ETV Bharat / state

'ಹೋಮ್ ಡೆಲಿವರಿ' ಉಚಿತ ಸಹಾಯವಾಣಿಗೆ ಚಾಲನೆ ನೀಡಿದ ಸಚಿವ ಆರ್ ಅಶೋಕ್..

ಬಿಬಿಎಂಪಿ ವತಿಯಿಂದ ಅಗತ್ಯ ವಸ್ತುಗಳ ಫ್ರೀ ಆನ್ಲೈನ್ ಡೆಲಿವರಿ ಸಹಾಯವಾಣಿಗೆ ಕಂದಾಯ ಸಚಿವ ಆರ್ ಅಶೋಕ್ ಇಂದು ಚಾಲನೆ ನೀಡಿದರು.

author img

By

Published : Apr 12, 2020, 5:07 PM IST

Home delivery
ಹೋಮ್ ಡೆಲಿವರಿ

ಬೆಂಗಳೂರು : ಬೆಂಗಳೂರು ದಕ್ಷಿಣ ವಲಯಕ್ಕೆ ಸೇರಿದ ಚಿಕ್ಕಪೇಟೆ, ಪದ್ಮನಾಭನಗರ, ಜಯನಗರ,ಬಸವನಗುಡಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಂದಿನಿಂದ ಬಿಬಿಎಂಪಿ ವತಿಯಿಂದ ಅಗತ್ಯ ವಸ್ತುಗಳ ಫ್ರೀಆನ್ಲೈನ್ ಡೆಲಿವರಿ ಸಹಾಯವಾಣಿಗೆ ಕಂದಾಯ ಸಚಿವ ಆರ್ ಅಶೋಕ್ ಚಾಲನೆ ನೀಡಿದರು.

'ಹೋಮ್ ಡೆಲಿವರಿ' ಉಚಿತ ಸಹಾಯವಾಣಿಗೆ ಚಾಲನೆ..

ಈ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್, ಉಪಮೇಯರ್ ರಾಮಮೋಹನ್, ಬೆಂಗಳೂರು ದಕ್ಷಿಣ ಡಿಸಿಪಿ ರೋಹಿಣಿ ಕಟೋಚ್ ಹಾಗೂ ಬೆಂಗಳೂರು ದಕ್ಷಿಣ ವಲಯ ಆಯುಕ್ತ ವೀರಭದ್ರಸ್ವಾಮಿ ಉಪಸ್ಥಿತರಿದ್ದರು. ಕೋವಿಡ್-19 ಸಂಬಂಧ ಅಗತ್ಯ ವಸ್ತುಗಳನ್ನು ಮನೆ ಮೆನೆಗೆ ತಲುಪಿಸುವ ಉದ್ದೇಶದಿಂದ ಈಗಾಗಲೇ ಪ್ರಾಯೋಗಿಕವಾಗಿ ಕತ್ರಿಗುಪ್ಪೆ ವಾರ್ಡ್‌ನಲ್ಲಿ 'ಹೋಮ್ ಡೆಲಿವರಿ' ಸಹಾಯವಾಣಿ ಆರಂಭಿಸಲಾಗಿದೆ.

ಇದೀಗ ಬೆಂಗಳೂರು ದಕ್ಷಿಣ ಲೊಕಸಭಾ ಕ್ಷೇತ್ರ ವ್ಯಾಪ್ತಿಯ ಬಸವನಗುಡಿ, ಜಯನಗರ, ಪದ್ಮನಾಭನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುತ್ತಿದೆ. ಇದೇ ವೇಳೆ ಮಾತನಾಡಿದ ಆರ್​.ಅಶೋಕ್​, ದೇಶದಲ್ಲಿರುವ ಲಾಕ್​ಡೌನ್​ ಕಾಟಾಚಾರಕ್ಕೆ ಆಗಬಾರದು. ಲಾಕ್‌ಡೌನ್ ವೇಳೆ ಜನ ಅನಗತ್ಯ ಮನೆಯಿಂದ ಹೊರ ಬರುತ್ತಿದ್ದಾರೆ. ಪೊಲೀಸರು ಅವರನ್ನು ತಡೆದರೆ ಅವರಿಂದ ಬರುವ ಉತ್ತರ ಅಂದರೆ ದಿನಸಿ ಪದಾರ್ಥಗಳನ್ನು ಪರ್ಚೇಸ್ ಮಾಡಲಿಕ್ಕೆ ಎಂದು ಸಬೂಬು ಹೇಳುತ್ತಾರೆ. ಇದರಿಂದ ಜನರಿಗೆ ಅಗತ್ಯ ದಿನ ಬಳಕೆಯ ಸಾಮಗ್ರಿಗಳು, ದಿನಸಿ, ತರಕಾರಿ, ಔಷಧ ಸಾಮಗ್ರಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೋಮ್ ಡೆಲಿವರಿ ಸೇವೆ ಇದಾಗಿದೆ. ಸಹಾಯವಾಣಿ ಸಂಖ್ಯೆ 080 61914960ಗೆ ಕರೆ ಮಾಡಿ ಅಗತ್ಯ ವಸ್ತುಗಳನ್ನು ಪಡೆಯಬಹುದಾಗಿದೆ ಎಂದರು.

ಈ ಭಾಗದಲ್ಲಿ 7.5 ಲಕ್ಷ ಜನಸಂಖ್ಯೆ, 2.5 ಲಕ್ಷ ಮನೆಗಳು ಹಾಗೂ ದಿನಸಿ ಅಂಗಡಿ, ತರಕಾರಿ ಮಳಿಗೆ, ಔಷಧಿ ಮಳಿಗೆ, ಮಾಂಸದಗಡಿಗಳು ಸೇರಿದಂತೆ ಒಟ್ಟು 1926 ಮಳಿಗೆಗಳನ್ನು ಮ್ಯಾಪಿಂಗ್ ಮಾಡಲಾಗಿದ್ದು, ಉಚಿತವಾಗಿ ಡಿಲಿವರಿ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಸ್ತುತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮಾತ್ರ ಈ ಸೇವೆ ಇರಲಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದರು.

ಇನ್ನು ಈ ಸೇವೆಗೆ ಡಂಜೋ ಮತ್ತು ರ್ಯಾಪಿಡೋ ಜೊಮಾಟೋ ಸಂಸ್ಥೆ ಸೇವೆ‌ ನೀಡಲಿವೆ. ಇದನ್ನು ಮುಂದಿನ ದಿನಗಳಲ್ಲಿ ಬೆಂಗಳೂರು ಪೂರ್ತಿವಿಸ್ತರಿಸಲಾಗುವುದು. ಅಲ್ಲದೆ ಇದು ಉಚಿತ ಡೆಲಿವರಿಯಾಗಿದ್ದು ಜನರಿಗೆ ಇಷ್ಟವಾದ ವಸ್ತುಗಳಿಗೆ ಹಣಕೊಟ್ಟು ಅರ್ಡರ್ ಮಾಡಿದ್ರೆ. ಅರ್ಡರ್ ಮಾಡಿದ 24 ಗಂಟೆಗಳ ಒಳಗೆ ವಸ್ತುಗಳು ಮನೆ ಸೇರಲಿವೆ. ಇನ್ನು ಈ ಸೇವೆಗೆ ಸದ್ಯ 480 ಸ್ವಯಂ ಸೇವಕರು ಕೆಲಸ ಮಾಡಲಿದ್ದು, ಸ್ಥಳೀಯ ದಿನಸಿ ಅಂಗಡಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.