ಪ್ರತಿಯೊಬ್ಬರಿಗೂ ಶುದ್ಧ ನೀರು ಒದಗಿಸೋದು ಇಂದಿನ ಸವಾಲು. ಎಲ್ಲಿಯೇ ಆಗಲಿ ನೀರು ಸಂಸ್ಕರಣಾ ಘಟಕಗಳಿಂದ ಬಂದ ನೀರನ್ನೇ ಶುದ್ಧ ಅಂತ ನಾವು ಭಾವಿಸಿಕೊಳ್ಳುತ್ತೇವೆ. ಇಂತಹ ನೀರು ಶುದ್ದೀಕರಣ ಘಟಕಗಳನ್ನು ಪರಿಶೀಲನೆ ಮಾಡೋಕೆ ಅಂತಾನ ಪಾಲಿಕೆ ವ್ಯಾಪ್ತಿಯಲ್ಲಿ ಒಂದ್ ತಂಡ ಇರುತ್ತದೆ. ಈ ತಂಡ ಆಗಾಗ ನೀರು ಶುದ್ದೀಕರಣ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ.
ನೀರು ಸಂಸ್ಕರಣಾ ಘಟಕಗಳನ್ನು ಆರಂಭಿಸೋದಕ್ಕೂ ಕೂಡಾ ನಿಯಮಗಳಿವೆ. ಮೊದಲಿಗೆ ನೀರು ಸಂಸ್ಕರಣಾ ಘಟಕಗಳಿಗೆ ಲೈಸೆನ್ಸ್ ತೆಗೆದುಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಅನುಮತಿಯೂ ಇರ್ಬೇಕು. ಆಗಾಗ ಆರೋಗ್ಯಾಧಿಕಾರಿಗಳ ಬಳಿಗೆ ನೀರಿನ ಸ್ಯಾಂಪಲ್ ಕಳುಹಿಸಿ ತಪಾಸಣೆ ಮಾಡಿಸಬೇಕು. ಮೈಸೂರಿನಲ್ಲಿ ಕನಿಷ್ಠ 10 ನೀರು ಸಂಸ್ಕರಣಾ ಘಟಕಗಳಿದ್ದು, ಅವುಗಳ ಪರಿಶೀಲನೆ ನಿರಂತರವಾಗಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಈಗ ಎರಡು ಪ್ರತ್ಯೇಕ ನೀರಿನ ಪ್ರಯೋಗಾಲಯಗಳನ್ನ ಸ್ಥಾಪನೆ ಮಾಡಲಾಗಿದೆ. ಬೆಳಗಾವಿಗೆ ರಕ್ಕಸಕೊಪ್ಪ ಜಲಾಶಯ ಹಾಗೂ ಹಿಡಕಲ್ ಜಲಾಶಯಗಳಿಂದ ನೀರು ಪೂರೈಸಲಾಗ್ತಿದೆ. ಎರಡು ಕಡೆ ಈ ನೀರನ್ನು ಕೆಮಿಕಲ್, ಬಯೋಲಾಜಿಕಲ್, ಪಿಸಿಕಲ್ ಟೆಸ್ಟ್ ಮಾಡಿ, ಕ್ಲೋರಿನ್ ಸೇರಿಸಿ ಸಾರ್ವಜನಿಕರಿಗೆ ಎರಡು ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತದೆ.
ಕಳೆದ ಐದು ವರ್ಷಗಳಿಂದ 10 ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ನಿರಂತರ ಕುಡಿವ ನೀರು ಯೋಜನೆ ಜಾರಿಯಲ್ಲಿದ್ದು, ಮುಂದಿನ ದಿನಗಳ್ಲಿ ಎಲ್ಲ ವಾರ್ಡ್ಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತದೆ . ವಿಶ್ವಬ್ಯಾಂಕ್ ಕೂಡಾ ಈ ಯೋಜನೆಗೆ ಸಾಥ್ ನೀಡಿದೆ ಎಂದು ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಮಾಹಿತಿ ನೀಡಿದ್ದಾರೆ.
ಕೆಲವೊಮ್ಮೆ ಶುದ್ಧ ನೀರಿನ ಹೆಸರಲ್ಲಿ ಅನಾರೋಗ್ಯಕರ ನೀರೇ ನಮ್ಮ ದೇಹ ಸೇರುತ್ತದೆ. ಇದನ್ನೂ ತಪ್ಪಿಸಲು ಕೂಡಾ ಅನೇಕ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ನೀರು ಸಂಸ್ಕರಣಾ ಘಟಕಗಳನ್ನು ಗ್ರಾಮಗಳಲ್ಲೂ ಕೂಡಾ ಜಾರಿಗೆ ತಂದಿದ್ದು, ಬಹುತೇಕ ಕಡೆಗಳಲ್ಲಿ ಇದು ಸಾಫಲ್ಯ ಕಂಡಿದೆ.