ಬೆಂಗಳೂರು: ಮಹಾನಗರದಲ್ಲಿ ಮಳೆ ಬಂದಾಗ ಜನರಿಗೆ ಬಹಳ ತೊಂದರೆಯಾಗಿತ್ತು. ಈ ಬಗ್ಗೆ ಮಹತ್ವದ ಸಭೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ, ಕಂದಾಯ ಇಲಾಖೆ ಜಂಟಿ ಸಭೆ, ಸರ್ವೆಯರ್ ಮತ್ತು ಇಂಜಿನಿಯರ್‌ಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಮುಂದೆ ಮಳೆ ಬಂದಾಗ ಇಂತಹ ಸಮಸ್ಯೆ ಆಗಲೇಬಾರದು ಅಂತ ಸೂಚನೆ ನೀಡುತ್ತೇನೆ. ರಾಜಕಾಲುವೆ ಒತ್ತುವರಿಯಾಗಿದ್ದು ಡೆಮಾಲಿಷ್ ಮಾಡಲು ತ್ವರಿತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಒಂದು ಸುತ್ತಿನ ಡೆಮಾಲಿಷ್ ಆಗಿದೆ. ಈಗ ಆಯುಧಪೂಜೆ ಇರೋದ್ರಿಂದ ಎಲ್ಲರೂ ಊರಿಗೆ ಹೋಗಿದ್ದಾರೆ ಎಂದು ಸಚಿವರು ಹೇಳಿದರು.
ಹಬ್ಬ ಮುಗಿದ ಬಳಿಕ ಮತ್ತೊಂದು ಸುತ್ತಿನ ಡೆಮೊಲೀಷನ್ ನಡೆಯಲಿದೆ. ಪೂರ್ವ ಭಾಗದಲ್ಲಿ ಡೆಮೋಲಿಷನ್ ಆಗಲಿದೆ. ಎಷ್ಟೇ ದೊಡ್ಡವರಿದ್ರೂ ಕೂಡ ಆಗಲಿದೆ. ಕೆಲವರು ಕೆವಿಯಟ್ ಹೋಗಿದ್ದಾರೆ. ಮತ್ತೆ ರಾಜಕಾಲುವೆ ತೆರವು ಆರಂಭಿಸ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ನವರಾತ್ರಿ ಒಂಭತ್ತು ದಿನ ಇರೋದ್ರಿಂದ ಎಲ್ಲರೂ ಊರಿಗೆ ಹೋಗಿದ್ದಾರೆ. ಹಬ್ಬ ಮುಗಿದ ಬಳಿಕ ಡೆಮೋಲೀಷನ್ ಪ್ರಾರಂಭ ಆಗಲಿದೆ. ದೊಡ್ಡವರಿಂದಲೇ ಆರಂಭಿಸಲು ಇಂದಿನ ಸಭೆಯಲ್ಲಿ ಸೂಚನೆ ನೀಡಲಿದ್ದೇನೆ ಎಂದರು.
ಸುಳ್ಳು ಕೇಸ್ ದಾಖಲಿಸಿದ್ದಾರೆ: ಸಿದ್ದರಾಮಯ್ಯ ಅವರು ಅವರ ಪತ್ರಿಕಾ ಹೇಳಿಕೆಯಲ್ಲಿ ಪಿಎಫ್ಐ ನಿಷೇಧ ಬಗ್ಗೆ ಮೊದಲೇ ವರದಿ ನೀಡಿದ್ದೆ ಎಂದಿದ್ದಾರೆ. ನಾನು ಹೇಳಿದ ಬಳಿಕ ಬ್ಯಾನ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಇದೇ ಪಿಎಫ್ಐ, ಕೆಡಿಎಫ್ ಬಗ್ಗೆ 1.600 ಕೇಸ್ ಹಾಕಿದ್ರು. ಪೊಲೀಸರ ಮೇಲೆ ಸಾರ್ವಜನಿಕರ ಮೇಲೆ ಹಲ್ಲೆ ಅಂತ ದಾಖಲಾಗಿತ್ತು. 2012 ರ ಡಿ. 10 ರಲ್ಲಿ ತನ್ವೀರ್ ಸೇಠ್ ಪತ್ರ ಬರೆದು ಪಿಎಫ್ಐ ಅಮಾಯಕರು ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಕೇಸ್ ವಾಪಸ್ ಪಡೆಯಬೇಕು ಅಂತ ಮನವಿ ಮಾಡುತ್ತಾರೆ.
ತಸ್ಲೀಮಾ ನಸ್ರೀನ್ ಪುಸ್ತಕದ ಬಗ್ಗೆ ಇರುವ ಕೇಸ್ ಅದು. ಕಾಂಗ್ರೆಸ್ನವರು ಅದನ್ನು ಮಾನ್ಯ ಮಾಡಲು ಅಂದಿನ ಡಿಜಿ - ಐಜಿಪಿ ಸರ್ಕಾರಕ್ಕೆ ಸಲಹೆ ಕೇಳುತ್ತಾರೆ. ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದು ಅಂತ ಪೊಲೀಸ್ ಇಲಾಖೆ ರಿಪೋರ್ಟ್ ಕೊಡುತ್ತದೆ. ಲಾ ಕಮಿಟಿ ಕೂಡ ವಾಪಸ್ ಪಡೆಯುವುದು ಸಮಾಜಕ್ಕೆ ಮಾರಕ ಎಂದು ವರದಿ ಕೊಡ್ತಾರೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಈ ಎಲ್ಲ 1,600 ಜನ ವಿಧ್ವಂಸಕ ಕೃತ್ಯ ಎಸಗಿದವರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕೆಲಸ ಮಾಡ್ತಾರೆ. ಈಗ ಹೇಳಿ, ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿಲ್ವಾ? ಎಂದು ಪ್ರಶ್ನಿಸಿದರು. ಅಂದಿನ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಹೇಳಿದ್ದರು. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ ಅಂತ. ಈಗ ಸಿದ್ದರಾಮಯ್ಯ ನಾವೇ ಹೇಳಿದ್ದು ಬ್ಯಾನ್ ಮಾಡೋಕೆ ಅಂತಿದ್ದಾರೆ. ಇವರದ್ದು ಗೋಸುಂಬೆ ವರ್ತನೆ ಅಲ್ಲವೇ?. ಕುಟ್ಟಪ್ಪ, ರುದ್ರೇಶ್, ಮಡಿವಾಳ ಇವರ ಹತ್ಯೆ ಬಳಿಕ ಕೇಸ್ ಹಾಕಲು ಹಿಂಜರಿದರು.
ಇದೆಲ್ಲವನ್ನೂ ನೋಡಿದರೆ ಕಾಂಗ್ರೆಸ್ ಈಗ ಸೂತಕದ ಮನೆಯಾಗಿದೆ. ಕೊಡಗು, ಮೈಸೂರು, ಮಂಗಳೂರಿನಲ್ಲಿ ಇವರಿಗೆ ವಿದೇಶಿ ಟ್ರೈನಿಂಗ್ ನೀಡಲಾಗಿದೆ ಎನ್ನುವ ಮಾಹಿತಿ ಅಧಿಕೃತವಾಗಿದೆ. ಬೈಕಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು, ಕೆ.ಜಿ ಹಳ್ಳಿ, ಡಿ. ಜೆ ಹಳ್ಳಿ ಗಲಭೆ ಹೇಗೆ? ಮಾಡಬೇಕು ಎಂದರು.
ಸಿದ್ದರಾಮಯ್ಯ ಕೂಡಲೇ ಕ್ಷಮೆ ಕೇಳಬೇಕು- ಅಶೋಕ್; ಕೇರಳ ನಿವೃತ್ತ ಪೊಲೀಸರು ಬಂದು ಹೇಗೆ ಕೇಸ್ ಆಗದ ರೀತಿ ಹತ್ಯೆ ಮಾಡಬೇಕು ಅಂತ ಟ್ರೈನಿಂಗ್ ನೀಡಿರುವ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ನಾವೇ ಹೇಳಿದ್ದು, ಅದಕ್ಕೆ ಬ್ಯಾನ್ ಮಾಡಿದೆ ಅಂತ ಹೇಳಿಕೊಳ್ತಾರೆ. ಅವರಿಗೆ ನಾಚಿಕೆಯಾಗಬೇಕು. ಕೂಡಲೇ ಕ್ಷಮೆ ಕೇಳಬೇಕು ಅಂತ ಅಶೋಕ್ ಒತ್ತಾಯಿಸಿದರು.
ಪಿಎಫ್ಐ ನವರು ಇರುವ 175 ಕೇಸ್ ದಾಖಲಾಗಿದೆ. ಅವರಿಂದ ಪ್ರಾಯೋಜಿತರಾದ ಕೆಎಫ್ಡಿ ಭಾಗಿಯಾಗಿರುವ ಕೇಸ್ ಇದೆ. ಸಿದ್ದರಾಮಯ್ಯ ಹಲವು ಭಾಗ್ಯ ನೀಡಿದ್ದಾರೆ. ಪಿಎಫ್ಐ ಭಾಗ್ಯ ಸಹ ನೀಡಿದ್ದಾರೆ ಎನ್ನುವುದು ಈಗ ಅರ್ಥವಾಗುತ್ತಿದೆ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಬರುತ್ತಿದೆ. ನೀವು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬರ್ತಿದ್ದೀರಾ.? ಕ್ಷಮಿಸಿ ಬಿಡಿ ಯಾತ್ರೆ ನಾ ಇದು. ಕಾಶ್ಮೀರವನ್ನೂ ಪಾಕಿಸ್ತಾನಕ್ಕೆ ಬಿಟ್ಟುಕೊಡುವುದಕ್ಕೆ ಸಿದ್ದರಾಗಿದ್ದವರು. ಪ್ರಧಾನಿಯಾಗಿ ನರೇಂದ್ರ ಮೋದಿ ಬಂದ ಬಳಿಕ 370 ಆರ್ಟಿಕಲ್ ತೆಗೆಯುವ ಮೂಲಕ ಭಾರತದ ಅಖಂಡತೆಯನ್ನು ಎತ್ತಿಹಿಡಿದರು. ಲಾಲ್ ಚೌಕ್‌ನಲ್ಲಿ ಭಾರತದ ತಿರಂಗ ಹಾರಿಸಿದ್ದು ಮೋದಿ ಬಂದ ಮೇಲೆ. ಮೊದಲು ಅಲ್ಲಿ ಬಾಂಬ್, ಕಲ್ಲು ಹಾರಿಸುವವರು ಮಾತ್ರ ಇದ್ದರು. ಇದು ಭಾರತ್ ಜೋಡೋ ಅಲ್ಲ, ಕ್ಷಮಿಸಿ ಬಿಡಿ ನಮ್ಮನ್ನು ಎಂದರು.
ದೇಶ ಒಡೆಯುವುದು ಸಮ್ಮತವೇ?: ಹಿಂದಿನವರು ಮಾಡಿದ ತಪ್ಪಿಗೆ ಕ್ಷಮಿಸಿ ಬಿಡಿ. ನಮ್ಮನ್ನ ಯಾತ್ರೆ ಮೊಮ್ಮಗ ರಾಹುಲ್ ಮಾಡ್ತಿದ್ದಾರೆ. ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಮತ್ತೆ 370 ಆರ್ಟಿಕಲ್ ತರೋದಾಗಿ. ಇದರ ಅರ್ಥ ಏನು? ಇದರಿಂದ ಮತ್ತೆ ದೇಶದಲ್ಲಿ ಎರಡು ಧ್ವಜ ಹಾರಿಸಲು ಮುಂದಾಗ್ತಿದ್ದಾರೆ. ಇದನ್ನ ಯಾಕೆ ರಾಹುಲ್ ಗಾಂಧಿ ಖಂಡಿಸಲಿಲ್ಲ. ದೇಶ ಒಡೆಯುವುದು ಕಾಂಗ್ರೆಸ್ ಗೆ ಸಮ್ಮತವೇ? ರಾಹುಲ್ ಗಾಂಧಿಯವರೇ ಹೇಳಬೇಕು.
ಮೋದಿ ವಿರುದ್ಧ ಹೋರಾಡುವ ಧಮ್ ಇವರಿಗಿಲ್ಲ. ಹಾಗಾಗಿ ದೇಶದಲ್ಲಿ ರಾಹುಲ್ ಗಾಂಧಿ ವಾಯುವಿಹಾರ ಮೂಲಕ ಶಕ್ತಿ ಪಡೆಯುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಹೆಸರಲ್ಲಿ ಕೋಟಿಗಟ್ಟಲೆ ಹಣ ಮಾಡಿದ್ದು ಯಾರು? ಕಟಕಟೆಯಲ್ಲಿ ವಿಚಾರಣೆ ಎದುರಿಸ್ತಿದ್ದಾರೆ. ಇವರು ಕರೆಪ್ಷನ್ ಬಗ್ಗೆ ಮಾತಾಡ್ತಿದ್ದಾರೆ. ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗಾಂಧೀಜಿ ಹೇಳಿದ ರಾಷ್ಟ್ರೀಯ ಕಾಂಗ್ರೆಸ್ ಮುಚ್ಚಲಾಗಿದೆ.
ಕೋಟ್ಯಂತರ ಅವ್ಯವಹಾರ ಆಗಿದೆ: ಈಗ ಇರೋದು ಭ್ರಷ್ಟಾಚಾರದ ಕಾಂಗ್ರೆಸ್. ಈಗ ದೇಶದಲ್ಲಿ ರಾಜಸ್ಥಾನ ಮತ್ತು ಛತ್ತೀಸ್ಗಢ ಎರಡು ಕಡೆ ಕಾಂಗ್ರೆಸ್ ಅಸ್ತಿತ್ವದಲ್ಲಿ ಇದೆ. ಹಣದ ಕೊರತೆ ನೀಗಿಸಿಕೊಳ್ಳಬೇಕಾಗಿದೆ. ಸಮೃದ್ಧ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಕರ್ನಾಟಕಕ್ಕೆ ಬರ್ತಿದ್ದಾರೆ. ಸ್ಟೀಲ್ ಬ್ರಿಡ್ಜ್‌ನಲ್ಲಿ ಕೋಟ್ಯಂತರ ಅವ್ಯವಹಾರ ಆಗಿದೆ ಅಂತ ಜನ ಹೋರಾಟ ಮಾಡಿದರು ಎಂದು ವಿವರಿಸಿದರು.
ನೈತಿಕ ಹಕ್ಕು ಇವರಿಗಿಲ್ಲ: ಸೋನಿಯಾ ಗಾಂಧಿ ಕೂಡ ರೆಸ್ಟ್ ಮಾಡಲು ರಾಜ್ಯಕ್ಕೆ ಬಂದಿದ್ದಾರೆ. ಮಡಿಕೇರಿಗೆ ಬಂದು ರೆಸ್ಟ್ ಮಾಡಿ ಹೋಗ್ತಾರೆ. ಭ್ರಷ್ಟಾಚಾರದ ಬಗ್ಗೆ ಇವರಿಗೆ ಮಾತನಾಡಲು ಅರ್ಹತೆ ಇಲ್ಲ. ಪಿಎಸ್ಐ ಬ್ಯಾನ್ ನಾವು ಹೇಳಿದ್ದಕ್ಕೆ ಮಾಡಿದ್ದು ಅನ್ನೋ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇವರಿಗಿಲ್ಲ. ರಾಹುಲ್ ಗಾಂಧಿ ಮಾತ್ರ ಅಲ್ಲ, ದೇಶದ ಯಾವುದೇ ಪ್ರಜೆ ಸಂಕಷ್ಟದಲ್ಲಿ ಇದ್ದಾಗ ಅವರಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ. ನಮ್ಮ ಪೊಲೀಸರು ಅವರಿಗೆ ರಕ್ಷಣೆ ಕೊಡ್ತಿದ್ದಾರೆ. ಯಾರಿಗೆ ಎಷ್ಟು ರಕ್ಷಣೆ ನೀಡಬೇಕು ಎನ್ನುವುದನ್ನು ಇಂಟಲಿಜೆನ್ಸ್ ನಿರ್ಣಯ ಮಾಡುತ್ತಾರೆ. ಶಾಂತಿಪ್ರಿಯರ ನಾಡಾದ ಕರ್ನಾಟಕದಲ್ಲಿ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಓದಿ: ಕೊಲೆಗಡುಕರ ಕೇಸ್ ವಾಪಸ್ ತಗೆದುಕೊಂಡರಲ್ಲ ಅದಕ್ಕೆ ಕಾಂಗ್ರೆಸ್ ನಶಿಸುತ್ತಿದೆ : ಕೆ ಎಸ್ ಈಶ್ವರಪ್ಪ