ETV Bharat / state

ಮಂಗಳೂರಿನಿಂದ-ಬೆಂಗಳೂರಿಗೆ ಪ್ರಯಾಣಿಕರೊಂದಿಗೆ ಬಸ್​​ನಲ್ಲಿ ಬಂದ ಹೆಬ್ಬಾವು! - ಮಂಗಳೂರು-ಬೆಂಗಳೂರು ಬಸ್​

ದೇಶಾದ್ಯಂತ ಲಾಕ್​ಡೌನ್​ ಹೇರಿಕೆ ಮಾಡಿದ್ದ ಕಾರಣ ಬರೋಬ್ಬರಿ ಎರಡು ತಿಂಗಳ ಕಾಲ ಬಸ್​ಗಳು ನಿಂತಲ್ಲೇ ನಿಂತಿದ್ದು, ಇದೀಗ ಆರಂಭಗೊಂಡಿವೆ.

python found under KSRTC bus in Bangaluru

author img

By

Published : Jun 3, 2020, 1:45 AM IST

Updated : Jun 3, 2020, 6:59 AM IST

ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳ ನಡುವೆ ಬಸ್​ ಸಂಚಾರ ಆರಂಭಗೊಂಡಿದ್ದು, ಇದೀಗ ನಡೆದಿರುವ ಘಟನೆವೊಂದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ. ನಗರದ ಹೃದಯಭಾಗ ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ದಿಢೀರನೇ ಹೆಬ್ಬಾವು ಕಾಣಿಸಿಕೊಂಡಿದೆ.

ಪ್ರಯಾಣಿಕರೊಂದಿಗೆ ಬಸ್​​ನಲ್ಲಿ ಬಂದ ಹೆಬ್ಬಾವು

ಲಾಕ್​ಡೌನ್ ವೇಳೆ ಕಳೆದ ಕೆಲ ತಿಂಗಳಿಂದ ಬಸ್​​ ನಿಂತಲ್ಲೇ ನಿಂತಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಬಂದ ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಪ್ರಯಾಣಿಕರ ಜೊತೆ ಈ ಹೆಬ್ಬಾವು ಪ್ರಯಾಣಿಸಿದೆ.

ಟ್ರಿಪ್ ಬಳಿಕ ಸ್ಯಾನಿಟೈಸ್ ಮಾಡಲು ಸೋಂಕು ನಿವಾರಕ ಔಷಧಿ ಬಸ್​ಗೆ ಹೊಡೆದಾಗ ಹೆಬ್ಬಾವು ಹೊರ ಬಂದಿದ್ದು, ಬಸ್ ಸಿಬ್ಬಂದಿಗಳಿಗೆ ದಿಗಿಲು ಮೂಡಿಸಿದೆ. ಕೂಡಲೇ ಪಾಲಿಕೆ ಅರಣ್ಯ ವಿಭಾಗದ ವನ್ಯ ಜೀವಿ ಸಂರಕ್ಷಕರಿಗೆ ರಾತ್ರಿ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ರಾಜೇಶ್, ಹಾವನ್ನು ರಕ್ಷಣೆ ಮಾಡಿದ್ದಾರೆ.

python found under KSRTC bus in Bangaluru
ಬಸ್​​ನಲ್ಲಿ ಬಂದ ಹೆಬ್ಬಾವು

ಇಂಡಿಯನ್ ರಾಕ್ ಪೈಥಾನ್ ಜಾತಿಯ ಹೆಬ್ಬಾವು ಇದಾಗಿದ್ದು, ಮಂಗಳೂರಿನ ಭಾಗದಿಂದ ಬಂದಿದೆ ಎಂದು ತಿಳಿಸಿದ್ದಾರೆ. ಬಸ್​ ಮೀಟರ್ ಜಾಗದಲ್ಲಿ ಸುತ್ತಿಕೊಂಡಿದ್ದು, ಸ್ಪ್ರೇ ಮಾಡಿದಾಗ ಅದು ಹೊರಗೆ ಬಂದಿದೆ. ಮತ್ತೆ ಇದನ್ನು ಸುರಕ್ಷಿತವಾಗಿ ಮಂಗಳೂರಿಗೆ ತಲುಪಿಸಲು ನಿರ್ಧರಿಸಲಾಗಿದ್ದು, ಬಾಕ್ಸ್ ವ್ಯವಸ್ಥೆ ಮಾಡಿ, ಏನೂ ಹಾನಿಯಾಗದಂತೆ ಕಾಡಿಗೆ ಮರಳಿ​ ಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Last Updated : Jun 3, 2020, 6:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.