ETV Bharat / state

ದಮ್ಮು, ತಾಕತ್ತು ಇದ್ದರೆ ಕಾಂಗ್ರೆಸ್ ಮೀಸಲಾತಿ ರದ್ದು ಮಾಡಲಿ: ಆರ್. ಅಶೋಕ್ - Minister R Ashok

ಡಿ ಕೆ ಶಿವಕುಮಾರ್​ ಸ್ವಾಮೀಜಿಗಳ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ಕೊಟ್ಟಿದ್ದಾರೆ. ಸ್ವಾಮೀಜಿಗಳು ಜ್ಞಾನಿಗಳು, ತಿಳಿದವರು. ಅವರ ಬಗ್ಗೆ ಹೀಗೆ ಮಾತಾಡಿದ್ದು ಸರಿಯಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

r-ashok-reaction-on-congress-leaders
ದಮ್, ತಾಕತ್ತು ಇದ್ದರೆ ಕಾಂಗ್ರೆಸ್ ಮೀಸಲಾತಿ ರದ್ದು ಮಾಡಲಿ: ಆರ್.ಅಶೋಕ್
author img

By

Published : Mar 26, 2023, 3:31 PM IST

ಬೆಂಗಳೂರು: ದಮ್, ತಾಕತ್ತು ಇದ್ದರೆ ಕಾಂಗ್ರೆಸ್ ಮೀಸಲಾತಿ ರದ್ದು ಮಾಡಲಿ ಎಂದು ಸಚಿವ ಆರ್ ಅಶೋಕ್ ಸವಾಲು ಹಾಕಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ತಾಕತ್ತು, ದಮ್ಮು, ಧೈರ್ಯ ಇದರೆ ಮೀಸಲಾತಿ ರದ್ದು ಮಾಡಲಿ ನೋಡೋಣ. ಕಾಂಗ್ರೆಸ್ ನವರು ತಮ್ಮ ಪ್ರಣಾಳಿಕೆಯಲ್ಲಿ ಅದನ್ನು ಹಾಕಲಿ. ಮೀಸಲಾತಿ ಕೊಟ್ಟಿರುವುದು ಸರಿ ಇಲ್ಲ ಎಂದು ಹಾಕಲಿ. ಆಗ ಜನರು ಸರಿಯಾದ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ನವರು ಹಿಂದೆ ಏಕೆ ಮೀಸಲಾತಿ ಹೆಚ್ಚಳ ಮಾಡಿಕೊಟ್ಟಿಲ್ಲ. ಒಳಮೀಸಲಾತಿ ಏಕೆ ಕೊಟ್ಟಿಲ್ಲ?. ಇವರಿಗೆ ಏನು ದಾಡಿ ಆಗಿತ್ತು. ಇಷ್ಟು ವರ್ಷ ಏನು ಮಣ್ಣು ತಿಂತಾ ಇದ್ರಾ. ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್ ಗೆ ಹೊಟ್ಟೆ ಉರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಡಿಕೆಶಿ ಕ್ಷಮೆಯಾಚಿಸಬೇಕು: ಲಿಂಗಾಯತ, ಒಕ್ಕಲಿಗ ಸ್ವಾಮೀಜಿಗಳಿಗೆ ಹೆದರಿಸಿ, ಬೆದರಿಸಿ ಮೀಸಲಾತಿಗೆ ಒಪ್ಪಿಸಲಾಗಿದೆ ಎಂಬ ಡಿಕೆಶಿ ಆರೋಪ ವಿಚಾರವಾಗಿ ಮಾತನಾಡಿ, ಡಿಕೆಶಿ ಸ್ವಾಮೀಜಿಗಳ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ಕೊಟ್ಟಿದ್ದಾರೆ. ಸ್ವಾಮೀಜಿಗಳು ಜ್ಞಾನಿಗಳು, ತಿಳಿದವರು. ಅವರ ಬಗ್ಗೆ ಹೀಗೆ ಮಾತಾಡಿದ್ದು ಸರಿಯಲ್ಲ. ಡಿಕೆಶಿ ತಮ್ಮ ಹೇಳಿಕೆ ವಾಪಸ್ ಪಡೆಯಲಿ. ಸ್ವಾಮೀಜಿಗಳ ಕ್ಷಮೆಯನ್ನು ಡಿಕೆಶಿ ಕೇಳಲಿ ಎಂದು ಆಗ್ರಹಿಸಿದರು.

ಹೆದರಿಸುವುದು, ಗದರಿಸುವುದು ಕಾಂಗ್ರೆಸ್ ಸಂಸ್ಕೃತಿ. ಅವರದ್ದು ಗೂಂಡಾ ರಾಜಕಾರಣ. ಡಿಕೆಶಿ, ಸಿದ್ದರಾಮಯ್ಯ ನವರಿಗೆ ಸ್ವಲ್ಪ ಜ್ಞಾನ ಕಡಿಮೆ ಅನ್ನಿಸುತ್ತೆ. ಸ್ವಾಮೀಜಿಗಳಿಗೆ ಒತ್ತಡ ಹಾಕಲು ಸಾಧ್ಯನಾ?. ನಿಜಕ್ಕೂ ಇದು ಅವಮಾನ ಮಾಡಿದಂಗೆ. ಕಾಂಗ್ರೆಸ್ ಸ್ವಾಮೀಜಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಎಲ್ಲಾ ಸ್ವಾಮೀಜಿಗಳು ಮೀಸಲಾತಿ ಒಪ್ಪಿದ್ದಾರೆ. ರಾಜ್ಯದಲ್ಲಿ ಎಲ್ಲಾ ಸಂತೋಷವಾಗಿದ್ದಾರೆ ಎಂದರು.

ಅವರಿಗೆ ಮುಸ್ಲಿಂ ಬಗ್ಗೆ ಅತೀ ಪ್ರೀತಿ ಇದೆ: ಕಾಂಗ್ರೆಸ್ ಅವರಿಗೆ ಮುಸ್ಲಿಂ ಬಗ್ಗೆ ಅತೀ ಪ್ರೀತಿ ಇದೆ. ಸಂವಿಧಾನ ತಿದ್ದುಪಡಿ ಮಾಡುವವರು ಇವರು ಯಾರದ್ದೋ ಕಿತ್ತು ಯಾರಿಗೋ ಕೊಟ್ರು ಅಂತ ಕೇಳೋದಿಕ್ಕೆ ನೀವ್ಯಾರು?. ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಮಾಡಲಿಲ್ಲ ಎಂದು ಕಿಡಿಕಾರಿದರು. ನಮ್ಮ ಸರ್ಕಾರ ಮಾಡಿತು ಅಂತ ಅವರಿಗೆ ಸಹಿಸೋದಕ್ಕೆ ಆಗ್ತಿಲ್ಲ. ಥಕ ಥಕ ಅಂತ ಕುಣಿತಾ ಇರೋದು ಕಾಂಗ್ರೆಸ್ ಅವರು ಮಾತ್ರ. ಹಸಿ ಮೆಣಸಿನಕಾಯಿ ಹೊಟ್ಟೆಯಲ್ಲಿ ಹಾಕಿದಂಗೆ ಆಗಿದೆ. ಕಾಡಿ ಬೇಡೋದು ಸಿದ್ದರಾಮಯ್ಯ, ಡಿಕೆಶಿ ಮಾತ್ರ. ಕಾಂಗ್ರೆಸ್​ನವರು ಈ ರಾಜ್ಯದಲ್ಲಿ ಭಿಕ್ಷುಕರು ಇದ್ದ ಹಾಗೆ‌. ಎಲ್ಲೂ ಕಾಂಗ್ರೆಸ್ ಇಲ್ಲ, ಭಿಕ್ಷುಕರು ಇದ್ದಂಗ ಅಷ್ಟೇ ಅವರು. ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್ ಎಂದು ವಾಗ್ದಾಳಿ ನಡೆಸಿದರು.

ಸುರ್ಜೇವಾಲ ಕ್ಷಮೆಯಾಚಿಸಬೇಕು: ಸಿಎಂ ಬೊಮ್ಮಾಯಿಗೆ ಶಕುನಿ ಎಂದು ಸುರ್ಜೇವಾಲ ಕರೆದ ವಿಚಾರವಾಗಿ ಮಾತನಾಡಿದ ಅವರು, ಇಡೀ ರಾಜ್ಯದ ಜನರಿಗೆ ಅವಮಾನ ಮಾಡಿದ್ದಾರೆ ಸುರ್ಜೇವಾಲ. ಸಿಎಂ ಸ್ಥಾನಕ್ಕೆ ಅವಮಾನ‌ ಮಾಡಿದ್ದಾರೆ. ಸುರ್ಜೇವಾಲ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇವತ್ತು ಕೋರ್ ಕಮಿಟಿ ಸಭೆ ಇದೆ. ಚುನಾವಣೆ ಉಸ್ತುವಾರಿ ಕುರಿತು ಚರ್ಚೆ ನಡೆಯಲಿದೆ. ಯಾವಾಗ ಅಭ್ಯರ್ಥಿ ಫೈನಲ್ ಮಾಡಬೇಕು ಎಂಬ ಚರ್ಚೆ ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಮೀಸಲಾತಿ ಪರಿಷ್ಕರಣೆ ಅಸಾಂವಿಧಾನಿಕ, ಕೂಡಲೇ ರಾಜ್ಯ ಸರ್ಕಾರ ವಜಾಗೊಳ್ಳಲಿ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.