ETV Bharat / state

ಮತಗಟ್ಟೆಗಳತ್ತ ಪ್ರಜ್ಞಾವಂತ ಮತದಾರರ ನಿರ್ಲಕ್ಷ್ಯ.. ಮಧ್ಯಾಹ್ನದ ಬಳಿಕ ಮತದಾನ ಪ್ರಮಾಣ ಕಡಿಮೆ - ಆರ್​ ಆರ್​ ನಗರದ ಬಹುತೇಕ ವಾರ್ಡ್​ಗಳ ವ್ಯಾಪ್ತಿಯಲ್ಲಿ ಮತದಾನ ಕಡಿಮೆ

ರಾಜರಾಜೇಶ್ವರಿ ನಗರ ಕ್ಷೇತ್ರದ ಕೊಟ್ಟಿಗೆಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ಮತದಾನ ಸಾಕಷ್ಟು ನೀರಸವಾಗಿ ಸಾಗಿದೆ. ಬೆಳಗ್ಗೆ ತಕ್ಕಮಟ್ಟಿನ ಮತದಾನವಾಗಿತ್ತು. ಮಧ್ಯಾಹ್ನ 12ರ ನಂತರ ಜನರು ಮತಗಟ್ಟೆಗಳತ್ತ ಬರುವುದು ವಿರಳವಾಗಿದೆ. ಮೂರು ಗಂಟೆವರೆಗೂ ಶೇ.5 ರಿಂದ 10 ರಷ್ಟು ಮತದಾನ ಆಗಿಲ್ಲ..

ಮತಗಟ್ಟೆಗಳತ್ತ ಪ್ರಜ್ಞಾವಂತ ಮತದಾರರ ನಿರ್ಲಕ್ಷ್ಯ

author img

By

Published : Nov 3, 2020, 5:16 PM IST

ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾರರ ಆಸಕ್ತಿ ಮಧ್ಯಾಹ್ನದ ನಂತರ ಇಳಿಮುಖವಾಗಿದೆ. ಆರ್​ ಆರ್​ ನಗರದ ಬಹುತೇಕ ವಾರ್ಡ್​ಗಳ ವ್ಯಾಪ್ತಿಯಲ್ಲಿ ಮತದಾನ ಕಡಿಮೆ ಆಗಿದ್ದು, ನಗರ ಪ್ರದೇಶದ ಪ್ರಜ್ಞಾವಂತ ಮತದಾರರು ಮತಗಟ್ಟೆಗಳತ್ತ ಬರಲು ನಿರ್ಲಕ್ಷ ತೋರಿರುವುದು ಸ್ಪಷ್ಟವಾಗಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಕೊಟ್ಟಿಗೆಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ಮತದಾನ ಸಾಕಷ್ಟು ನೀರಸವಾಗಿ ಸಾಗಿದೆ. ಬೆಳಗ್ಗೆ ತಕ್ಕಮಟ್ಟಿನ ಮತದಾನವಾಗಿತ್ತು. ಮಧ್ಯಾಹ್ನ 12ರ ನಂತರ ಜನರು ಮತಗಟ್ಟೆಗಳತ್ತ ಬರುವುದು ವಿರಳವಾಗುತ್ತಾ ಸಾಗಿ ಮೂರು ಗಂಟೆವರೆಗೂ ಶೇ.5 ರಿಂದ 10 ರಷ್ಟು ಮತದಾನ ಆಗಿಲ್ಲ.

ಸಂಜೆ 3 ರಿಂದ 5ರ ನಡುವಿನ ಅವಧಿಯಲ್ಲಿ ಒಂದಿಷ್ಟು ಮತದಾನವಾಗುವ ನಿರೀಕ್ಷೆ ಹೊಂದಲಾಗಿದೆ. ಆದರೆ, ಸಂಜೆ ನಾಲ್ಕು ಗಂಟೆಯವರೆಗೂ ನಿರೀಕ್ಷಿತ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳತ್ತ ಬಾರದಿರುವುದು ಗಮನಕ್ಕೆ ಬಂದಿದೆ.

ಕೊಟ್ಟಿಗೆಪಾಳ್ಯ ವ್ಯಾಪ್ತಿಯಲ್ಲಿ ಮಧ್ಯಮ ಹಾಗೂ ಕೆಳವರ್ಗದ ಮತದಾರರ ಸಂಖ್ಯೆ ಸಾಕಷ್ಟಿದೆ. ಗಾರ್ಮೆಂಟ್ಸ್ ಉದ್ಯೋಗಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರಿಗೆ ಇಂದು ರಜಾ ನೀಡದಿರುವುದು ಮತದಾನ ಕಡಿಮೆಯಾಗಲು ಕಾರಣ ಎಂದು ವಿವಿಧ ಪಕ್ಷಗಳ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಮಧ್ಯಾಹ್ನದ ಬಳಿಕ ಮತದಾನ ಪ್ರಮಾಣ ಕಡಿಮೆ

ಸಾಕಷ್ಟು ಸಂಖ್ಯೆಯಲ್ಲಿ ಪ್ರಜ್ಞಾವಂತ ಮತದಾರರು ಇದ್ದರೂ ಸಹ ಅವರು ಮತದಾನ ಕೇಂದ್ರದತ್ತ ಬಂದಿಲ್ಲ. ವಿವಿಧ ಖಾಸಗಿ ಕಂಪನಿ ಉದ್ಯೋಗಿಗಳು ಸಾಫ್ಟ್ವೇರ್ ಇಂಜಿನಿಯರ್​ಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದು, ಅವರು ಮತದಾನದತ್ತ ಹೆಚ್ಚಿನ ಒಲವು ತೋರದಿರುವುದು ಸಾಕಷ್ಟು ಸಂಖ್ಯೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ.

ಒಂದೆಡೆ ಮೇಲ್ವರ್ಗದ ಜನರಿಗೆ ನಿರುತ್ಸಾಹ ಎದುರಾದರೆ ಕೆಳ ಹಾಗೂ ಮಧ್ಯಮವರ್ಗದ ನಾಗರಿಕರಿಗೆ ಉದ್ಯೋಗದಿಂದ ಬಿಡುವು ಸಿಗದಿರುವುದು ಮತದಾನ ಇಳಿಕೆಗೆ ಕಾರಣವಾಗಿದೆ ಎಂದು ಭೂತ್​​ಗಳಲ್ಲಿ ಕುಳಿತಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ ಶೇ. 50ಕ್ಕಿಂತ ಹೆಚ್ಚಿನ ಪ್ರಮಾಣದ ಮತದಾನ ಆದದ್ದು ಬಹಳ ಕಡಿಮೆ. ಈ ಉಪಚುನಾವಣೆ ಸಂದರ್ಭದಲ್ಲಿ ಕೋವಿಡ್ ಆತಂಕ ಕೂಡ ಹೆಚ್ಚಿರುವ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಶೇ. 45 ರಿಂದ 50 ರ ಹಂತ ತಲುಪಿದರೆ ಅದೇ ದೊಡ್ಡ ಸಾಧನೆ ಅನ್ನುವ ಸ್ಥಿತಿ ಇದೆ.

ಮತಗಟ್ಟೆಗಳತ್ತ ಪ್ರಜ್ಞಾವಂತ ಮತದಾರರ ನಿರ್ಲಕ್ಷ್ಯ
ಮತಗಟ್ಟೆಗಳತ್ತ ಪ್ರಜ್ಞಾವಂತ ಮತದಾರರ ನಿರ್ಲಕ್ಷ್ಯ

ಕೆಪಿಸಿಸಿ ಕಾರ್ಯದರ್ಶಿ ಡಾ.ಕೆ ಟಿ ರಾಜು ಪ್ರಕಾರ, ಇದು ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರು ಹೆಚ್ಚಿರುವ ಅಂತಹ ಸ್ಥಳ.‌ ಬೆಳಗ್ಗೆ ಶೇ. 30 ರಷ್ಟು ಮತದಾನ ಆಗಿದೆ. ಸಂಜೆಯ ನಂತರ ಸ್ವಲ್ಪ ಪ್ರಮಾಣ ಕಡಿಮೆಯಾಗಿದೆ. ನಿರ್ಭೀತಿಯಿಂದ ಮತದಾನ ನಡೆದಿದ್ದು, ಎಲ್ಲಿಯೂ ಅಹಿತಕರ ಘಟನೆ ವರದಿಯಾಗಿಲ್ಲ.

ಬಿಡಿಎ ಲೇಔಟ್ ಭಾಗದ ಜನ ಸಾಕಷ್ಟು ಪ್ರಮಾಣದಲ್ಲಿ ಆಚೆ ಬರುತ್ತಿಲ್ಲ. ಇದರಿಂದಲೂ ಮತದಾನ ಪ್ರಮಾಣ ಕಡಿಮೆಯಾಗಿದೆ. ಕೆಪಿಸಿಸಿ ವೈದ್ಯರ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಜಾನಕಿ, ಈ ಭಾಗದ ಗಾರ್ಮೆಂಟ್ಸ್​​ಗಳು ಹಾಗೂ ಕೆಲ ಕೈಗಾರಿಕೆಗಳಿಗೆ ರಜಾ ನೀಡಿಲ್ಲ. ಹೀಗಾಗಿ ಒಂದಿಷ್ಟು ಮತದಾನ ಕಡಿಮೆಯಾಗಿದೆ.

ಶಿಕ್ಷಿತ ಹಾಗೂ ಪ್ರಜ್ಞಾವಂತ ಮತದಾರರು ಎಲ್ಲಾ ಕಡೆ ಮತದಾನದಲ್ಲಿ ಸಮರ್ಪಕವಾಗಿ ಭಾಗಿಯಾಗುತ್ತಿಲ್ಲ. ಇಲ್ಲಿಯೂ ಅದೇ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಒಂದಿಷ್ಟು ಕಾಲಾವಕಾಶ ಇದ್ದು, ಹೆಚ್ಚಿನ ಮತದಾರರು ಬಂದು ಮತದಾನ ಮಾಡಬೇಕೆಂದು ಕೋರುತ್ತೇನೆ. ಪ್ರಜ್ಞಾವಂತ ಮತದಾರರು ಆಗಮಿಸಿ ಸೂಕ್ತ ವ್ಯಕ್ತಿಯ ಆಯ್ಕೆಗೆ ಸಹಕಾರ ನೀಡಿದಾಗ ವ್ಯವಸ್ಥೆ ಚೆನ್ನಾಗಿರುತ್ತದೆ ಹಾಗೂ ಉತ್ತಮವಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.