ETV Bharat / state

ಭಾರಿ ಮಳೆಗೆ  ರೈಲ್ವೆ ಕೆಳಸೇತುವೆ ಜಲಾವೃತ... ಸಾರ್ವಜನಿಕರು ಪರದಾಟ! - ಜಲಾವೃತ

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ವರ್ತೂರು-ಪಣತ್ತೂರು ರಸ್ತೆಯ ರೈಲ್ವೆ ಅಂಡರ್​ ಪಾಸ್​ ಜಲಾವೃತವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಮಳೆ
author img

By

Published : Aug 23, 2019, 4:46 AM IST

ಬೆಂಗಳೂರು: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ವರ್ತೂರು-ಪಣತ್ತೂರು ರಸ್ತೆಯ ರೈಲ್ವೆ ಅಂಡರ್‌ಪಾಸ್ ಜಲಾವೃತವಾಗಿದ್ದು, ವಾಹನಗಳು ನೀರಿನಲ್ಲಿ ನಿಂತು ಕೆಟ್ಟು ಹೋಗಿವೆ.

ಮಳೆಗೆ ಜಲಾವೃತವಾಗಿರುವ ವರ್ತೂರು-ಪಣತ್ತೂರು ರೈಲ್ವೆ ಕೆಳಸೇತುವೆ

ವರ್ತೂರಿನಿಂದ ಮಾರತ್ತಹಳ್ಳಿ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಅಂಡರ್‌ಪಾಸ್ ದುರಸ್ತಿಗಾಗಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ವರ್ಷಗಳ ಹಿಂದೆ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಇದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಇಷ್ಟಾದರೂ ಈವರೆಗೆ ದುರಸ್ತಿ ಕಾಮಗಾರಿ ನಡೆದಿಲ್ಲ. ಕೆಳಸೇತುವೆ ವಿಸ್ತರಣೆಗಾಗಿ ಹಲವು ಬಾರಿ ಪ್ರತಿಭಟನೆ ನಡೆದಿದ್ದರೂ ಈವರೆಗೂ ಕಾಮಗಾರಿ ಶುರುವಾಗಿಲ್ಲ.

ವರ್ತೂರಿನಿಂದ ಪಣತ್ತೂರು ಮೂಲಕ ಸಾಗುವ ದಾರಿಯಲ್ಲಿ ಈ ಕೆಳಸೇತುವೆ ಇದ್ದು, ಮಾರತಹಳ್ಳಿ ವರ್ತುಲ ರಸ್ತೆ ತಲುಪಲು ನಾಲ್ಕು ಕಿ.ಮೀ ತಗುಲುತ್ತದೆ. ಅದೇ ವರ್ತೂರು, ವರ್ತೂರು ಕೋಡಿ, ಕುಂದಲಹಳ್ಳಿ, ಮಾರತಹಳ್ಳಿ ಸೇತುವೆ ಮೂಲಕ ಮಾರತಹಳ್ಳಿ ವರ್ತುಲ ರಸ್ತೆ ತಲುಪಲು ಕನಿಷ್ಠ ಹತ್ತು ಕಿ.ಮೀ ಆಗುತ್ತದೆ. ಹೀಗಾಗಿ ವಾಹನ ಸವಾರರು ಈ ಅಂಡರ್‌ಪಾಸ್ ಅನ್ನೇ ಅವಲಂಬಿಸಿದ್ದಾರೆ.

ಆದರೆ, ಮಳೆ ನೀರು ಸರಾಗವಾಗಿ ಹರಿದುಹೋಗಲು ವೈಜ್ಞಾನಿಕ ಕಾಲುವೆ ನಿರ್ಮಿಸದೆ ಇರುವುದರಿಂದ ಮಳೆ ಬಂದಾಗಲೆಲ್ಲ ಇಲ್ಲಿ ಮಿನಿ ಕೊಳ ಸೃಷ್ಟಿಯಾಗಿ ವಾಹನ ಸವಾರರು ಪರದಾಡುವುದು ಮಾಮೂಲಾಗಿದೆ. ಮಂಗಳವಾರ ರಾತ್ರಿ ಸುರಿದ ಮಳೆಯಿಂದ ವಾಹನಗಳೇ ಮುಳುಗಡೆಯಾಗಿವೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ವಾಹನ‌ ಸವಾರರು ಪರದಾಡುವತಂಹ‌ ಪರಿಸ್ಥಿತಿ ಎದುರಾಗಿದೆ.

Intro:ಭಾರಿ ಮಳೆಗೆ ವರ್ತೂರು-ಪಣತ್ತೂರು
ರೈಲ್ವೆ ಕೆಳಸೇತುವೆ ಜಲಾವೃತ

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ವರ್ತೂರು-ಪಣತ್ತೂರು ರಸ್ತೆಯ ರೈಲ್ವೆ ಅಂಡರ್‌ಪಾಸ್ ಜಲಾವೃತವಾಗಿದ್ದು, ವಾಹನಗಳು ನೀರಿನಲ್ಲಿ ನಿಂತು ಕೆಟ್ಟು ಹೋಗಿವೆ.

ವರ್ತೂರಿನಿಂದ ಮಾರತ್ತಹಳ್ಳಿ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಅಂಡರ್‌ಪಾಸ್ ದುರಸ್ತಿಗಾಗಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ವರ್ಷಗಳ ಹಿಂದೆ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಇದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಇಷ್ಟಾದರೂ ಈವರೆಗೆ ದುರಸ್ತಿ ಕಾಮಗಾರಿ ನಡೆದಿಲ್ಲ. ಕೆಳಸೇತುವೆ ವಿಸ್ತರಣೆಗಾಗಿ ಹಲವು ಬಾರಿ ಪ್ರತಿಭಟನೆ ನಡೆದಿದ್ದರೂ ಈವರೆಗೂ ಕಾಮಗಾರಿ ಶುರುವಾಗಿಲ್ಲ.

ವರ್ತೂರಿನಿಂದ ಪಣತ್ತೂರು ಮೂಲಕ ಸಾಗುವ ದಾರಿಯಲ್ಲಿ ಈ ಕೆಳಸೇತುವೆ ಇದ್ದು, ಮಾರತಹಳ್ಳಿ ವರ್ತುಲ ರಸ್ತೆ ತಲುಪಲು ನಾಲ್ಕು ಕಿ.ಮೀ ತಗುಲುತ್ತದೆ.

Body:ಅದೇ ವರ್ತೂರು, ವರ್ತೂರು ಕೋಡಿ, ಕುಂದಲಹಳ್ಳಿ, ಮಾರತಹಳ್ಳಿ ಸೇತುವೆ ಮೂಲಕ ಮಾರತಹಳ್ಳಿ ವರ್ತುಲ ರಸ್ತೆ ತಲುಪಲು ಕನಿಷ್ಠ ಹತ್ತು ಕಿ.ಮೀ ಆಗುತ್ತದೆ. ಹೀಗಾಗಿ ವಾಹನ ಸವಾರರು ಈ ಅಂಡರ್‌ಪಾಸ್ ಅನ್ನೇ ಅವಲಂಬಿಸಿದ್ದಾರೆ.
Conclusion:ಆದರೆ, ಮಳೆ ನೀರು ಸರಾಗವಾಗಿ ಹರಿದುಹೋಗಲು ವೈಜ್ಞಾನಿಕ ಕಾಲುವೆ ನಿರ್ಮಿಸದೆ ಇರುವುದರಿಂದ ಮಳೆ ಬಂದಾಗಲೆಲ್ಲ ಇಲ್ಲಿ ಮಿನಿ ಕೊಳ ಸೃಷ್ಟಿಯಾಗಿ ವಾಹನ ಸವಾರರು ಪರದಾಡುವುದು ಮಾಮೂಲಾಗಿದೆ. ಮಂಗಳವಾರ ರಾತ್ರಿ ಸುರಿದ ಮಳೆಯಿಂದ ವಾಹನಗಳೇ ಮುಳುಗಡೆಯಾಗಿವೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ವಾಹನ‌ ಸವಾರರು ಪರದಾಡುವತಂಹ‌ ಪರಿಸ್ಥಿತಿ ಎದುರಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.