ಬೆಂಗಳೂರು: ರಾಜ್ಯದ 31 ಜಿಲ್ಲೆಗಳಲ್ಲಿ ಶೇಕಡಾ102 ರಷ್ಟು ಪ್ರಮಾಣದಲ್ಲಿ ಪೋಲಿಯೋ ಲಸಿಕೆ ವಿತರಿಸಲಾಗಿದೆ. 64,07,692 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು, ಆದರೆ, 0-5 ವರ್ಷದೊಳಗಿನ 65,36,244 ಮಕ್ಕಳಿಗೆ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ಪೋಲಿಯೋ ಲಸಿಕೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಜನಜಾಗೃತಿ ಮೂಡಿಸಲಾಗಿತ್ತು. ಪೋಲಿಯೋ ಮುಕ್ತ ದೇಶ ಮಾಡುವ ಉದ್ದೇಶದೊಂದಿಗೆ ಲಸಿಕಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಾಗಿದೆ.