ETV Bharat / state

ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣ: ಸಿಬಿಐ ತನಿಖೆಗೆ ಸರ್ಕಾರ ನಕಾರ

ವಿಧಾನಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್, ರಾಘವೇಂದ್ರ ಸಹಕಾರಿ ಬ್ಯಾಂಕ್ ಅವ್ಯವಹಾರ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದರು.

Raghavendra Co-operative Bank Case Investigation
ವಿಧಾನಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್
author img

By

Published : Sep 14, 2021, 4:14 PM IST

ಬೆಂಗಳೂರು: ಬಸವಗುಡಿಯ ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಬಿಐಗೆ(ಕೇಂದ್ರ ತನಿಖಾ ದಳ) ವಹಿಸಲು ಸರ್ಕಾರ ನಿರಾಕರಿಸಿದ್ದು, ತಜ್ಞರ ಸಮಿತಿ ರಚಿಸುವ ಸಂಬಂಧ ಆರ್​ಬಿಐ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದೆ.

ವಿಧಾನಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್, ರಾಘವೇಂದ್ರ ಸಹಕಾರಿ ಬ್ಯಾಂಕ್ ಅವ್ಯವಹಾರ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಮಾತನಾಡುತ್ತಾ, ಬ್ಯಾಂಕ್‌ನಲ್ಲಿ 46 ಸಾವಿರ ಜನ‌ ಠೇವಣಿದಾರರಿದ್ದಾರೆ. ಹತ್ತು ವರ್ಷದಿಂದ ಹಗರಣ ನಡೆಯುತ್ತಿದೆ. ಆದರೆ ಪ್ರತಿ ವರ್ಷ ಬ್ಯಾಂಕ್​ಗೆ ಒಳ್ಳೆಯ ಪ್ರಶಸ್ತಿ ಕೊಡುತ್ತಾ ಜನರಿಗೆ ಮೋಸ ಮಾಡಲಾಗಿದೆ. ಸರ್ಕಾರ ಬರೀ ಆಡಿಟ್ ಮಾಡುತ್ತಿದೆ. ಹಿಂದಿನ ಆಡಿಟರ್​ಗಳ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಯಾಕೆ ಪ್ರಕರಣವನ್ನು ಸಿಬಿಐಗೆ ಕೊಡದೆ ಸಿಐಡಿಗೆ ಕೊಟ್ಟಿದ್ದೀರಾ? ನಿಮ್ಮಲ್ಲಿ ಸಿಬ್ಬಂದಿ ಇದೆಯಾ? ಎಂದು ಪ್ರಶ್ನಿಸಿದರು.

ಈ ಕುರಿತು ಸರ್ಕಾರ ಕೂಡಲೇ ಒಂದು ಸಮಿತಿ ಮಾಡಬೇಕು. ಹೈಕೋರ್ಟ್ ಈ ಪ್ರಕರಣದಲ್ಲಿ ಮೇಲುಸ್ತುವಾರಿ ಮಾಡುತ್ತಿದೆ ಅಂತ ನಾವು ಜನರಿಗೆ ಕೋರ್ಟ್​ಗೆ ಹೋಗಿ ಎನ್ನಬೇಕಾ? ನಮ್ಮ ಕೇಂದ್ರ ಹಣಕಾಸು ಸಚಿವರು ನಮ್ಮನ್ನು ಕೇಳಿ ಹಣ ಇಟ್ಟಿದ್ದೀರಾ ಎನ್ನುತ್ತಾರೆ. ಹೀಗಿದ್ದಾಗ ನಾವೇನು ಮಾಡಬೇಕು? ಜನರಿಗೆ ನಾವು ಏನು ಹೇಳಬೇಕು? ಅಕ್ರಮದ ಫಲಾನುಭವಿಗಳು ಯಾರು ಎಂದು ಸರ್ಕಾರಕ್ಕೆ ಗೊತ್ತಿಲ್ಲವೇ? ಸಿಎಗಳನ್ನು ಯಾಕೆ ಬಂಧಿಸಿಲ್ಲ? ಕೂಡಲೇ ಸರ್ಕಾರ ತಜ್ಞರ ಸಮಿತಿ ರಚಿಸಬೇಕು. ಇಲ್ಲವೇ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಇಲ್ಲದೇ ಇದ್ದಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರೇ ಸಾಲ ಪಡೆದುಕೊಂಡಿದ್ದಾರೆ. ಆದರೆ ಆರ್​ಬಿಐ ನಿಯಮದ ಪ್ರಕಾರ ಅಧ್ಯಕ್ಷರಲ್ಲ ಅವರ ಸಂಬಂಧಿಕರಿಗೂ ಸಾಲ ಕೊಡುವಂತಿಲ್ಲ. ಆದರೆ ಇಲ್ಲಿ ಸಾಲ ಕೊಡಲಾಗಿದೆ. ಸಾಲದ ಖಾತೆಗಳಿಗೆ ದಾಖಲೆಯೇ ಇಲ್ಲ. ಸಾಲದ ಅರ್ಜಿಯಿಲ್ಲ, ಆಸ್ತಿ ಅಡಮಾನ ಇಲ್ಲ. 2 ಸಾವಿರ ಕೋಟಿ ರೂ ಅವ್ಯವಹಾರ ನಡೆದಿದೆ ಎಂದರು.

ಹಿಂದೆ ನಮ್ಮ ಸರ್ಕಾರ ಇದ್ದಾಗ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರ ನಡೆದಾಗ ಅಧ್ಯಕ್ಷರನ್ನೇ ಬಂಧಿಸಲಾಗಿತ್ತು. ಹಾಗಾಗಿ ಈಗ ಸೂಕ್ತ ಕ್ರಮ ಕೈಗೊಳ್ಳಬೇಕು. ಬರೀ ಕೋರ್ಟ್​ಗೆ ಹೋದರೆ ಠೇವಣಿದಾರರು ಏನು ಮಾಡಬೇಕು. ಗೆದ್ದವನು ಸೋತ, ಸೋತವನು ಸತ್ತ ಅನ್ನುವಂತಾಗಲಿದೆ. ಹಾಗಾಗಿ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ತಳ್ಳಿ. ಸಿಐಡಿ ಬಗ್ಗೆ ನಮಗೆ ಗೌರವವಿದೆ. ಆದರೆ ಸಾವಿರಾರು ಹಣ ಅವ್ಯವಹಾರ ಇದೆ. ಸಿಐಡಿಗೂ ಆಮಿಷ ಒಡ್ಡಬಹುದು ಹಾಗಾಗಿ ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ನೂತನ ಸಚಿವರನ್ನು ಪರಿಚಯಿಸಿದ ಸಿಎಂ ಬೊಮ್ಮಾಯಿ

ಸದನಕ್ಕೆ ಉತ್ತರಿಸಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಆರ್​ಬಿಐ ಅಡಿ ಬಂದಿದೆ. ಹೈಕೋರ್ಟ್, ಆರ್​ಬಿಐ ನೇರವಾಗಿ ಅಧ್ಯಯನ ಮಾಡುತ್ತಿದೆ. ನಮ್ಮ ಆಡಳಿತಾಧಿಕಾರಿ ತೆಗೆದು ನ್ಯಾಯಾಲಯವೇ ನೇರವಾಗಿ ಹೊಸ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಅವರೇ ಪ್ರಕರಣದ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಳೆದ ಆರು ವರ್ಷದ ವಹಿವಾಟು ಕುರಿತು ರಿ-ಆಡಿಟ್​ಗೆ ನಮಗೆ ವಹಿಸಿದೆ. ಅದರಂತೆ ನಾವು ರಿ-ಆಡಿಟ್ ಮಾಡುತ್ತಿದ್ದೇವೆ. ಒಂದು ಲಕ್ಷದವರೆಗೆ ರಿಫಂಡ್ ಮಾಡುತ್ತಿದ್ದೇವೆ. ಠೇವಣಿದಾರರಿಗೆ ಮರುಪಾವತಿ ಮಾಡುವ ಕುರಿತು ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸಲಾಗಿದೆ. ಅಕ್ರಮ ನಡೆದಿರುವ ವರ್ಷಗಳ ಆಡಿಟ್ ಮಾಡಿದ್ದ ಸಿಎಗಳನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಲಾಗಿದೆ ಎಂದು ತಿಳಿಸಿದರು.

1,923 ಕೋಟಿ ರೂ ನಷ್ಟವಾಗಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ, ಸಹಕಾರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಹೈಕೋರ್ಟ್, ಆರ್​ಬಿಐ ಮೇಲುಸ್ತುವಾರಿ ನಡೆಸುತ್ತಿದೆ. ಪ್ರಕರಣವನ್ನು ಸಿಬಿಐಗೆ ಕೊಡಬಾರದು ಎಂದೇನಿಲ್ಲ, ಅಗತ್ಯವಿದ್ದರೆ ಕೊಡಲು ಸಿದ್ಧ. ಸದ್ಯ ಸಿಐಡಿಗೆ ಕೊಡಲಾಗಿದೆ ತನಿಖೆ ನಡೆಯುತ್ತಿದೆ. ಆರು ವರ್ಷದ ಆಡಿಟ್ ನಡೆಯುತ್ತಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಉದ್ಯೋಗಿಗಳು, ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಹೇಳಿದರು.

ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಏನೆಲ್ಲಾ ಮಾಡಬಹುದೋ ಅದನ್ನು ಸಹಕಾರ ಇಲಾಖೆ ಮಾಡುತ್ತಿದೆ. ಅಕ್ರಮವೆಸಗಿದ ಯಾರೂ ತಪ್ಪಿಸಿಕೊಳ್ಳದಂತೆ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಈ ಹಿಂದೆಯೂ ಹಲವು ತನಿಖೆ ಸಿಐಡಿಯೇ ನಡೆಸಿದೆ. ಹಾಗಾಗಿ ಈಗ ಸಿಬಿಐಗೆ ತನಿಖೆ ನೀಡುವುದಿಲ್ಲ. ಆದರೆ ತಜ್ಞರ ಸಮಿತಿ ರಚನೆ ಬಗ್ಗೆ ಆರ್​ಬಿಐ ಜೊತೆ ಮಾತುಕತೆ ನಡೆಸಲಾಗುತ್ತದೆ. ಸಮಿತಿ ರಚಿಸಲು ನಮಗೆ ಯಾವುದೇ ಅಭ್ಯಂತರವಿಲ್ಲ. ಶಿವಮೊಗ್ಗ ಡಿಸಿಸಿ ಅಧ್ಯಕ್ಷರನ್ನು ಜೈಲಿಗೆ ಹಾಕಿರಲಿಲ್ಲವೇ? ಅದೇ ರೀತಿ ಈ ಪ್ರಕರಣದಲ್ಲಿಯೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಮೈಸೂರು ಲ್ಯಾಂಪ್ಸ್ ಜಾಗ ಟ್ರಸ್ಟ್​​ಗೆ ನೋಂದಣಿ: ಅರ್ಧ ಗಂಟೆ ಚರ್ಚೆಗೆ ರೂಲಿಂಗ್ ನೀಡಿದ ಸಭಾಪತಿ ಹೊರಟ್ಟಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.