ETV Bharat / state

ಕೊನೆಗೂ ಪಟ್ಟು ಬಿಡದೆ ಅಪ್ಪು ಸಮಾಧಿ ಬಳಿಯ ದೇವಸ್ಥಾನದಲ್ಲಿ ಸಪ್ತಪದಿ ತುಳಿದ ಅಭಿಮಾನಿ ಜೋಡಿ - ಅಪ್ಪು ಸಮಾಧಿ ಬಳಿ ವಿವಾಹವಾಗಲು ಬಂದ ಬಳ್ಳಾರಿ ಜೋಡಿ

ಅಪ್ಪು ಸಮಾಧಿ ಬಳಿಯೇ ಮದುವೆಯಾಗಬೇಕೆಂದು ಬಳ್ಳಾರಿಯಿಂದ ಬಂದಿದ್ದ ಪ್ರೇಮಿಗಳು, ಪೊಲೀಸರು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊನೆಗೂ ಕಂಠೀರವ ಸ್ಟುಡಿಯೋ ಬಳಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ.

Puneeth rajkumar fans got marriage
ಅಪ್ಪು ಸಮಾಧಿಯ ಬಳಿಯ ದೇವಸ್ಥಾನದಲ್ಲಿ ಪುನೀತ್​ ಅಭಿಮಾನಿಗಳ ವಿವಾಹ
author img

By

Published : Nov 6, 2021, 10:54 PM IST

ಬೆಂಗಳೂರು: ಕಂಠೀರವ ಸ್ಟುಡಿಯೋ ಬಳಿಯ ದೇವಸ್ಥಾನವೊಂದರಲ್ಲಿ ಮದುವೆಯಾದ ಅಪ್ಪು ಅಭಿಮಾನಿ ಜೋಡಿ ನಾಳೆ ಅಪ್ಪು ಸಮಾಧಿ ಬಳಿ ಗೌರವ ಸೂಚಿಸಲು ಇಚ್ಛಿಸಿದ್ದಾರೆ. ಬಳ್ಳಾರಿಯ ಗುರುರಾಜ್ ಮತ್ತು ಗಂಗಾ ಮಧ್ಯಾಹ್ನ ಸಮಾಧಿಯ ಬಳಿ ಮದುವೆ ಮಾಡಿಕೊಳ್ಳಲು ಇಚ್ಛಿಸಿದಾಗ ಪೊಲೀಸರು ನಿರಾಕರಿಸಿದ್ದರು.

ಅಪ್ಪು ಸಮಾಧಿಯ ಬಳಿಯ ದೇವಸ್ಥಾನದಲ್ಲಿ ಪುನೀತ್​ ಅಭಿಮಾನಿಗಳ ವಿವಾಹ

ಈ ಬಗ್ಗೆ ಶಿವಣ್ಣ ಮತ್ತು ರಾಘವೇಂದ್ರ ರಾಜ್ ಕುಮಾರ್ ಜೊತೆ ಮಾತುಕತೆ ಕೂಡ ನಡೆಸಿದ್ದರು. ಆದರೆ ಅಪ್ಪು ಸಮಾಧಿ ಬಳಿ ಮದುವೆಯಾಗಲು ರಾಜ್ ಫ್ಯಾಮಿಲಿಯಿಂದ ಕೂಡ ಒಪ್ಪಿಗೆ ಸಿಕ್ಕಿರಲಿಲ್ಲ. ಹೀಗಾಗಿ ಕಂಠೀರವ ಸ್ಟುಡಿಯೋ ಬಳಿಯೇ ಇರುವ ಆಂಜನೇಯ ದೇವಸ್ಥಾನದಲ್ಲಿ ಈ ಪ್ರೇಮಿಗಳು ಸಪ್ತಪದಿಯನ್ನು ತುಳಿದಿದ್ದಾರೆ. ಗೆಳೆಯರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

Puneeth rajkumar fans got marriage
ಮದುವೆಯಾದ ಗುರುರಾಜ್ ಮತ್ತು ಗಂಗಾ

ನಾಳೆ (ಭಾನುವಾರ) ಶಿವಣ್ಣನ‌ ಮನೆಗೆ ಹೋಗಿ ಆಶೀರ್ವಾದ ಪಡೆಯಲಿದ್ದೇವೆ ಎಂದು ಗುರುರಾಜ್ ಮತ್ತು ಗಂಗಾ ದಂಪತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಗೆ ಪಟ್ಟು ಹಿಡಿದ ಬಳ್ಳಾರಿಯ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.