ಬೆಂಗಳೂರು: ಪೋಲಿಯೋ ಸೋಂಕು ತಡೆಯುವ ನಿಟ್ಟಿನಲ್ಲಿ ಫೆ. 27ರಂದು(ಭಾನುವಾರ) ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ. ಈ ರೋಗ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟು ಮಾಡುತ್ತದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗವು ಹೆಚ್ಚಾಗಿ ಕಂಡು ಬರುತ್ತದೆ.
1988ರಲ್ಲಿ ಪ್ರತಿ ವರ್ಷ 3 ಲಕ್ಷಕ್ಕೂ ಹೆಚ್ಚು ಮಕ್ಕಳು ಬಹುತೇಕ ರಾಷ್ಟ್ರಗಳಲ್ಲಿ ಪೋಲಿಯೋ ಸೋಂಕಿನಿಂದ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದರು. ಸದ್ಯ 2 ರಾಷ್ಟ್ರಗಳಲ್ಲಿ ಮಾತ್ರ ಪೋಲಿಯೋ ಪ್ರಕರಣಗಳು ವರದಿಯಾಗುತ್ತಿವೆ. 2014ರಲ್ಲಿ ಭಾರತವು ವಿಶ್ವ ಆರೋಗ್ಯ ಸಂಸ್ಥೆಯಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿದೆ.
ಭಾರತದಲ್ಲಿ 2011ರ ನಂತರ ಯಾವುದೇ ಪ್ರಕರಣ ವರದಿಯಾಗಿಲ್ಲ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಎಂದಿನಂತೆ ಪ್ರತಿ ಶಿಶುವಿಗೆ 5 ವರಸೆ ಒಪಿವಿ(ಓರಲ್ ಪೋಲಿಯೋ ವ್ಯಾಕ್ಸಿನ್) ಮತ್ತು 2 ವರಸೆ ಐಪಿವಿ(ಇನ್‌ಜಕ್ವಬಲ್ ಪೋಲಿಯೋ ವ್ಯಾಕ್ಸಿನ್) ಲಸಿಕೆಗಳನ್ನು ನೀಡಲಾಗುತ್ತಿದೆ. ಯಾವುದೇ ಮಗುವು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಗುರಿ ಹೊಂದಲಾಗಿದೆ.
- ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ವಿವರ:
- ಗುರಿ (0-5 ವರ್ಷ) - 64,77,102 ಮಕ್ಕಳು
- ಬೂತ್‌ಗಳ ಸಂಖ್ಯೆ - 33,223
- ಮನೆ ಮನೆ ಭೇಟಿಯ ತಂಡಗಳ ಸಂಖ್ಯೆ - 45,933
- ಸಂಚಾರಿ ತಂಡ - 960
- ಟ್ರಾನ್ಸಿಟ್ ತಂಡ - 1,942
- ಲಸಿಕಾ ಕಾರ್ಯಕರ್ತರು - 1,08,881
- ಮೇಲ್ವಿಚಾರಕರು - 7,138