ETV Bharat / state

ರಾಜ್ಯದಲ್ಲಿ ಅಕಾಲಿಕ ಮಳೆ: ಫಸಲು ನೀರುಪಾಲು, ರೈತ ಕಂಗಾಲು - ಕರ್ನಾಟಕ ಮಳೆ ವರದಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ರೈತರ ಬೆಳೆಗಳು ನೆಲಕಚ್ಚುತ್ತಿವೆ. ಜುಲೈನಿಂದ ನವೆಂಬರ್‌ 16 ರವರೆಗೆ ಸುಮಾರು 7.31 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಹಲವು ಫಸಲು ಹಾನಿಗೊಳಗಾಗಿ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಪ್ರಾಥಮಿಕವಾಗಿ ಅಂದಾಜಿಸಿದೆ.

Heavy rains caused thousands of hectares of crop damage in Karnataka
ಅಕಾಲಿಕ ಮಳೆಗೆ ಸಿಲುಕಿದ ಫಸಲು
author img

By

Published : Nov 18, 2021, 9:15 PM IST

ಬೆಂಗಳೂರು: ರಾಜ್ಯದಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ (Unseasonal rain) ರೈತರು ಹೈರಾಣಾಗಿದ್ದಾರೆ.

ಹಿಂಗಾರು ಅವಧಿ ಮುಗಿದಿದ್ದರೂ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನೆಲಕಚ್ಚಿದ್ದು, ಇದರಿಂದಾಗಿ ರೈತ ಸಮುದಾಯ ಆತಂಕಕ್ಕೀಡಾಗಿದೆ. ಅಪಾರ ಪ್ರಮಾಣದ ಫಸಲು ಕೈಗೆ ಸಿಗದೆ ಕೊಳೆತು ಹೋಗುತ್ತಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ಬಂದಿದ್ದು, ಬೆಳೆ ಕಟಾವಿಗೆ ಮಳೆ ಅಡ್ಡಿಯಾಗಿದೆ. ಭತ್ತ, ರಾಗಿ, ಈರುಳ್ಳಿ, ಮೆಕ್ಕೆಜೋಳಕ್ಕೆ ಹೆಚ್ಚು ಹಾನಿಯಾಗಿದ್ದು, ಸತತ ಮಳೆ ಸುರಿಯುತ್ತಿರುವುದರಿಂದ ಗಿಡ ನೆಲಕ್ಕೆ ಬಿದ್ದಿದೆ. ಇನ್ನು ಭತ್ತ ಕಟಾವು ಮಾಡಿದರೂ ಸಂಗ್ರಹಕ್ಕೆ ಸ್ಥಳದ ಕೊರತೆ ಎದುರಾಗಿದೆ.

ಜುಲೈನಿಂದ ನವೆಂಬರ್‌ 16 ರವರೆಗೆ ಸುಮಾರು 7.31 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಹಲವು ಫಸಲು ಹಾನಿಗೊಳಗಾಗಿ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಪ್ರಾಥಮಿಕವಾಗಿ ಅಂದಾಜಿಸಿದೆ.

ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ 3 ಜಿಲ್ಲೆಯಲ್ಲೇ ಮುಕ್ಕಾಲು ಭಾಗ ಮಳೆಗೆ ಹಾನಿಯಾಗಿದ್ದು, ಬೆಳಗಾವಿಯಲ್ಲಿ 1,15,661 ಹೆಕ್ಟೇರ್ ಪ್ರದೇಶ, ಕಲಬುರಗಿಯಲ್ಲಿ 2,44,223 ಹೆಕ್ಟೇರ್‌ ಹಾಗೂ ಬೀದರ್‌ನಲ್ಲಿ 1,84,649 ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಹಾನಿಗೀಡಾದ ಬೆಳೆಗಳು: ರಾಗಿ, ಭತ್ತ, ಜೋಳ, ಅಡಿಕೆ, ಕಾಫಿ, ಈರುಳ್ಳಿ, ಕಾಳುಮೆಣಸು, ಬಾಳೆ, ಪಪ್ಪಾಯ, ಆಲೂಗಡ್ಡೆ, ಮೆಣಸಿನಕಾಯಿ, ಹೆಸರು, ಉದ್ದು, ಸೋಯಾಬೀನ್, ತೊಗರಿ, ಅಲಸಂಧೆ, ಶೇಂಗಾ, ಹತ್ತಿ ತರಕಾರಿ ಸೇರಿದಂತೆ ಹಲವಾರು ಬೆಳೆಗಳು ಮಳೆಗೆ ನೆಲಕಚ್ಚುತ್ತಿದೆ.

ಹಲವು ಜಿಲ್ಲೆಗಳಲ್ಲಿ ಅಗತ್ಯ ಇರುವಾಗ ಮಳೆ ಬಾರದೇ ಬೆಳೆ ಹಾನಿಯಾಗಿದ್ದರೆ, ಇನ್ನೂ ಕೆಲವೆಡೆ ಮಳೆ ಹೆಚ್ಚಾಗಿ ಹಾನಿಯಾಗಿದೆ. ಜುಲೈವರೆಗೆ ಸುಮಾರು 2 ಸಾವಿರ ರೂ.ಗಳಷ್ಟು ಬೆಳೆ ಹಾನಿಯಾಗಿದೆ ಎಂಬುದು ಸರ್ಕಾರ ಅಂದಾಜು ಮಾಡಿದೆ. ಆದರೆ ನಂತರ ಆಗಿರುವ ಬೆಳೆ ಹಾನಿ ಬಗ್ಗೆ ಅಂದಾಜು ಮಾಡಿಲ್ಲ. ಬೆಳೆ ಹಾನಿ ಬಗ್ಗೆ ಮೊದಲು ಕೃಷಿ ಇಲಾಖೆ ನಷ್ಟದ ಅಂದಾಜಿನ ಬಗ್ಗೆ ಪ್ರಾಥಮಿಕ ವರದಿಯನ್ನು ಕಂದಾಯ ಇಲಾಖೆಗೆ ಶೀಘ್ರದಲ್ಲೇ ಸಲ್ಲಿಸಲಿದ್ದು, ಬಳಿಕ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ಹಾನಿಯ ಅಂದಾಜು ಮಾಡಲಿವೆ. ನವೆಂಬರ್‌ ನಲ್ಲಿ ಅಕಾಲಿಕ ಮಳೆ ಮುಂದುವರೆಯುತ್ತಿರುವುದರಿಂದ ಕೃಷಿ ಇಲಾಖೆ ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿದ್ದು, ಕಂದಾಯ ಇಲಾಖೆಗೆ ಈ ಮಾಹಿತಿಯನ್ನು ರವಾನಿಸುವ ಕಾರ್ಯ ನಡೆಯುತ್ತಿದೆ.

ಜುಲೈನಲ್ಲಿ ಸುರಿದ ಮಳೆಯಿಂದಾಗಿ 19 ಜಿಲ್ಲೆಗಳ ಸುಮಾರು 4.08 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದ್ದು, ಕೃಷಿ ಇಲಾಖೆ ಅಂತಿಮ ವರದಿ ಸಿದ್ಧಪಡಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 4926 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ, ಶಿವಮೊಗ್ಗದ 4016 ಹೆಕ್ಟೇರ್‌, ರಾಯಚೂರಿನ 1802, ಉತ್ತರ ಕನ್ನಡದ 1652 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ಹಾನಿಗೊಳಗಾಗಿದೆ.

ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಬೀದರ್‌, ರಾಯಚೂರು, ದಾವಣಗೆರೆ, ವಿಜಯಪುರ, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೀದರ್‌ ಜಿಲ್ಲೆಯ 9645 ಹೆಕ್ಟೇರ್‌ ಪ್ರದೇಶದ ಹೆಸರು, 8210 ಹೆಕ್ಟೇರ್‌ ಉದ್ದು, 60048 ತೊಗರಿ, 101283 ಸೋಯಾಬೀನ್‌, 2054 ಹೆಕ್ಟೇರ್‌ ಕಬ್ಬು ಬೆಳೆ ಹಾನಿಗೊಳಗಾಗಿದೆ. ಇನ್ನೂ, ಕಲಬುರಗಿ ಜಿಲ್ಲೆಯಲ್ಲಿ 3099 ಹೆಕ್ಟೇರ್‌ ಹೆಸರು, 6145 ಉದ್ದು, 155616 ತೊಗರಿ, 2246 ಸೋಯಾಬೀನ್‌, 11144 ಕಬ್ಬು, 11201 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹತ್ತಿ ಸೇರಿದಂತೆ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3.71 ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ.

ಅಕ್ಟೋಬರ್‌ನಲ್ಲಿ ರಾಯಚೂರಿನಲ್ಲಿ 1152 ಹೆಕ್ಟೇರ್‌ ಭತ್ತ, ಯಾದಗಿರಿಯಲ್ಲಿ 404 ಹೆಕ್ಟೇರ್‌, ದಾವಣಗೆರೆಯಲ್ಲಿ 238 ಹೆಕ್ಟೇರ್‌ ಮೆಕ್ಕೆಜೋಳ, ವಿಜಯಪುರದಲ್ಲಿ 51286 ಹೆಕ್ಟೇರ್‌ ತೊಗರಿ, ಯಾದಗಿರಿಯಲ್ಲಿ ಬೆಳೆದಿದ್ದ 1364 ಹೆಕ್ಟೇರ್‌ ಪ್ರದೇಶದ ರಾಗಿಗೆ ಹಾನಿಯಾಗಿದೆ. ಕಳೆದ ಹದಿನೈದು ದಿನಗಳಲ್ಲಿ 12 ಜಿಲ್ಲೆಯಲ್ಲಿ ಒಟ್ಟು ಅಂದಾಜು 57914 ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ.

ನವೆಂಬರ್‌ 16ರವರೆಗೆ 14 ಜಿಲ್ಲೆಯ 48647 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಕೆಲವು ಕಡೆ ಕಡಿಮೆ ಹಾನಿಯಾಗಿದ್ದರೂ, ಮಳೆ ಹೀಗೆ ಮುಂದುವರಿದರೆ ಬೆಳೆಗಳ ಹಾನಿ ಪ್ರಮಾಣ ಹೆಚ್ಚಲಿದೆ.

ಸತತ ಮಳೆಯಿಂದ ಪ್ರಸಕ್ತ ವರ್ಷ ಅಡಿಕೆಗೆ ಕೊಳೆ ರೋಗ ಬಾಧೆ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ 1ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಇದ್ದು, ಶೇ.30 ಅಡಕೆಗೆ ರೋಗದ ಭೀತಿ ಎದುರಾಗಿದೆ. ಜಿಟಿ ಜಿಟಿ ಮಳೆಯಿಂದ ಕಟಾವು ಮಾಡಿದ ಅಡಿಕೆಯನ್ನು ಒಣಗಿಸಲು ರೈತರಿಗೆ ಕಷ್ಟವಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ 1.48 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳಿವೆ. ಇದರಲ್ಲಿ 92 ಸಾವಿರ ಹೆಕ್ಟೇರ್ ಭತ್ತ, 53 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 140 ಹೆಕ್ಟೇರ್‌ನಲ್ಲಿ ಹೈಬ್ರಿಡ್ ಜೋಳ, 334 ಹೆಕ್ಟೇರ್‌ನಲ್ಲಿ ಹತ್ತಿ, 850 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ. ಈಗಾಗಲೇ ಭತ್ತ, ಮೆಕ್ಕೆಜೋಳ ಬಹುತೇಕ ಕಟಾವಿಗೆ ಬಂದಿದ್ದು ಮಳೆಯಿಂದಾಗಿ ಕೊಯ್ಲಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ರಾಗಿ, ಜೋಳ, ಕಾಫಿ, ಕಾಳುಮೆಣಸು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನ, ಅರಸೀಕೆರೆ, ಹೊಳೆನರಸೀಪುರ, ಅರಕಲಗೂಡು ತಾಲೂಕುಗಳಲ್ಲಿ ರಾಗಿ, ಜೋಳ ಕಟಾವು ಮಾಡಲು ಸಾಧ್ಯವಾಗಿಲ್ಲ.ಇನ್ನು ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಕಾಫಿ, ಕಾಳು ಮೆಣಸು, ಅಡಿಕೆ ನೆಲಕಚ್ಚುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ರಾಗಿ ಮತ್ತು ಭತ್ತ ಸೇರಿ ವಿವಿಧ ಬೆಳೆಗಳು ಫಸಲಿಗೆ ಬಂದಿದ್ದವು. ನಿರಂತರವಾಗಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಆ ಬೆಳೆಗಳಿಗೂ ಸಹ ಹಾನಿಯಾಗುತ್ತಿದೆ.

ಮಳೆ ಹಾನಿಗೆ ಸಂಬಂಧಿಸಿದಂತೆ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದೆ.ವರದಿ ಇನ್ನೂ ಬಂದಿಲ್ಲ. ಕೆಲವು ಜಿಲ್ಲೆಗಳಲ್ಲಿ ಸಮಯ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.