ETV Bharat / state

ರಾಗಿಣಿ ಆಪ್ತ ಡ್ರಗ್​​​​ ವ್ಯಸನಿ: ತಿಂಗಳ ಹಿಂದೆ ಆತನ ಪತ್ನಿಯಿಂದಲೇ ದಾಖಲಾಗಿತ್ತಂತೆ ದೂರು! - ವೈಭವ್ ಜೈನ್ ಪತ್ನಿಯಿಂದ ಕಳೆದ ತಿಂಗಳು ದೂರು

ರಾಗಿಣಿ ಆಪ್ತ ವೈಭವ್ ಜೈನ್ ಓರ್ವ ಡ್ರಗ್ ವ್ಯಸನಿ ಎಂದು ಅರೋಪಿ ಪತ್ನಿ ಪೂಜಾ ಆಗಸ್ಟ್ ತಿಂಗಳಲ್ಲೇ ಪೊಲೀಸರಿಗೆ ದೂರು ನೀಡಿದ್ದಾರೆ.

Ragini's close friend Vaibhav Jain is a drug addict
ವೈಭವ್ ಜೈನ್ ಡ್ರಗ್ ವ್ಯಸನಿ
author img

By

Published : Sep 18, 2020, 2:06 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ ಸಂಬಂಧ ರಾಗಿಣಿ ಆಪ್ತ ಎ5 ಅರೋಪಿ ವೈಭವ್ ಜೈನ್ ಓರ್ವ ಡ್ರಗ್ ವ್ಯಸನಿ ಎಂದು ಅರೋಪಿ ಪತ್ನಿ ಪೂಜಾ ಕಳೆದ ಆಗಸ್ಟ್​ ತಿಂಗಳಲ್ಲೇ ವೈಯಾಲಿಕಾವಲ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇರೆಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ಇದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ವೈಭವ್ ಜೈನ್ ಸಿಸಿಬಿ ವಶದಲ್ಲಿದ್ದಾನೆ. ಈತ ರಾಗಿಣಿ ಆಪ್ತನಾಗಿದ್ದು, ಹಲವಾರು ಪಾರ್ಟಿಗಳಲ್ಲಿ ತೊಡಗಿ ಡ್ರಗ್ಸ್​​ ಸಪ್ಲೆ ಮಾಡಿದ್ದನಂತೆ.

Ragini's close friend Vaibhav Jain is a drug addict
ವೈಭವ್ ಜೈನ್ ಪತ್ನಿಯಿಂದ ದೂರು

ದೂರಿನಲ್ಲಿ ಏನಿದೆ: 2013ರಲ್ಲಿ ಹಿರಿಯರ ಇಚ್ಛೆಯಂತೆ ಮದುವೆಯಾಗಿದ್ದು, ಮದುವೆಯಾದ ದಿನದಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಷ್ಟು ಮಾತ್ರವಲ್ಲದೆ ಡ್ರಗ್​​​ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಹಲ್ಲೆ ಮಾಡ್ತಿದ್ರು. ಹಾಗೆಯೇ ಎರಡನೇ ಮಗುವಿನ ಡೆಲಿವರಿಗೆ ಹೈದರಾಬಾದ್​ಗೆ ಹೋದಾಗ ಇನ್ನೋರ್ವ ಯುವತಿ ಜೊತೆ ಅನೈತಿಕ ಸಂಭಂದ ಹೊಂದಿ ಆಕೆಯ ಜೊತೆ ಸೇರಿ ಡ್ರಗ್​​ ಸೇವನೆ ಮಾಡಿದ್ದಾಗಿ ವೈಯಾಲಿಕಾವಲ್ ಠಾಣೆಯಲ್ಲಿ ದೂರು ದಾಖಲಿಸಿದ್ರು.

ದೂರಿನ ಅನ್ವಯ ಕೇಸ್ ದಾಖಲು ಮಾಡಿದ್ದ ವೈಯಾಲಿಕಾವಲ್ ಪೊಲೀಸರು, ವೈಭವ್ ಜೈನ್​ನನ್ನು ಅರೆಸ್ಟ್ ಮಾಡಿದ್ದರು. ಬಂಧನ ಮಾಡಿದ ಐದು ದಿನಕ್ಕೆ ಬೇಲ್ ಪಡೆದು ಹೊರ ಬಂದು ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾದಲ್ಲಿ ತೊಡಗಿದ್ದನಂತೆ. ಸದ್ಯ ಸಿಸಿಬಿ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆಗೆ ಇಳಿದು ಆರೋಪಿಯ ಹಿನ್ನೆಲೆ ಕಲೆಹಾಕ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.