನ ಬಿನ್ನಮತವನ್ನ ಬಿಟ್ಟು ಎಲ್ಲಾ ರೈತರು, ರೈತರ ಬೆಂಬಲಿಗರು ಸೇರಿ ರೈತರ ಕಹಳೆಯನ್ನ ಮೊಳಗಿಸಲಿದ್ದೇವೆ ಎಂದು ಹೇಳಿದರು.
ಟ್ರ್ಯಾಕ್ಟರ್, ಬೈಕ್, ಕಾರುಗಳಲ್ಲಿ ಬಂದು ಪರೇಡ್ ನಡೆಸಲಿದ್ದೇವೆ. ದೇಶಾದ್ಯಂತ ರೈತರು ಅವರ ರಾಜ್ಯಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದಾರೆ. ಅದೇ ರೀತಿ ನಾವು ನಮ್ಮ ರಾಜ್ಯದಲ್ಲೂ ಹೋರಾಟ ಮಾಡುತ್ತಿದ್ದೇವೆ. ನಾಳೆ ಹೋರಾಟ ಶಾಂತಿಯುತವಾಗಿ ನಡೆಯಲಿದೆ. ಹಲವು ಜಿಲ್ಲೆಗಳಿಂದ ಈಗಾಗಲೇ ರೈತರು ಮೋಟಾರು ಬೈಕ್ಗಳಲ್ಲಿ ಆಗಮಿಸುತ್ತಿದ್ದಾರೆ. ಕೆಲವು ರೈತರು ರೈಲಿನಲ್ಲಿ ಅಗಮಿಸಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.