ಬೆಂಗಳೂರು: ಇಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಹಾಗೂ ದ. ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಹವಾಮಾನ ಇಲಾಖೆ ನಿರ್ದೆಶಕ ಸಿ.ಎಸ್. ಪಾಟೀಲ, ಕಳೆದ 20 ಗಂಟೆಯಲ್ಲಿ ಉತ್ತರ ಕನ್ನಡದ ಹೊನ್ನಾವರ, ಕೊಲ್ಲೂರು 7 ಸೆಂ.ಮೀ, ಕಾರವಾರ, ಬೆಳಗಾವಿ 5 ಸೆಂ.ಮೀ, ಕೊಡಗಿನ ಸೋಮವಾರಪೇಟೆಯಲ್ಲಿಯೂ 5 ಸೆಂ.ಮೀ ಮಳೆಯಾಗಿದೆ. ಪ್ರಬಲ ತೌಕ್ತೆ ಚಂಡಮಾರುತವು ಪೂರ್ವ ಅರಬ್ಬೀ ಸಮುದ್ರದಲ್ಲಿ ಇದ್ದು, ಮುಂಬೈನಿಂದ ಪಶ್ಚಿಮ ದಿಕ್ಕಿನೆಡೆ 150 ಕಿ.ಮೀ ದೂರದಲ್ಲಿದೆ.
ಓದಿ:ದಯವಿಟ್ಟು ಗಮನಿಸಿ... ಏನೇ ವ್ಯವಹಾರ ಇದ್ರೂ ಇಂದೇ ಮುಗಿಸಿಕೊಳ್ಳಿ: 23ಕ್ಕೆ ವರ್ಕ್ ಆಗಲ್ಲ ನೆಫ್ಟ್
ಇಂದು ಸಾಯಂಕಾಲ ತೌಕ್ತೆ ಗುಜರಾತ್ ಕರಾವಳಿ ತಲುಪಿದೆ. ಇಂದಿನಿಂದ ಚಂಡಮಾರುತದ ಪರಿಣಾಮ ರಾಜ್ಯದ ಮೇಲೆ ಗಣನೀಯವಾಗಿ ಕಡಿಮೆ ಆಗಲಿದೆ. ಮೇ 17 ರಿಂದ ಮೇ 21 ರವರೆಗೆ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಬಹುತೇಕ ಎಲ್ಲ ಕಡೆ ಹಾಗೂ ಉ. ಒಳನಾಡಿನಲ್ಲಿ ಅಲ್ಲಲ್ಲಿ ಮಾತ್ರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಕೆಲವು ಕಡೆ ಹಗುರ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.