ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಧಂಧೆ ನಂಟು ಆರೋಪ ಹೊತ್ತು ವಿಚಾರಣೆಗೊಳಗಾಗಿರುವ ಆರೋಪಿ ರಾಗಿಣಿ ಇನ್ನೂ ಐವರು ಆರೋಪಿಗಳೊಂದಿಗೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು, ಆಕೆಯನ್ನು ಇನ್ಮುಂದೆ ಕೈದಿ ನಂಬರ್ 6604 ಸಂಖ್ಯೆಯಿಂದ ಗುರುತಿಸಲಾಗುತ್ತದೆ.
ಜೈಲಿಗೆ ಕಾಲಿಟ್ಟ ತಕ್ಷಣ ಪ್ರತಿ ಆರೋಪಿಗೂ ಪ್ರತ್ಯೇಕವಾದ ವಿಚಾರಣಾಧೀನ ಕೈದಿ ನಂಬರ್ ನೀಡಲಾಗುತ್ತೆ. ಇಲ್ಲಿ ಸ್ಟಾರ್ ನಟಿ ಎಂಬ ಕಾರಣಕ್ಕೆ ಆವುದೇ ಆತಿಥ್ಯ ನೀಡಲಾಗುವುದಿಲ್ಲ. ಸಾಮಾನ್ಯ ಕೈದಿಯಂತೆ ನಟಿ ರಾಗಿಣಿ ಆ್ಯಂಡ್ ಟೀಮ್, ಜೈಲಿನಲ್ಲಿ ವಾಸ್ತವ್ಯ ಹೂಡಲಿದೆ. ಮಹಿಳಾ ಬ್ಯಾರಕ್ನಲ್ಲಿ ನಟಿ ರಾಗಿಣಿ ತಂಗಲಿದ್ದಾರೆ. ಹಾಗೆಯೇ ಇನ್ನುಳಿದ ಆರೋಪಿಗಳನ್ನು ಪುರುಷರ ಬ್ಯಾರಕ್ನಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಸದ್ಯ ಕೋವಿಡ್ ಭೀತಿ ಇರುವುದರಿಂದ ಪ್ರತ್ಯೇಕವಾಗಿರುವ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದನ್ನು ಹೊರತು ಪಡಿಸಿದರೆ ಇನ್ನುಳಿದಂತೆ ಊಟ, ತಿಂಡಿ ಎಲ್ಲಾ ವ್ಯವಸ್ಥೆಗಳು, ಸೌಲಭ್ಯಗಳು ಸಹ ಕೈದಿಗಳಿಗೆ ಇದ್ದಂತೆ ಇರಲಿವೆ.
ಇನ್ನುಳಿದ ಕೈದಿಗಳ ಸಂಖ್ಯೆ ಹೀಗಿದೆ:
ನಾಲ್ಕನೇ ಆರೋಪಿ ಪ್ರಶಾಂತ್ ಕೈದಿ ಸಂಖ್ಯೆ- 6605/20
ಏಳನೇ ಆರೋಪಿ ಲೂಮ್ ಪೆಪ್ಪರ್ ಸಾಂಬಾ ಕೈದಿ ಸಂಖ್ಯೆ- 6606/20
ಹನ್ನೊಂದನೇ ಆರೋಪಿ ರಾಹುಲ್ ಕೈದಿ ಸಂಖ್ಯೆ-6607/20
ಹದಿಮೂರನೇ ಆರೋಪಿ ನಿಯಾಝ್ ಕೈದಿ ಸಂಖ್ಯೆ -6608/20