ಬೆಂಗಳೂರು: ಬಿರು ಬಿಸಿಲಿನಿಂದ ಸುಡುತ್ತಿದ್ದ ಸಿಲಿಕಾನ್ ಸಿಟಿ ಸಂಜೆ ವೇಳೆ ಮಳೆಯ ಆಗಮನದಿಂದ ತಂಪಾಗಿದೆ. ನಗರದ ಏರ್ಪೋರ್ಟ್ ರಸ್ತೆ, ಹೆಬ್ಬಾಳ, ಯಶವಂತಪುರ, ಮಲ್ಲೇಶ್ವರಂ, ಯಲಹಂಕ, ವಿದ್ಯಾರಣ್ಯಪುರ, ರಾಜಾಜಿನಗರದಲ್ಲಿ ಮಳೆ ಸುರಿದಿದೆ.
ಬೊಮ್ಮನಹಳ್ಳಿ, ಜಯನಗರ ಕಾರ್ಪೋರೇಷನ್ ಸರ್ಕಲ್, ಆರ್ ಆರ್ ನಗರದಲ್ಲಿ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲಿ ಚದುರಿದ ಮಳೆಯಾಗಬಹುದು. ಇನ್ನು ಗಾಳಿಗೆ ಒಂದು ಮರ ಬಿದ್ದಿದ್ದು ಈ ದೂರು ಬಿಟ್ಟರೆ ಬೇರೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪಾಲಿಕೆ ಕಂಟ್ರೋಲ್ ರೂಂ ಮಾಹಿತಿ ನೀಡಿದೆ.
ಪೂರ್ವ ಮುಂಗಾರು ಮಳೆ ಅನಿರೀಕ್ಷಿತವಾಗಿ ಇನ್ನು ಮುಂದೆಯೂ ಬರಲಿದೆ. ಈಗಾಗಲೇ ಚಿತ್ರದುರ್ಗ ಭಾಗದಲ್ಲಿ 40-50 ಮಿ.ಮೀಟರ್ ಮಳೆಯಾಗಿದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರದಲ್ಲಿಯೂ ಉತ್ತಮ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ.