ETV Bharat / state

ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಮಳೆ ಅನಾಹುತ ಸಂಭವಿಸಿದೆ: ಸಿದ್ದರಾಮಯ್ಯ - ಸರ್ಕಾರ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದೆ ಎಂದ ಸಿದ್ದು

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು.ರಾಜ್ಯ ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆಯಿದೆ ಹಾಗೂ ಬಿಬಿಎಂಪಿ, BWSSB ಮತ್ತು ಬಿಡಿಎ ನಡುವೆ ಇರುವ ಸಮನ್ವಯ ಕೊರತೆಯಿಂದ ಮಳೆ ಅನಾಹುತ ಸಂಭವಿಸುತ್ತಿದೆ ಎಂದು ಇದೇ ವೇಳೆ ಆರೋಪ ಮಾಡಿದರು.

Siddaramaiah
ಸಿದ್ದರಾಮಯ್ಯ
author img

By

Published : May 19, 2022, 8:26 PM IST

Updated : May 19, 2022, 8:40 PM IST

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆಯಿದೆ ಹಾಗೂ ಬಿಬಿಎಂಪಿ, BWSSB ಮತ್ತು ಬಿಡಿಎ ನಡುವೆ ಇರುವ ಸಮನ್ವಯ ಕೊರತೆಯಿಂದ ಮಳೆ ಅನಾಹುತ ಸಂಭವಿಸುತ್ತಿದೆ. ಸಮಸ್ಯೆ ಬಗೆಹರಿಯಬೇಕಾದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ಕೆಲವರು ಅಕ್ರಮವಾಗಿ ಮನೆ ಕಟ್ಟಿಕೊಂಡು ಬಿಟ್ಟಿದಾರೆ. ನಮ್ಮ ಕಾಲದಲ್ಲಿ ನಾವು ತೆರವು ಮಾಡಿದ್ದೆವು. ಈಗ ಅದು ಆಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ

ಸಿಎಂ ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಂಜೆ ಸಿಟಿ ರೌಂಡ್ಸ್ ನಡೆಸಿದರು. ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಬ್ಯಾಟರಾಯನಪುರ, ಶಿವಾಜಿನಗರ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ರಾಜಕೀಯ ಇಚ್ಚಾಶಕ್ತಿ ಬೇಕು. ಆದರೆ ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆಯಿದೆ. ನಗರದ ಬಿಬಿಎಂಪಿ, BWSSB, ಬಿಡಿಎ ನಡುವೆ ಸಮನ್ವಯ ಕೊರತೆಯಿದೆ ಎಂದು ಕಿಡಿ ಕಾರಿದರು.

ನಗರದ ಸಮಸ್ಯೆಗಳು ಈಗ ದುಪ್ಪಟ್ಟಾಗಿವೆ: ಬೇಸಿಗೆ ಕಾಲದಲ್ಲಿ ಮಾಡಬೇಕಾದ ಕೆಲಸ ಮಳೆಗಾಲದಲ್ಲಿ ಮಾಡ್ತಿದ್ದಾರೆ. ಸರ್ಕಾರ ಹಣ ಬಿಡುಗಡೆ ಮಾಡದೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ರಾಜಕಾಲುವೆ ಒತ್ತುವರಿ ಜೊತೆಗೆ ರಾಜಕಾಲುವೆ ಸ್ವಚ್ಛ ಮಾಡದೇ ಇರುವುದು ನೀರು ನುಗ್ಗಲು ಕಾರಣವಾಗಿದೆ.

ಬಿಜೆಪಿ ಸರ್ಕಾರ ಸರ್ವವ್ಯಾಪಿ, ಸರ್ವಸ್ಪರ್ಶಿ, ಅಭಿವೃದ್ಧಿ ನಿರಂತರ ಅನ್ನೋ ಒಳ್ಳೆಯ ಪದ ಬಳಕೆ ಬಿಟ್ಟು ಕೆಲಸ ಮಾಡಲಿ. ಬೆಂಗಳೂರು ಅಭಿವೃದ್ಧಿ ಖಾತೆ ಸಿಎಂ ಬಳಿಯಿದೆ. ಅವರೇ ಈ ಕೆಲಸ ಮಾಡಬೇಕು. ನಾನು ಇದ್ದಾಗ ಪ್ರತ್ಯೇಕವಾಗಿ ಬೇರೆಯವರಿಗೆ ನೀಡಿದ್ದೆ. ಈಗ ಬಿಜೆಪಿ ಸರ್ಕಾರದಲ್ಲಿ ಸಿಎಂ ಬಳಿ ಉಳಿಸಿಕೊಂಡು ನಗರದ ಸಮಸ್ಯೆಗಳು ದುಪ್ಪಟ್ಟು ಆಗಿವೆ ಎಂದು ಆರೋಪಿಸಿದರು.

ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದ ಸರ್ಕಾರ: ಇನ್ನೊಂದೆಡೆ ಬಿಬಿಎಂಪಿ ಚುನಾವಣೆ ಮುಂದೂಡಿಕೆ ಮಾಡಿದ್ದಾರೆ. ಮಳೆ ಅನಾಹುತಕ್ಕೆ ಇದೂ ಕಾರಣವಾಗಿದೆ. ಸೋಲಿನ ಭೀತಿಯಿಂದ ಒಂದು ವರ್ಷ ಎಂಟು ತಿಂಗಳಿಂದ ಚುನಾವಣೆ ನಡೆಸಿಲ್ಲ. ವಾರ್ಡ್​ನಲ್ಲಿ ಜನಪ್ರತಿನಿಧಿಗಳು ಇಲ್ಲ. ಅಧಿಕಾರಿಗಳ ಕೈಗೆ ಬಿಬಿಎಂಪಿ ಆಡಳಿತ ನೀಡಿದ್ದಾರೆ. ನಗರದ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ನಾನು ಇದ್ದಾಗ ಬೆಂಗಳೂರಿಗೆ ಹಣ ಬಿಡುಗಡೆ ಮಾಡಿದ್ದೆ. ಇವರು ಬಂದ ಮೇಲೆ ಏನು ಮಾಡಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: SSLCಯಲ್ಲಿ C+ .. ವಿದ್ಯಾರ್ಥಿ ದಿಲ್​ ಖುಷ್​, ಮಳೆಯಲ್ಲೇ ಮಸ್ತ್​ ಡ್ಯಾನ್ಸ್

ಎಚ್​ಡಿಕೆಗೆ ತಿರುಗೇಟು: ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಕೆಲಸ ಆಗಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರ ಕಾಲದಲ್ಲಿ ಅವರು ಏನು ಮಾಡಿದರು ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

ರಾಜಕಾಲುವೆ ಕೆಲಸ ಮಾಡಿದವರು ಯಾರು?. ನಮ್ಮ ಸರ್ಕಾರ ಇದ್ದಾಗ ಇದೆಲ್ಲವನ್ನು ಮಾಡಿದ್ದೇವೆ. ಯಾರು ಎಷ್ಟೆಷ್ಟು ಹಣ ಬಿಡುಗಡೆ ಮಾಡಿದ್ರು ಎಂಬುದನ್ನು ಹೇಳಲಿ ಎಂದು ತಿರುಗೇಟು ನೀಡಿದರು.

Last Updated : May 19, 2022, 8:40 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.