ETV Bharat / state

ಆರ್ ​ಆರ್ ​ನಗರದಲ್ಲಿ ನಮಗೆ ಅಷ್ಟೊಂದು ಲೀಡ್ ಬರಲು ಸಿದ್ದರಾಮಯ್ಯ ಕಾರಣ: ಆರ್​. ಅಶೋಕ್​

ಅಖಂಡ ಶ್ರೀನಿವಾಸ್ ಮೂರ್ತಿ ಪರಿಸ್ಥಿತಿ ನೋಡಿದರೆ ನನಗೆ ಮರುಕ ಉಂಟಾಗುತ್ತದೆ. ಅಖಂಡ ಮಾತು ಕೇಳಿ ನನಗೆ ನೋವಾಗಿದೆ. ಕಾಂಗ್ರೆಸ್ ಪಕ್ಷ ಮನೆಯೊಂದು ಎರಡು ಬಾಗಿಲು ಆಗಿದೆ ಎಂದು ಆರ್​ ಅಶೋಕ್ ಹೇಳಿದ್ದಾರೆ. ಅಲ್ಲದೆ, ಆರ್​ ಆರ್​ ಉಪಚುನಾವಣೆಯಲ್ಲಿ ನಮಗೆ ಅಷ್ಟೊಂದು ಲೀಡ್​ ಬರಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ ಎಂದಿದ್ದಾರೆ.

R Ashok Statement in Vidhansouda
ವಿಧಾನಸೌಧದಲ್ಲಿ ಆರ್ ಅಶೋಕ್​​ ಹೇಳಿಕೆ
author img

By

Published : Nov 12, 2020, 12:29 PM IST

Updated : Nov 12, 2020, 12:46 PM IST

ಬೆಂಗಳೂರು: ಆರ್​​​ ಆರ್ ನಗರ ಉಪ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಲೀಡ್ ಬರಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕಿತ್ತು ಎಂದು ಡಿ.ಕೆ. ಶಿವಕುಮಾರ್ ಪ್ಲಾನ್ ಮಾಡಿದ್ದರು. ಅದೇ ರೀತಿ ಆರ್​ಆರ್ ನಗರದಲ್ಲಿ ಕುಸುಮಾ ಸೋಲಬೇಕೆಂದು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು ಎಂದು ಆರೋಪಿಸಿದರು.

ವಿಧಾನಸೌಧದಲ್ಲಿ ಆರ್ ಅಶೋಕ್​​ ಹೇಳಿಕೆ

ಅಖಂಡ ಶ್ರೀನಿವಾಸ್ ಮೂರ್ತಿ ಪರಿಸ್ಥಿತಿ ನೋಡಿದರೆ ನನಗೆ ಮರುಕ ಉಂಟಾಗುತ್ತದೆ. ಅಖಂಡರನ್ನು ಕೊಲೆ ಮಾಡೋದಕ್ಕೆ ಹೋದವರು. ಅಖಂಡ ಮನೆಗೆ ಬೆಂಕಿ ಹಾಕಿದ್ದರು. ಬೆಂಗಳೂರಿಗೆ ಡಿ.ಜೆ. ಹಳ್ಳಿ ಪ್ರಕರಣ ಕಪ್ಪು ಚುಕ್ಕೆ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪು ಇವೆ. ಸಿದ್ದರಾಮಯ್ಯ ಬಣದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಇದ್ದಾರೆ. ಡಿ.ಕೆ‌. ಶಿವಕುಮಾರ್ ಅವರು ಸಂಪತ್ ರಾಜ್ ಬಣದಲ್ಲಿದ್ದಾರೆ. ಹೀಗಾಗಿ ಅಖಂಡ ಶ್ರೀನಿವಾಸ್ ಮೂರ್ತಿಗೆ ರಕ್ಷಣೆ ಕೊಡುತ್ತಿಲ್ಲ ಎಂದು ಟೀಕಿಸಿದರು.

ಅಖಂಡ ಮಾತು ಕೇಳಿ ನನಗೆ ನೋವಾಗಿದೆ. ಕಾಂಗ್ರೆಸ್ ಪಕ್ಷ ಮನೆಯೊಂದು ಎರಡು ಬಾಗಿಲು ಆಗಿದೆ. ಅಖಂಡ ಶ್ರೀನಿವಾಸ್ ಮೂರ್ತಿಗೆ ಸರ್ಕಾರದಿಂದ ಎಲ್ಲ ಸಹಕಾರ ನೀಡುತ್ತೇವೆ ಎಂದು ಸಚಿವ ಅಶೋಕ್​ ಭರವಸೆ ನೀಡಿದರು.

Last Updated : Nov 12, 2020, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.