ETV Bharat / state

ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದಬೇಕು... ಖಾಸಗಿ ವಿಧೇಯಕ ಮಂಡಿಸದ್ದಕ್ಕೆ ರಘು ಆಚಾರ್ ಧರಣಿ

ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಬೇಕೆಂಬ ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡದೇ ಇರುವುದಕ್ಕೆ ಕಾಂಗ್ರೆಸ್ ಸದಸ್ಯ ರಘು ಆಚಾರ್ ಸದನದ ಬಾವಿಗಿಳಿದು ಧರಣಿ ನಡೆಸಿದರು.

Raghu Achar outrage for not allowing private act
ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡದಿರುವುದಕ್ಕೆ ರಘು ಆಚಾರ್ ಆಕ್ರೋಶ
author img

By

Published : Mar 20, 2020, 12:57 PM IST

ಬೆಂಗಳೂರು: ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಬೇಕು ಎಂಬ ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡದೇ ಇರುವುದಕ್ಕೆ ಕಾಂಗ್ರೆಸ್ ಸದಸ್ಯ ರಘು ಆಚಾರ್ ಸದನದ ಬಾವಿಗಿಳಿದು ಧರಣಿ ನಡೆಸಿದರು.

ವಿಧಾನ ಪರಿಷತ್​ನ ಬೆಳಗಿನ ಕಲಾಪದಲ್ಲಿ ಖಾಸಗಿ ವಿಧೇಯಕ ಮಂಡನೆಗೆ ರಘು ಆಚಾರ್ ಅವಕಾಶ ಕೋರಿದರು. ಆದರೆ ಅವಕಾಶ ನೀಡದೇ ಇರುವುದಕ್ಕೆ ಅಸಮಧಾನಗೊಂಡು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಕಾಂಗ್ರೆಸ್, ಜೆಡಿಎಸ್​ನ ಸದಸ್ಯರಿಂದ ಮನವೊಲಿಸುವ ಪ್ರಯತ್ನ ನಡೆಸಲಾಯಿತಾದರೂ ಯಾವುದಕ್ಕೂ ಬಗ್ಗದೆ ಸದನದ ಬಾವಿಯಲ್ಲೇ ಕುಳಿತು ಧರಣಿ ನಡೆಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಾತನಾಡಿ, ನೀವು ಸದನಕ್ಕೆ ಬಂದಿರುವುದು ನಿಮ್ಮ ಪಕ್ಷದ ತೀರ್ಮಾನದಿಂದ, ನಿಮ್ಮ ಪಕ್ಷದ ನಾಯಕರ ಮಾತಿಗಾದರೂ ಬೆಲೆ ಕೊಡಿ ಇಲ್ಲವಾದರೆ ನಿಮ್ಮ ಪಕ್ಷ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ ಎಂದರು. ಆದ್ರೆ ಯಾವುದಕ್ಕೂ ಜಗ್ಗದ ರಘು ಆಚಾರ್ ಧರಣಿ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.