ETV Bharat / state

ಲಾಕ್​ಡೌನ್​​ ಮಾಡುವುದೇ ಸೂಕ್ತ ಎಂದ ರಾಹುಲ್ ಗಾಂಧಿ.. ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ನಾಯಕರು

ರಾಹುಲ್ ಗಾಂಧಿ ಲಾಕ್​ಡೌನ್ ಪರ ಒಲವು ತೋರಿದ್ದಾರೆ. ಕೋವಿಡ್ ನಿಯಂತ್ರಣ ಕಂಟ್ರೋಲ್ ಮಾಡಬೇಕಾದ್ರೆ ಲಾಕ್​ಡೌನ್ ಒಂದೇ ದಾರಿ. ಹಾಗಾಗಿ ಸಂಪೂರ್ಣ ಲಾಕ್​​​​​ಡೌನ್ ಮಾಡಿ ಎಂದಿದ್ದಾರೆ. ಇದುವರೆಗೂ ಇದೊಂದೇ ವಿಚಾರವನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಈಗ ದಿಕ್ಕು ತೋಚದಂತಾಗಿದೆ.

rahul-gandhi-tweeted-about-implementation-of-lockdown
ಲಾಕ್​ಡೌನ್​​ ಮಾಡುವುದೇ ಸೂಕ್ತ ಎಂದ ರಾಹುಲ್ ಗಾಂಧಿ
author img

By

Published : May 4, 2021, 5:53 PM IST

ಬೆಂಗಳೂರು: ಕೊರೊನಾ 2ನೇ ಅಲೆ ವ್ಯಾಪಿಸುತ್ತಿರುವ ಆರಂಭದ ದಿನಗಳಿಂದಲೂ ಲಾಕ್​​​​ಡೌನ್ ವಿರೋಧಿಸುತ್ತಾ ಬಂದಿರುವ ಪ್ರತಿಪಕ್ಷಕ್ಕೆ ಈಗ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹೇಳಿಕೆ ಇಕ್ಕಟ್ಟಿಗೆ ಸಿಲುಕಿಸುತ್ತದೆ.

ಲಾಕ್​​​ಡೌನ್ ಮಾಡಿದರೆ ಜನಜೀವನ ಅಸ್ತವ್ಯಸ್ತವಾಗಲಿದೆ. ಬಡವರು ಒಂದು ಹೊತ್ತಿನ ಊಟ ಕಳೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರ ಮೊದಲನೇ ಅಲೆ ಸಂದರ್ಭದಲ್ಲಿ ಲಾಕ್​ಡೌನ್ ಮಾಡಿ ಹಲವರು ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದೆ. 2ನೇ ಅಲೆ ಸಂದರ್ಭದಲ್ಲೂ ಅದೇ ಪುನರಾವರ್ತನೆ. ಆದರೆ, ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಹಿನ್ನೆಲೆ ಲಾಕ್​ಡೌನ್ ಜಾರಿಗೊಳಿಸಬಾರದು ಎಂದು ವಿರೋಧಿಸುತ್ತಾ ಬಂದಿದ್ದರು.

ಆದರೆ, ಇದೀಗ ಏಕಾಏಕಿ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಲಾಕ್​ಡೌನ್​​ ಪರವಾಗಿ ಮಾತನಾಡಿರುವುದು ಪಕ್ಷದ ರಾಜ್ಯ ನಾಯಕರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ ಪರಿಹಾರ ನೀಡುವ ಅನಿವಾರ್ಯತೆ ಎದುರಾಗುತ್ತದೆ ಎಂಬ ಕಾರಣಕ್ಕೆ ಲಾಕ್​​​ಡೌನ್​ ಬದಲು ಕರ್ಫ್ಯೂ ಹೆಸರಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಜನರ ಭವಿಷ್ಯ ಘೋರವಾಗಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್​​ಗೆ ಇದೀಗ ಪಕ್ಷದ ರಾಷ್ಟ್ರೀಯ ನಾಯಕರ ಪ್ರತಿಕ್ರಿಯೆ ಬಾಯಿ ಕಟ್ಟುವಂತೆ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಲಾಕ್​ಡೌನ್ ಪರ ಒಲವು ತೋರಿದ್ದಾರೆ. ಕೋವಿಡ್ ನಿಯಂತ್ರಣ ಕಂಟ್ರೋಲ್ ಮಾಡಬೇಕಾದ್ರೆ ಲಾಕ್​ಡೌನ್ ಒಂದೇ ದಾರಿ. ಹಾಗಾಗಿ ಸಂಪೂರ್ಣ ಲಾಕ್​​​​ಡೌನ್ ಮಾಡಿ ಎಂದಿದ್ದಾರೆ.

  • GOI doesn’t get it.

    The only way to stop the spread of Corona now is a full lockdown- with the protection of NYAY for the vulnerable sections.

    GOI’s inaction is killing many innocent people.

    — Rahul Gandhi (@RahulGandhi) May 4, 2021 " class="align-text-top noRightClick twitterSection" data=" ">

ಭಾರತ ಸರ್ಕಾರ ತನ್ನ ನಿರ್ಲಕ್ಷ್ಯದಿಂದ ಅನೇಕ ಜನರನ್ನು ಕೊಲ್ಲುತ್ತಿದೆ ಎಂದು ಆರೋಪಿಸಿರುವ ಅವರು ಲಾಕ್​​ಡೌನ್​​​ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಇದೊಂದೆ ವಿಚಾರವನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಈಗ ದಿಕ್ಕುತೋಚದಂತಾಗಿದೆ. ಕೋವಿಡ್ ವಿಚಾರದಲ್ಲಿ ನಡೆದಿರುವ ಭ್ರಷ್ಟಾಚಾರವನ್ನ ಮಾತ್ರ ಮುಂದಿನ ದಿನಗಳಲ್ಲಿ ಹೋರಾಟದ ಅಸ್ತ್ರವಾಗಿ ಕಾಂಗ್ರೆಸ್ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: ಚಾಮರಾಜನಗರಕ್ಕೆ ತೆರಳಿದ ಸಿದ್ದರಾಮಯ್ಯ, ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.