ETV Bharat / state

ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಕಡ್ಡಾಯ : ಸಚಿವ ಆರ್​. ಅಶೋಕ್

author img

By

Published : Aug 30, 2021, 8:37 PM IST

ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಆ ದೃಷ್ಟಿಯಿಂದ ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ವಾರ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಕ್ವಾರಂಟೈನ್ ಮುಗಿಸಿದವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತದೆ. ಈ ಎರಡು ಷರತ್ತುಗಳೊಂದಿಗೆ ಕೇರಳ ವಿದ್ಯಾರ್ಥಿಗಳು ರಾಜ್ಯಕ್ಕೆ ಬರಬಹುದಾಗಿದೆ..

quarantine-is-compulsory-for-students-from-kerala
ಆರ್ ಅಶೋಕ್​

ಬೆಂಗಳೂರು : ನೆರೆ ರಾಜ್ಯದಿಂದ ಕೊರೊನಾ ಹಾವಳಿ ಹೆಚ್ಚಾಗುವ ಆತಂಕ ಎದುರಾದ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ಹಾಗು ಕ್ವಾರಂಟೈನ್ ಮುಗಿದ ನಂತರ ಕೋವಿಡ್ ತಪಾಸಣೆ ಕಡ್ಡಾಯಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಂತರ ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್, ಮೂರನೇ ಅಲೆಯ ಭೀತಿ ಇರುವುದರಿಂದ ಕೋವಿಡ್ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ನೀತಿ-ನಿಯಮಗಳು ಹೇಗಿರಬೇಕು ಎನ್ನುವ ಕುರಿತು ಒಂದು ತೀರ್ಮಾನ ಕೈಗೊಂಡಿದ್ದೇವೆ.

ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಆ ದೃಷ್ಟಿಯಿಂದ ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ವಾರ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ.

ಕ್ವಾರಂಟೈನ್ ಮುಗಿಸಿದವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತದೆ. ಈ ಎರಡು ಷರತ್ತುಗಳೊಂದಿಗೆ ಕೇರಳ ವಿದ್ಯಾರ್ಥಿಗಳು ರಾಜ್ಯಕ್ಕೆ ಬರಬಹುದಾಗಿದೆ. ಇಂದೇ ಆದೇಶ ಹೊರಡಿಸುತ್ತೇವೆ ಎಂದರು.

ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಕಡ್ಡಾಯ..

ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಕೋಲಾರ, ಕಲಬುರ್ಗಿಯಲ್ಲಿ ಶೇ.1.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಕಾರಣ ಈಗಾಗಲೇ ಇರುವ ಕಠಿಣ ನಿರ್ಬಂಧ ಸಡಿಲ ಮಾಡಲು ನಿರ್ಧಾರ ಮಾಡಲಾಗಿದೆ. ಉಳಿದಂತೆ ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಕಠಿಣ ನಿರ್ಬಂಧ ಹಾಗೆಯೇ ಮುಂದುವರೆಯಲಿದೆ. ಅದೇ ರೀತಿ ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಅನ್ನು ಸಡಿಲಿಕೆ ಮಾಡಲಾಗುತ್ತದೆ.

ಕೇರಳದಲ್ಲಿ ಪಾಸಿಟಿವಿಟಿ ದರ ಶೇ.19ಕ್ಕೆ ಏರಿದೆ. ಪ್ರತಿ ದಿನ 30000 ಕೇಸು ದಾಖಲಾಗುತ್ತಿವೆ. ಹಾಗಾಗಿ, ಗಡಿ ಜಿಲ್ಲೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಇರುವ ಎಲ್ಲಾ ನಿರ್ಬಂಧ ಮುಂದುವರಿಯಲಿದೆ. ಕೇರಳದಿಂದ ಈ ಎರಡು ಜಿಲ್ಲೆಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿರುವ ಕಾರಣ, ಕೇರಳದಿಂದ ಕರ್ನಾಟಕಕ್ಕೆ ಕೊರೊನಾ ಸೋಂಕು ತ್ವರಿತವಾಗಿ ಹರಡುವುದನ್ನು ತಡೆಯುವ ಕಾರಣಕ್ಕಾಗಿ ನಿರ್ಬಂಧಗಳನ್ನು ಮುಂದುವರಿಸಲಾಗುತ್ತಿದೆ ಎಂದರು.

ನೈಟ್ ಕರ್ಫ್ಯೂ : ರಾಜ್ಯಾದ್ಯಂತ ಇರುವ ನೈಟ್ ಕರ್ಫ್ಯೂ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರಾತ್ರಿ 9ರಿಂದ ಇರುವ ರಾತ್ರಿ ಕರ್ಫ್ಯೂ ಮುಂದುವರೆಯಲಿದೆ. ಈ ಬಗ್ಗೆ ತಜ್ಞರ ಸಮಿತಿ ನೀಡುವ ಸಲಹೆಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಅದರ ಪರಿಷ್ಕರಣೆ ಮಾಡುವ ಯೋಚನೆ ಮಾಡಲಾಗುತ್ತದೆ ಎಂದರು.

ಕಲ್ಯಾಣ ಮಂಟಪಗಳಿಗೆ ನಿರ್ಬಂಧ ಸಡಿಲಿಕೆ : ಮದುವೆ ಸಮಾರಂಭಗಳಿಗೆ ಸಂಬಂಧಪಟ್ಟಂತೆ ಕಲ್ಯಾಣ ಮಂಟಪದ ಮಾಲೀಕರು ಸಾಕಷ್ಟು ಮನವಿ ಮಾಡಿದ್ದರು. ಅಹವಾಲುಗಳನ್ನು ಹೇಳಿಕೊಂಡಿದ್ದರು. ಅವರ ಕಷ್ಟಗಳನ್ನೂ ದೃಷ್ಟಿಯಲ್ಲಿರಿಸಿಕೊಂಡು ಒಂದಷ್ಟು ರಿಯಾಯಿತಿಗಳನ್ನು ಅವರಿಗೆ ಕಲ್ಪಿಸಲಾಗುತ್ತಿದೆ‌. ಸಿನಿಮಾ ಮಂದಿರಗಳಿಗೆ ಶೇ. 50ರ ಆಸನ ಭರ್ತಿಗೆ ಅವಕಾಶ ಕಲ್ಪಿಸಿದಂತೆ ಕಲ್ಯಾಣಮಂಟಪಗಳಿಗೂ ನಿರ್ಬಂಧ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.

ಸಣ್ಣಪುಟ್ಟ ಕಲ್ಯಾಣ ಮಂಟಪಗಳಿಂದ ಹಿಡಿದು ದೊಡ್ಡ ದೊಡ್ಡ ಕಲ್ಯಾಣ ಮಂಟಪಗಳಿಗೆ ಇದು ಅನ್ವಯ ಅಗಲಿದೆ. ಆದರೆ, ಗರಿಷ್ಠ 400 ಜನರ ಮಿತಿಯೊಂದಿಗೆ ಶೇ.50ರ ಆಸನ ಭರ್ತಿ ವ್ಯವಸ್ಥೆಯೊಂದಿಗೆ ಮದುವೆ ಸಮಾರಂಭ ನಡೆಸಲು ನಿರ್ಬಂಧ ಸಡಿಲಿಕೆ ಮಾಡಲಾಗಿದೆ ಎಂದು ಆರ್ ಅಶೋಕ್ ತಿಳಿಸಿದರು.

ಮೂರನೇ ಅಲೆ ಮಾಹಿತಿ ಬಂದಿಲ್ಲ : ಮೂರನೇ ಅಲೆ ಬಂದಿರುವ ಬಗ್ಗೆ ನಿಖರ ಮಾಹಿತಿ ನಮಗೆ ಈವರೆಗೂ ಬಂದಿಲ್ಲ. ಕೇಂದ್ರ ಸರ್ಕಾರವು ನಮಗೆ ಈ ಬಗ್ಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯ ಕೊರೊನಾ ನಿಯಂತ್ರಣ ಮಾಡುವ ದೃಷ್ಟಿಯಲ್ಲಿ ಸಾಕಷ್ಟು ಮುಂದಿದೆ. ಕೇರಳ ಹಾಗೂ ಮಹಾರಾಷ್ಟ್ರ ರೀತಿ ನಮ್ಮಲ್ಲಿ ಮತ್ತೆ ಕೊರೊನಾ ಹರಡಬಾರದು.

ಹಾಗಾಗಿ, ಈಗಾಗಲೇ ಕೊರೊನಾ ನಿಯಂತ್ರಣದಲ್ಲಿ ದೇಶದಲ್ಲಿ ಒಳ್ಳೆಯ ಹೆಸರನ್ನು ನಾವು ಪಡೆದಿದ್ದೇವೆ. ಅದನ್ನು ಕಾಪಾಡಿಕೊಂಡು ಹೋಗುವ ಕುರಿತು ಇಂದು ಚರ್ಚೆಯಾಯಿತು. ಮೂರನೆಯ ಅಲೆ ಬಗ್ಗೆಯೂ ಚರ್ಚೆಯಾಯಿತು‌. ಒಂದು ವೇಳೆ ಮೂರನೇ ಅಲೆ ಎದುರಾದಲ್ಲಿ ಅದನ್ನು ಹೇಗೆ ನಿಯಂತ್ರಣ ಮಾಡಬೇಕು ಎನ್ನುವ ಕುರಿತು ಚರ್ಚೆ ಮಾಡಿದ್ದೇವೆ ಎಂದರು.

ಮಾಸ್ ಲಸಿಕೆ : ಕೊರೊನಾ ಲಸಿಕೆ ವಿಚಾರದಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ. ಮಾಸ್ ರೀತಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಲಸಿಕೆ ನೀಡುವ ಯೋಜನೆ ಹಾಕಿಕೊಳ್ಳಲು ನಿರ್ಧರಿಸಲಾಗಿದೆ. 5 ಸಾವಿರ, 10 ಸಾವಿರ ಲಸಿಕೆ ಕೊಡಬೇಕು ಎನ್ನುವ ಯೋಚನೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ನಮಗೆ ಅಗತ್ಯ ಪ್ರಮಾಣದ ಲಸಿಕೆ ನೀಡಲು ಒಪ್ಪಿಕೊಂಡಿದೆ. ಹಾಗಾಗಿ, ನಾವು ಲಸಿಕೆ ನೀಡುವುದನ್ನ ವೇಗಗೊಳಿಸಲು ನಿರ್ಧರಿಸಿದ್ದೇವೆ ಎಂದರು.

ಸಂಕಷ್ಟ ಮುಗಿದಿದೆ : ಸಂಕಷ್ಟ ಮೊನ್ನೆ ಮುಗಿದಿದೆ. ಸಂಕಷ್ಟಹರ ಗಣಪತಿ ಬಂದ ಮೇಲೆ ನಮಗೆಲ್ಲ ಒಳ್ಳೆಯದಾಗಿದೆ. ಹಾಗಾಗಿ, ಗಣಪತಿ ಹಬ್ಬಕ್ಕೆ ಎಲ್ಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ನಾನು ಭಾವಿಸಿದ್ದೇನೆ ಎಂದು ಹೊಸ ಸರ್ಕಾರ ರಚನೆಯಾದ ಬಗೆಗೆ ಸಚಿವ ಅಶೋಕ್ ಪರೋಕ್ಷವಾಗಿ ಮಾತನಾಡಿದರು.

ತಪ್ಪು ಪ್ರಶ್ನೆಯನ್ನು ಕೇಳಿದ್ದಿರಾ..? : ಜನಾಶೀರ್ವಾದ ಯಾತ್ರೆಗೆ ಇಲ್ಲದ ನಿರ್ಬಂಧ ಗಣಪತಿ ಹಬ್ಬದ ಬಗೆಗೆ ಯಾಕೆ ಎನ್ನುವ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಸಚಿವ ಅಶೋಕ್, ನನಗೆ ತಪ್ಪು ಪ್ರಶ್ನೆಯನ್ನು ಕೇಳಿದ್ದೀರಾ? ನೀವು ಕೇಳಿರುವ ಪ್ರಶ್ನೆಯ ಪರವಾಗಿಯೇ ನಾನಿದ್ದೇನೆ.

ಗಣಪತಿ ಹಬ್ಬದ ಬಗ್ಗೆ ನಮಗೆ ಬದ್ಧತೆಯಿದೆ. ಗಣೇಶ ಹಬ್ಬದ ಆಚರಣೆಗೆ ಕೊರೊನಾವನ್ನು ಗಮನದಲ್ಲಿರಿಸಿಕೊಂಡು, ಕೇರಳವನ್ನು ಗಮನದಲ್ಲಿರಿಸಿಕೊಂಡು ಯಾವ ರೀತಿ ಅನುಮತಿ ಕೊಡಬಹುದು ಎಂದು ಧನಾತ್ಮಕವಾಗಿ ನಾವು ಯೋಚನೆ ಮಾಡುತ್ತಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.