ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿರುವ ಅವರು, 10 ಸಾವಿರ ಬೆಡ್, ಏಷ್ಯಾದಲ್ಲೇ ದೊಡ್ಡದ್ದು ಎಂದೆಲ್ಲ ಹೇಳಿದ್ದು, ಕೇವಲ ಬೂಟಾಟಿಕೆಯೇ? ಎಂದು ಕೇಳಿದ್ದಾರೆ.
3 ದಿನ ಹತ್ತಾರು ಆಸ್ಪತ್ರೆಗಳನ್ನು ಅಲೆದು ಕೊನೆಗೆ ಪ್ರಾಣತೆತ್ತ ಈ ಮಗುವಿನ ಸಾವಿನ ನೈತಿಕ ಹೊಣೆ ನೀವು ಹೊರುತ್ತೀರಾ ಎಂದು ಸಿಎಂಗೆ ನೇರವಾಗಿ ಪ್ರಶ್ನಿಸಿದ್ದಾರೆ.
ಕೋವಿಡ್-19 ಚಿಕಿತ್ಸೆಗೆ ಅಗತ್ಯ ಪ್ರಮಾಣದಲ್ಲಿ ಹಾಸಿಗೆಗಳು ಸಿಗುತ್ತಿಲ್ಲ. ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೇವಲ ಭ್ರಷ್ಟಾಚಾರದಲ್ಲಿ ಸರ್ಕಾರ ತೊಡಗಿದೆ ಎಂದು ನಿರಂತರವಾಗಿ ಪ್ರತಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ. ಇದೀಗ ಚಂದ್ರಶೇಖರ್ ಆರೋಪ ಇದಕ್ಕೆ ಇನ್ನಷ್ಟು ಬಲ ತುಂಬಿದೆ.
ಇದನ್ನು ಓದಿ: ಗೃಹ ಕಚೇರಿ ಕೃಷ್ಣಾದಲ್ಲಿ ಮಗು ಕಳೆದುಕೊಂಡ ತಂದೆಯಿಂದ ಪ್ರತಿಭಟನೆಗೆ ಯತ್ನ!
ಈಗಾಗಲೇ ವಿದೇಶದಿಂದ ವಿದ್ಯಾರ್ಥಿಗಳನ್ನು ಕರೆತರುವ ಕಾರ್ಯದಲ್ಲಿ ತೊಡಗಿರುವ ಅವರು ಇನ್ನೊಂದು ಟ್ವೀಟ್ ಮಾಡಿದ್ದು, ಅದರಲ್ಲಿ, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕನ್ನಡವೇ ಕನ್ನಡಿಗರ ಶಕ್ತಿ. ಕನ್ನಡಿಗರ ಸ್ವಾಯತ್ತತೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬಂದ ಕೂಡಲೇ ಇಂತಹ ಅನ್ಯಾಯಗಳಿಗೆ ಸಿಡಿಲ ಮರಿಗಳಂತೆ ಪುಟಿದೇಳಬೇಕು, ಪ್ರತಿಭಟಿಸಬೇಕು.
ತಮ್ಮ ತಪ್ಪಿನ ಅರಿವಾಗಿ ತಾರತಮ್ಯವನ್ನು ಪುನರಾವರ್ತಿಸಲಾಗುವುದಿಲ್ಲ ಎಂದು ಮೆಕ್ಸಿಕೋದ ಭಾರತೀಯ ರಾಯಭಾರ ಕಚೇರಿ ಕನ್ನಡಿಗರಲ್ಲಿ ಕ್ಷಮೆ ಕೇಳಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.