ಬೆಂಗಳೂರು: ಇಂದು ನಡೆಯಲಿರುವ 10 ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ರಾಜಭವನವು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.
ಗಾಜಿನ ಮನೆಯ ಮೂಲೆ ಮೂಲೆಗಳಲ್ಲಿ ಶ್ವಾನದಳದಿಂದ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಗಾಜಿನ ಮನೆಯಲ್ಲಿ 1,000 ಆಸನ ವ್ಯವಸ್ಥೆ ಮಾಡಲಾಗಿದ್ದು, 200 ಆಸನಗಳು ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ಮೀಸಲಾಗಿವೆ. 100 ಆಸನಗಳನ್ನು ನೂತನ ಸಚಿವರ ಕುಟುಂಬಸ್ಥರಿಗೆ ಮೀಸಲಿರಿಸಲಾಗಿದೆ. ಹಾಗೆಯೇ 700 ಆಸನಗಳನ್ನು ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಮೀಸಲಿಡಲಾಗಿದೆ.
ಪಾಸ್ ಇದ್ದವರಿಗೆ ಮಾತ್ರ ರಾಜಭವನಕ್ಕೆ ಪ್ರವೇಶವಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಿನ್ನೆಲೆಯಲ್ಲಿ ರಾಜಭವನ ಸುತ್ತಮುತ್ತ ಭಾರಿ ಭದ್ರತೆ ಕಲ್ಪಿಸಲಾಗಿದೆ.