ETV Bharat / state

ನಟಿ ರಮ್ಯಾರನ್ನು ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ: ಸಚಿವ ಆರ್.ಅಶೋಕ್ ಟಾಂಗ್​ - ಕರ್ನಾಟಕ ವಿಧಾನಸಭೆ ಚುನಾವಣೆ

ಬಿಜೆಪಿ ಪಕ್ಷದಿಂದ ನಟಿ ರಮ್ಯಾರವರಿಗೆ ಯಾವುದೇ ಆಹ್ವಾನ ನೀಡಿಲ್ಲವೆಂದು ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ಧಾರೆ.

bjp
ಸಚಿವ ಆರ್.ಅಶೋಕ್
author img

By

Published : Apr 23, 2023, 1:22 PM IST

ಬೆಂಗಳೂರು: ಬಿಜೆಪಿ ರಮ್ಯಾರನ್ನು ಕರೆಯುವಷ್ಟು ಬರಗೆಟ್ಟಿಲ್ಲ ಎಂದು ಸಚಿವ ಆರ್.ಅಶೋಕ್ ಟಾಂಗ್ ‌ನೀಡಿದ್ದಾರೆ. ನಟಿ ರಮ್ಯಾ ಅವರು ಬಿಜೆಪಿಯಿಂದಲೂ ಆಫರ್ ಬಂದಿತ್ತು, ಆ ಪಕ್ಷದ ಪ್ರಮುಖ ನಾಯಕರೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದ್ದರು ಜೊತೆಗೆ ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿದ್ದರು ಎಂದು ರಮ್ಯಾ ಹೇಳಿಕೆ ನೀಡಿದ್ದರು‌.

ಇದಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್, ನಮ್ಮ ಪಕ್ಷದಿಂದ ರಮ್ಯಾ ಅವರಿಗೆ ಆಹ್ವಾನ ಕೊಟ್ಟಿಲ್ಲ. ಚುನಾವಣೆ ವೇಳೆ ರಮ್ಯಾ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಚುನಾವಣೆ ವೇಳೆ ಎಲ್ಲರೂ ಹೀರೋ ಆಗಲು ಪ್ರಯತ್ನಿಸುತ್ತಾರೆ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್​ಗೆ ಚುನಾವಣೆ ವೇಳೆ ಸಹಾಯ ಆಗಲಿ ಅಂತ ರಮ್ಯಾ ಹೀಗೆ ಮಾತಾಡಿದ್ದಾರೆ. ರಮ್ಯಾ ಯಾವತ್ತಿದ್ದರು ಕಾಂಗ್ರೆಸ್​ನವರು‌. ರಮ್ಯಾಗೆ ಆಹ್ವಾನ ಇಲ್ಲ, ಸೀಟೂ ಕೊಡಲ್ಲ, ಸಚಿವ ಸ್ಥಾನವೂ ಕೊಡಲ್ಲ. ಅವರು ಸಿನಿಮಾದಲ್ಲಿದ್ದಾರೆ, ಅಲ್ಲೇ ಇರಲಿ ಎಂದು ಕೌಂಟರ್ ನೀಡಿದರು.

ಸಿದ್ದರಾಮಯ್ಯ ಅವರ ಲಿಂಗಾಯತ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸ್ವಾಮೀಜಿಗಳು ಸಹ ಇದನ್ನು ಖಂಡಿಸಿದ್ದಾರೆ. ಸಮುದಾಯ ವಿರೋಧಿ ಹೇಳಿಕೆ ಇದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ ಆಗಲಿದೆ. ಲಿಂಗಾಯತರ ಶಾಪ ಕಾಂಗ್ರೆಸ್​ಗೆ ತಟ್ಟುತ್ತದೆ ಎಂದರು.

ಇದನ್ನೂ ಓದಿ: ಲಿಂಗಾಯತ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ: ಸಿಎಂ ಬೊಮ್ಮಾಯಿ‌

ಬಿಜೆಪಿ ಜಯ ನಿಶ್ಚಿತ: ಈ ಬಾರಿ ಜನತೆ ಸತ್ಯ, ನ್ಯಾಯ ಮತ್ತು ಸಮಾನತೆಗೆ ಆಶೀರ್ವಾದ ಮಾಡುತ್ತಾರೆ. ಅದೇ ಪಥದಲ್ಲಿ ಬಿಜೆಪಿ ನಡೆಯುತ್ತಿದ್ದು, ಬಿಜೆಪಿ ಜಯ ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ‌. ಬಸವ ಜಯಂತಿಯ ಅಂಗವಾಗಿ ಚಾಲುಕ್ಯ ವೃತ್ತದ ಬಳಿಯಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನವ ಕರ್ನಾಟಕ ನಿರ್ಮಾಣ ಮಾಡುವ ಸಂಕಲ್ಪವಿದ್ದು, ಈ ಸಂದರ್ಭದಲ್ಲಿ ಕುಲ ಕುಲವೆಂದು ಬಡಿದಾಡದಿರಿ ಎಂಬ ಕನಕದಾಸರ ಹಾಡಿನ ಸಾಲನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಕುಲಕುಲಗಳಲ್ಲಿ ವ್ಯತ್ಯಾಸ ಹಾಗೂ ಬಡಿದಾಟ ಉಂಟು ಮಾಡುವ ಶಕ್ತಿಗಳಿಗೆ ದೇವರು ಸದ್ಭುದ್ದಿ ಕೊಡಲಿ ಎಂದರು.

ಚುನಾವಣೆಯಲ್ಲಿ ಜನರು ತೀರ್ಪು ನೀಡುತ್ತಾರೆ. ಅದನ್ನು ಎಲ್ಲರೂ ಒಪ್ಪಬೇಕು. ನಮ್ಮ ಧ್ಯೇಯ ಧೋರಣೆಗಳನ್ನು ಮುಂದಿಟ್ಟುಕೊಂಡು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಬಸವ ಚಿಂತನೆ, ತತ್ವ ಆದರ್ಶಗಳ ಮೇಲೆ ಬಸವ ಪಥದಲ್ಲಿ ಆಡಳಿತ ಮಾಡಿದ್ದು ಮುಂದೆಯೂ ಬಸವ ಪಥದಲ್ಲಿ ಕರ್ನಾಟಕದ ತುಳಿತಕ್ಕೊಳಪಟ್ಟ ಸಮುದಾಯಗಳಿಂದ ಹಿಡಿದು ಎಲ್ಲಾ ದುಡಿಯುವ ಸಮುದಾಯಗಳಿಗೆ ಗೌರವ, ಸನ್ಮಾನ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಧ್ಯೇಯವಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದು, ಕರ್ನಾಟಕದ ಮಹಾಜನತೆ ನಮಗೆ ಸಂಪೂರ್ಣ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹುಬ್ಬಳ್ಳಿಗೆ ಆಗಮಿಸಿದ ರಾಹುಲ್​ ಗಾಂಧಿಗೆ ಸ್ವಾಗತ ಕೋರಿದ ಜಗದೀಶ್ ಶೆಟ್ಟರ್

ಇದನ್ನೂ ಓದಿ: ಸರಳ ಸಮಾರಂಭದಲ್ಲಿ ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿಗೆ ಪಟ್ಟಾಭಿಷೇಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.