ಬೆಂಗಳೂರು: ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸರು ವಿಭಿನ್ನ ಜಾಗೃತಿ ನಡೆಸುತ್ತಿದ್ದಾರೆ. ಇಂದು ರಾಜಾಜಿನಗರದ ಟ್ರಾಫಿಕ್ ಪೊಲೀಸರು ಗಣೇಶನ ವೇಷ ಧರಿಸಿ ವಾಹನ ಸವಾರರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು.
ಗಣಪನ ವೇಷಧಾರಿ ನನಗೆ ತಲೆ ಹೋಗಿ ಮತ್ತೆ ತಲೆ ಬಂದಿದೆ. ಆದರೆ, ಹೆಲ್ಮೆಟ್ ಹಾಕದೆ ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿದಾಗ ನಿಮಗೆ ತಲೆ ಬರಲ್ಲ. ಹೆಲ್ಮೆಟ್ ಧರಿಸಿ ನಿಮ್ಮ ತಲೆ ಉಳಿಸಿಕೊಳ್ಳಿ ಎಂದು ರಾಜಾಜಿನಗರ ಪಿಐ ಎಂ ಎ ಮಹೇಶ್ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ರು.
ಹೆಲ್ಮೇಟ್ ಹಾಕದ ಬೈಕ್ ಸವಾರರಿಗೆ ಗುಲಾಬಿ ಹೂ ಕೊಟ್ಟು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಅಂತಾ ಹೇಳ್ತಿರುವ ದೃಶ್ಯ ಸಾಮಾನ್ಯವಾಗಿತ್ತು.