ಬೆಂಗಳೂರು : ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ಕರ್ಫ್ಯೂ ಕಾರಣದಿಂದಾಗಿ ರೈಲ್ವೆ ರಿಸರ್ವೇಷನ್ ಸೆಂಟರ್ ಮುಚ್ಚಲಾಗಿದೆ.
ಬನಶಂಕರಿ, ಜಯನಗರ, ಕೋರಮಂಗಲ, ಕೆ ಆರ್ ಮಾರುಕಟ್ಟೆ, ಹೈಕೋರ್ಟ್, ವಿಧಾನಸೌಧ, ಎಲೆಕ್ಟ್ರಾನಿಕ್ ಸಿಟಿ ಮತ್ತು ಯಲಹಂಕದಲ್ಲಿನ ಪ್ರಯಾಣಿಕರ ಗಣಕೀಕೃತ ಕಾದಿರಿಸುವಿಕೆ ಕೇಂದ್ರಗಳನ್ನು ಏಪ್ರಿಲ್ 28 ರಿಂದ ಮೇ 11 (14 ದಿನಗಳು)ರವರೆಗೆ ಮುಚ್ಚಲಾಗಿದೆ. ರೈಲ್ವೆ ನಿಲ್ದಾಣದಲ್ಲಿರುವ ರಿಸರ್ವೇಷನ್ ಸೆಂಟರ್ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.