ETV Bharat / state

ರಾಜಕಾಲುವೆ ಸಮೀಪದಲ್ಲಿ ನಿಮ್ಮ ಮನೆಗಳು ಇದ್ಯಾ? ಹಾಗಾದರೆ ಇನ್ನೆರಡು ದಿನ ಅಲರ್ಟ್ ಆಗಿರಿ.

ಇಂದು ಮತ್ತು ನಾಳೆ ನಗರದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ತಗ್ಗು ಪ್ರದೇಶದ ಜನರು ಹಾಗೂ ರಾಜಕಾಲುವೆ ಅಕ್ಕ-ಪಕ್ಕ ಇರುವ ಮನೆಯ ನಿವಾಸಿಗಳು ಆತಂಕದಲ್ಲಿ ಇರುವಂತಾಗಿದೆ.

rain water
ಮಳೆ ನೀರು
author img

By

Published : Oct 24, 2020, 5:48 PM IST

ಬೆಂಗಳೂರು: ಕೊರೊನಾದಿಂದ ಕಂಗೆಟ್ಟಿರುವ ಜನತೆಗೆ ಇದೀಗ ವರುಣ ಬೆಂಬಿಡದೆ ಕಾಡುತ್ತಿದ್ದಾನೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ ರಾಜ್ಯದಲ್ಲಿ ಇನ್ನು ಎರಡು-ಮೂರು ದಿನಗಳ ಕಾಲ ಮಳೆಯಾಗಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಕೊಟ್ಟಿದೆ.

ನಿನ್ನೆ ಸತತ ಎರಡು ಗಂಟೆಗಳ ಕಾಲ ಸುರಿದ ಮಳೆಗೆ ಹೈರಾಣಾದ ಜನರು ಇದೀಗ ಇನ್ನೆರಡು ದಿನದ ಮಳೆಯ ಆರ್ಭಟ ಎದುರಿಸಬೇಕಿದೆ. ಇಂದು ಕೂಡ ಬೆಂಗಳೂರಿನ‌ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಸಂಜೆ ವೇಳೆಗೆ ಶುರುವಾಗುವ ಮಳೆಯ ಆರ್ಭಟಕ್ಕೆ ಜನರು ಸಿದ್ದರಾಗಬೇಕಿದೆ. ‌ಈಗಾಗಲೇ ನಿನ್ನೆಯ ಧಾರಾಕಾರ ಮಳೆಗೆ ನಗರದ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿ ಮಾಡಿದೆ.

ಮಳೆಗೆ ಕೆರೆಯತಾಂಗಿರುವ ದತ್ತಾತ್ರೇಯ ನಗರ

ಇದರ ಬೆನ್ನಲ್ಲೇ ಇಂದು ಮತ್ತು ನಾಳೆ ಹೆಚ್ಚಿನ ಮಳೆಯಾಗಲಿದ್ದು ತಗ್ಗು ಪ್ರದೇಶದ ಜನರು ಹಾಗೂ ರಾಜಕಾಲುವೆ ಅಕ್ಕ-ಪಕ್ಕ ಇರುವ ಮನೆಯ ನಿವಾಸಿಗಳು ಆತಂಕದಲ್ಲಿ ಇರುವಂತಾಗಿದೆ. ಹೀಗಾಗಿ ಸ್ಥಳೀಯರು ಹೆಚ್ಚಿನ ಸುರಕ್ಷತೆಯಲ್ಲಿ ಇರಬೇಕಾಗುತ್ತೆ.

ಮಳೆ ಅನಾಹುತಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣನಾ?

ಮಳೆ ನೀರು ಸರಾಗವಾಗಿ ಹರಿದು ಹೋಗಲು ಆಗದೇ ಇರುವುದೇ ಈ ರೀತಿಯ ಮಳೆ ಅನಾಹುತಕ್ಕೆ ಕಾರಣ. ಮಳೆ ಹರಿಯುವ ದಿಕ್ಕನ್ನೇ ಬದಲಾಯಿಸಿ, ಅಕ್ರಮವಾಗಿ ಕಟ್ಟಡ ನಿರ್ಮಾಣ ಹಾಗೂ ಜಾಗ ಒತ್ತುವರಿ ಮಾಡಿಕೊಂಡ ಪರಿಣಾಮ, ಈಗ ಅನುಭವಿಸುವಂತಾಗಿದೆ. ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 842ಕಿ.ಮೀ. ಉದ್ದದ ರಾಜಕಾಲುವೆ ಜಾಲವಿದೆ. ಸುಮಾರು 2,626 ಕಡೆ ಒತ್ತುವರಿ ಗುರುತಿಸಲಾಗಿದ್ದು, ಇದರಲ್ಲಿ 1,890 ಒತ್ತುವರಿ ಜಾಗ ತೆರವುವಾಗಿದೆ‌‌. ಇನ್ನು 736 ಕಡೆ ತೆರವುಗೊಳಿಸುವುದು ಬಾಕಿ ಇದ್ದು ಇದರಲ್ಲಿ 200ಕ್ಕೂ ಹೆಚ್ಚು ಕಟ್ಟಡಗಳು, 60 ಕ್ಕೂ ಹೆಚ್ಚು ಕಾಂಪೌಂಡ್ ಗಳೂ ಸೇರಿವೆ.‌ ಹಲವು ಪ್ರಕರಣಗಳು ಕೋರ್ಟ್ ಅಂಗಳದಲ್ಲಿ ಇದೆ.

ಕಾಲುವೆ ಹಾಗೂ ಕೆರೆಗಳ ಸುತ್ತಮುತ್ತ ಬಫರ್ ಜೋನ್‌ ನಿಯಮವಿದ್ದರೂ, ಅಲ್ಲೇ ಲಕ್ಷಾಂತರ ಕಟ್ಟಡಗಳು ತಲೆಯತ್ತಿವೆ. ಇತ್ತ ಅಧಿಕಾರಿಗಳು ಬಫರ್ ಜೋನ್ ನಲ್ಲಿ ನಡೆಯುವ ಚಟುವಟಿಕೆಗಳ ಕುರಿತು ಕಣ್ಮುಚಿ ಕುಳಿತಿದೆ. ಮತ್ತೊಂದು ಭಾಗದಲ್ಲಿ ರಾಜಕಾಲುವೆಯ ಹೂಳು ತೆರವು ಮಾಡದೇ ಇರುವುದು ಕೂಡ ಧಾರಾಕಾರ ಮಳೆಯ ಸಂದರ್ಭದಲ್ಲಿ ಉಕ್ಕಿ ಬಂದು ರಸ್ತೆ ಮೇಲೆ ಹರಿಯಲಿದೆ‌.

ಈ ಬಗ್ಗೆ ಮಾತಾನಾಡಿರುವ ಕಂದಾಯ ಸಚಿವ ಆರ್ ಅಶೋಕ್, ದತ್ತಾತ್ರೇಯ ನಗರದಲ್ಲಿ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಆರು ತಿಂಗಳ ಹಿಂದೆಯೇ ರಾಜಕಾಲುವೆ ಕಾಮಗಾರಿ ಪ್ರಾರಂಭವಾಗಿತ್ತು. 15 ವರ್ಷದಿಂದ ಈ ರೀತಿ ಮಳೆ ಅನಾಹುತ ಆಗಿರಲಿಲ್ಲ. ಕಾಮಗಾರಿ ಆಗ್ತಿರೋದಿಂದ ಸಮಸ್ಯೆ ಆಗ್ತಾ ಇದೆ ಎಂದರು. ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಜಾಗವನ್ನ ತೆರವು ಕಾರ್ಯ ನಿಲ್ಲಿಸಿಲ್ಲ, ಅದು ನಡೆಯುತ್ತಲಿದೆ ಅಂತ ಜಾರಿಕೊಂಡರು.

ಒಟ್ಟಾರೆ, ಮಳೆ ನೀರು ಸರಾಗವಾಗಿ ಹರಿಯಲು ಸರ್ಕಾರ ದಾರಿ ಮಾಡೋಲ್ಲ, ಮಳೆ ಬಂದಾಗ ಅನಾಹುತಗಳು ತಪ್ಪಲ್ಲ. ಜನರಷ್ಟೇ ಅವರ ಎಚ್ಚರಿಕೆಯಲ್ಲಿ ಇರಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.