ETV Bharat / state

ರಂಗೇರಿದ ರಾಜ್ಯಸಭೆ ಕದನ ಕಣ: ಆರೂ ನಾಮಪತ್ರಗಳು ಕ್ರಮಬದ್ಧ.. ಕುತೂಹಲ ಕೆರಳಿಸಿದ ಚುನಾವಣೆ - ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆ

ರಾಜ್ಯಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿತ್ತು. ಇದುವರೆಗೂ ಯಾರೂ ನಾಮಪತ್ರ ವಾಪಸ್ ಪಡೆದಿಲ್ಲ, ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

rajya-sabha-polls-no-one-withdraws-nomination
ರಾಜ್ಯಸಭೆ ಚುನಾವಣೆ: ಯಾರೂ ನಾಮಪತ್ರ ವಾಪಸ್ ಪಡೆದಿಲ್ಲ.. ರಂಗೇರಿದ ಕದನ ಕಣ
author img

By

Published : Jun 3, 2022, 4:56 PM IST

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿಲ್ಲ. ಹೀಗಾಗಿ ಚುನಾವಣೆ ಮತ್ತಷ್ಟು ರಂಗೇರಿದ್ದು, ಜೂನ್ 10ರಂದು ಮತದಾನ ನಡೆಯಲಿದೆ.

ವಿಧಾನಸೌಧದಲ್ಲಿ ಇಂದು ಸಂಜೆ ಈ ಕುರಿತು ಮಾಹಿತಿ ನೀಡಿದ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಇದುವರೆಗೂ ಯಾರೂ ನಾಮಪತ್ರ ವಾಪಸ್ ಪಡೆದಿಲ್ಲ. ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೂನ್ 10 ರಂದು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅಂದೇ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ : ಮುಂದುವರಿದ ಕಾಂಗ್ರೆಸ್ - ಜೆಡಿಎಸ್‍ ಮೈತ್ರಿ ಗೊಂದಲ

ಮತ ಎಣಿಕೆಗೆ‌ ಫಾರ್ಮುಲಾ ಇದೆ. ಮೊದಲ ಸುತ್ತಿನಲ್ಲಿ ಮೊದಲ ಪ್ರಾಶಸ್ತ್ಯದ ಮತ ಎಣಿಕೆ, ಸಿ‌ಂಧು ಆಗಿರುವ ಮತಗಳ ಮೇಲೆ ಕೋಟಾ ನಿಗದಿಯಾಗಿರುತ್ತದೆ. ಸಿಂಧು ಮತಗಳು ಬದಲಾವಣೆಯಾದರೆ ಕೋಟಾ ಕೂಡಾ ಬದಲಾವಣೆ ಆಗುತ್ತದೆ. ಅದರೆ ಮೇಲೆ ಎರಡನೇ ಪ್ರಾಶಸ್ತ್ಯದ ಮತಗಳ ಮೌಲ್ಯ ಕೂಡಾ ಬದಲಾಗುತ್ತದೆ. ಈಗಲೇ ಯಾವುದನ್ನೂ ಹೇಳಲು ಸಾಧ್ಯವಾಗಲ್ಲ. ಮತ ಎಣಿಕೆ ಪ್ರಾರಂಭ ಆದಾಗ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದರು.

ಪ್ರತಿ ಸ್ಥಾನಕ್ಕೆ 45 ಮತಗಳು ಬರಬೇಕು. ನಾಲ್ಕನೇ ಸ್ಥಾನಕ್ಕೆ ಫಾರ್ಮುಲಾ ಪ್ರಕಾರ ಮತಗಳು ಬರಬೇಕು. ಕಡಿಮೆ ಮತ ಪಡೆದವರು ಎಲಿಮಿನೇಟ್ ಆಗುತ್ತಾರೆ. ಸಿಂಧುವಾದ ಮತಗಳ ಆಧಾರದಲ್ಲಿ ಕೋಟಾ ಫಿಕ್ಸ್ ಮಾಡಿ ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆ ಆಗುತ್ತದೆ ಎಂದು ವಿಶಾಲಾಕ್ಷಿ ತಿಳಿಸಿದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಹಿನ್ನೆಲೆ: ರಾಜ್ಯ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.