ಬೆಂಗಳೂರು: ಉದ್ಯಾನನಗರಿಯಲ್ಲಿ ಇಂದು ಸಂಜೆ ಮಳೆಯಾಗಿದ್ದು, ನಗರದ ಮಲ್ಲೇಶ್ವರ, ಮಜೆಸ್ಟಿಕ್, ಕೆ. ಆರ್. ಮಾರುಕಟ್ಟೆ, ಕೆ.ಆರ್.ಪುರಂ, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ.
ಇತ್ತ ದೀಪಾವಳಿ ಹಬ್ಬ ಆಚರಿಸಿ ಸಂಜೆ ವೇಳೆಗೆ ಪಟಾಕಿ ಹೊಡೆಯಬೇಕೆಂದುಕೊಂಡವರಿಗೆ ನಿರಾಸೆಯಾಗಿದೆ. ಜೊತೆಗೆ ಪಟಾಕಿ ಮಾರಾಟಗಾರಿಗೂ ಬೇಸರವಾಗಿದ್ದು, ಮಳೆಯಿಂದ ಪಟಾಕಿ ವ್ಯಾಪಾರಕ್ಕೂ ಪೆಟ್ಟು ಬಿದ್ದಿದೆ.
ಇನ್ನು ರಜೆ ದಿನಗಳಾಗಿರುವುದರಿಂದ ನಗರದಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಆದರೆ ಸಾರಕ್ಕಿ ಸುತ್ತಮುತ್ತ ಮಳೆಯಿಂದಾಗಿ ಕೊಂಚ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.