ಬೆಂಗಳೂರು: ಪಾಲಿಕೆಯ ಕೇಂದ್ರ ಕಚೇರಿ ಕಟ್ಟಡವನ್ನು ಉನ್ನತ ದರ್ಜೆಗೇರಿಸಲು ಪಾಲಿಕೆ ಮುಂದಾಗಿದೆ. ಸುಮಾರು 100 ವರ್ಷಗಳ ಇತಿಹಾಸವಿರುವ ಪಾರಂಪರಿಕ ಕಟ್ಟಡವಾದ ಪಾಲಿಕೆಯ ಕೇಂದ್ರ ಕಚೇರಿಯ ಕಿಟಕಿಗಳನ್ನು ಹೈಟೆಕ್ಗೊಳಿಸಲು ಪಾಲಿಕೆ ನಿರ್ಧರಿಸಿದೆ. ಕೃಷ್ಣರಾಜ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಕಟ್ಟಿದ್ದ ಈ ಪಾರಂಪರಿಕ ಕೇಂದ್ರ ಕಚೇರಿಯು ತನ್ನ ನೈಜ ಸ್ವರೂಪ ಕಳೆದುಕೊಳ್ಳುತ್ತಿದೆ. ಹೊಸ ಕಿಟಕಿಗಳನ್ನು ಅಳವಡಿಸುತ್ತಿರುವುದರಿಂದ ಪಾರಂಪರಿಕ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.
1993 ರಲ್ಲಿ ಕೃಷ್ಣರಾಜ ಒಡೆಯರ್ ಈ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಟ್ಟಡಕ್ಕೆ ಮತ್ತೆ ಹಳೆಯ ಶೈಲಿಯ ಗಾಜುಗಳನ್ನು ಅಳವಡಿಸಲಿ. ಒಟ್ಟಿನಲ್ಲಿ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯಾಗಬಾರದು ಎಂದು ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಹೇಳಿದ್ದಾರೆ.
ಓದಿ : ಡಿಕೆಶಿ ಬಿಟ್ಟು ತುಂಬಾ ಜನ ನಮ್ಮೊಂದಿಗೆ ಬರುವವರಿದ್ದಾರೆ: ನಳಿನ್ ಕುಮಾರ್ ಕಟೀಲ್