ಬೆಂಗಳೂರು: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳು ಕುರ್ಚಿಗಾಗಿ ಕಿತ್ತಾಡುವುದು ಸಾಮಾನ್ಯ. ಆದರೀಗ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಹುದ್ದೆಗೆ ಅಧಿಕಾರಿಗಳ ನಡುವೆ ಸಂಘರ್ಷ ಆರಂಭವಾಗಿದೆ.
ಉತ್ತರ ವಿಭಾಗದ ಜಂಟಿ ನಿರ್ದೇಶಕ ಹುದ್ದೆಗೆ ಬಿ.ಮಂಜೇಶ್ ಹಾಗೂ ವೆಂಕಟ ದುರ್ಗಾಪ್ರಸಾದ್ ಎಂಬ ಇಬ್ಬರು ಅಧಿಕಾರಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಕೋರ್ಟ್ ಆದೇಶ ಇಲ್ಲದಿದ್ರೂ ಸ್ಟೇ ಇದ್ದರೂ ದುರ್ಗಾಪ್ರಸಾದ್ ಎಂಬುವವರು ಅಧಿಕಾರಕ್ಕೆ ಬಂದಿದ್ದಾರೆ. ಈವರೆಗೆ ಅಧಿಕಾರದಲ್ಲಿದ್ದ ಮಂಜೇಶ್ ಜಾಗಕ್ಕೆ ದುರ್ಗಾಪ್ರಸಾದ್ ಏಕಾಏಕಿಯಾಗಿ ಬಂದು ಕುಳಿತಿದ್ದಾರೆ. ಕಾನೂನುಬದ್ಧವಾಗಿ ಹುದ್ದೆ ಅಲಂಕರಿಸಿರುವುದಾಗಿ ದುರ್ಗಾ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಆದರೆ ಅಧಿಕಾರ ಸ್ವೀಕರಿಸಲು ಸರ್ಕಾರದಿಂದ ಇನ್ನೂ ಆದೇಶವಾಗಿಲ್ಲ ಎಂದು ಮಂಜೇಶ್ ವಾದಿಸುತ್ತಿದ್ದಾರೆ.
ಈವರೆಗೆ ಜೆಡಿ ಹುದ್ದೆಯಲ್ಲಿದ್ದ ಮಂಜೇಶ್ ಊಟಕ್ಕೆ ಹೋದ ಸಮಯದಲ್ಲಿ ವೆಂಕಟ ದುರ್ಗಾ ಪ್ರಸಾದ್ ಏಕಾಏಕಿ ಚೇರ್ನಲ್ಲಿ ಬಂದು ಕುಳಿತು ನನ್ನ ಕರ್ತವ್ಯ ಇಲ್ಲೇ, ಏನೇ ಇದ್ದರೂ ಆಯುಕ್ತರನ್ನೇ ಕೇಳಿ ಎಂದು ಹೇಳುತ್ತಿದ್ದಾರೆ. ಇದು ಆಡಳಿತಾತ್ಮಕ ವಿಚಾರವಾಗಿರುವುದರಿಂದ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಅಧಿಕಾರಿ ವೆಂಕಟ ದುರ್ಗಾಪ್ರಸಾದ್ ಹಿನ್ನೆಲೆ:
ದುರ್ಗಾ ಪ್ರಸಾದ್ ಅವರು ನಗರ ಯೋಜನೆಯ ಜಂಟಿ ಆಯುಕ್ತ ಹುದ್ದೆಯ ಸ್ಕ್ವಾಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಕೆಎಟಿಯ ಅದೇಶದ ಮೇರೆಗೆ ನಗರ ಯೋಜನೆ ಉತ್ತರ ವಿಭಾಗಕ್ಕೆ ವರ್ಗಾವಣೆ ಆಗಿದ್ದರು. ಈ ಸಂಬಂಧ ಕೆಎಟಿ ಆದೇಶ ಪ್ರಶ್ನಿಸಿ ಬಿಬಿಎಂಪಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದರ ವಿಚಾರಣೆ ಆಗಸ್ಟ್ 9ರಂದು ನಡೆಯಲಿದೆ.
ಇದನ್ನೂ ಓದಿ: ಚೆಂಡು ಉಮಾಪತಿ ಅಂಗಳದಲ್ಲಿದೆ, ಗೋಲು ಹೊಡೆಯುವುದು ಅವರಿಗೆ ಬಿಟ್ಟಿದ್ದು: 25 ಕೋಟಿ ವಂಚನೆ ಕೇಸ್ಗೆ ದಚ್ಚು ಕಿಡಿ
ಹಾಲಿ ಇದ್ದ ಮಂಜೇಶ್ ಅವರು ದಕ್ಷಿಣ ವಿಭಾಗಕ್ಕೆ ವರ್ಗಾವಣೆಯಾಗಿದ್ದರು. ನಗರ ಯೋಜನೆಯ ದಕ್ಷಿಣ ವಿಭಾಗದಲ್ಲಿದ್ದ ರಾಘವೇಂದ್ರ ಪ್ರಸಾದ್ ಕೋರ್ಟ್ನಿಂದ ಸ್ಟೇ ತಂದಿದ್ದರು. ಇದೀಗ ಏಕಾಏಕಿ ನಗರ ಯೋಜನೆ ಉತ್ತರ ವಿಭಾಗಕ್ಕೆ ಬಂದು ಕುಳಿತಿದ್ದಾರೆ.